ಕೋವಿಡ್​ಗೆ ಬಲಿಯಾದ ಅಮ್ಮನ ಶವವನ್ನ ಎದೆಗೆ ಆನಿಸಿಕೊಂಡೇ ಆಟೋದಲ್ಲಿ ಸಾಗಿಸಿದ ಮಗ! ಈ ದೃಶ್ಯ ಕಂಡು ಕಣ್ಣೀರಿಟ್ಟ ಪೊಲೀಸರು

corona death
Published on

ಬೆಂಗಳೂರು: ಆಂಬುಲೆನ್ಸ್ ಸಿಗದೆ ತಾಯಿಯ ಶವವನ್ನು ಬೆಂಗಳೂರಿನಂದ ಮಂಡ್ಯದವರೆಗೂ ಆಟೋದಲ್ಲೇ ಮಗ ಕೊಂಡೊಯ್ದ ಘಟನೆ ಕರೊನಾದ ಕಾರಳತೆಯನ್ನ ಮತ್ತೊಮ್ಮೆ ಬಿಚ್ಚಿಡುತ್ತಿದೆ.

ಮಹಾಮಾರಿ ಕರೊನಾ ಸೋಂಕಿಗೆ ತುತ್ತಾಗಿದ್ದ ತಾಯಿ ಶಾರದಮ್ಮ(73)ಳನ್ನು ಬದುಕಿಸಿಕೊಳ್ಳಲೇಬೇಕೆಂದು ಮಂಡ್ಯ ಜಿಲ್ಲೆ ಮಳವಳ್ಳಿಯಿಂದ ಬೆಂಗಳೂರಿಗೆ ತಾಯಿಯನ್ನ ಕರೆದುಕೊಂಡು ಮಗ ಶಿವಕುಮಾರ್​ ಬಂದಿದ್ದ. ಬೆಡ್​​ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದ. ನನ್ನ ತಾಯಿಯನ್ನ ಉಳಿಸಿಕೊಡಿ ಎಂದಿ ಅಂಗಲಾಚಿದ್ದ. ಕೊನೆಗೂ ಖಾಸಗಿ ಆಸ್ಪತ್ರೆಯೊಂದರಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಲು ದಾಖಲಿಸಿ ನಿಟ್ಟುಸಿರು ಬಿಟ್ಟನಾದರೂ ಆ ತಾಯಿ ಬದುಕಲಿಲ್ಲ.

ತಾಯಿಯನ್ನ ಕಳೆದುಕೊಂಡ ನೋವಿನಲ್ಲೇ ಶವವನ್ನು ಊರಿಗೆ ಕೊಂಡೊಯ್ಯಲು ಪರದಾಡುವ ದುಸ್ಥಿತಿ ಉಂಟಾಯಿತು. ಆಂಬುಲೆನ್ಸ್​ಗಾಗಿ ಪರದಾಡಿದರೂ ಸಿಗಲಿಲ್ಲ. ಊರಿಗೆ ಮೃತದೇಹ ಕೊಂಡಯ್ಯಲೇಬೇಕೆಂದು ಪಣತೊಟ್ಟ ಶಿವಕುಮಾರ್​. ಆಟೋ ಚಾಲಕರೊಬ್ಬರ ಬಳಿ ಅಂಗಲಾಚಿದ. ಮಾನವೀಯತೆ ಮೆರೆದ ಆಟೋ ಚಾಲಕ ಶಗ ಸಾಗಿಲು ಒಪ್ಪಿದರು.

ಕರೊನಾದಿಂದ ಶಾರದಮ್ಮ ಮೃತಪಟ್ಟಿದ್ದರೂ ಆಸ್ಪತ್ರೆಯವರು ಮೃತದೇಹಕ್ಕೆ ಪಿಪಿಇ ಕಿಟ್​ ಅನ್ನೂ ಹಾಕದೆ ಶವ ಹಸ್ತಾಂತರಿಸಿದ್ದಾರೆ. ತಾಯಿ ಶವವನ್ನು ಆಟೋದಲ್ಲಿ ಮಲಗಿಸಲು ಸಾಧ್ಯವಾಗದೆ ಕೂರಿಸಿದ್ದಾರೆ. ಆಟೋದಲ್ಲಿ ಕುಲುಕಿ ಬೀಳದಂತೆ ಅಮ್ಮನ ತಲೆಯನ್ನು ಶಿವಕುಮಾರ್​ ಎದೆಗೆ ಆನಿಸಿಕೊಂಡೇ ಪ್ರಯಾಣ ಬೆಳೆಸಿದ ದೃಶ್ಯ ಮನಕಲಕುವಂತಿತ್ತು.

ಇನ್ನು ರಾಜ್ಯಾದ್ಯಂತ ಲಾಕ್​ಡೌನ್​ ಜಾರಿಯಲ್ಲಿರುವುದರಿಂದ ಪೊಲೀಸರು ಅಲ್ಲಲ್ಲಿ ಆಟೋ ನಿಲ್ಲಿಸಿ ತಪಾಸಣೆ ಮಾಡಿದ್ದು, ಶಿವಕುಮಾರ್​ ಅಸಹಾಯಕತೆ ಕಂಡು ಅವರೂ ಮರುಗಿದ್ದಾರೆ. ಮಂಡ್ಯದಿಂದ ಮಳವಳ್ಳಿಗೆ ಪೊಲೀಸರೇ ಆಂಬುಲೆನ್ಸ್​ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net