ಕರೊನಾ ಲಸಿಕೆಯಲ್ಲೂ ಹಣ ಪೀಕಿದ ವೈದ್ಯೆ! ಈಕೆ ಬಳಿ ವ್ಯಾಕ್ಸಿನ್​ ಪಡೆದವರಿಗೆ ಇಲ್ಲಿದೆ ಶಾಕಿಂಗ್​ ನ್ಯೂಸ್

dr pushpitha
Published on

ಬೆಂಗಳೂರು: ಕರೊನಾ ಲಸಿಕೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಹೋಗಿ ವೈದ್ಯೆಯೊಬ್ಬರು ರೆಡ್ ಹ್ಯಾಂಡೆಡ್​ ಆಗಿ ಸಿಕ್ಕಿಬಿದ್ದಿದ್ದು, ಆಕೆಯನ್ನೂ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಈ ವೈದ್ಯೆ ಬಳಿ ವ್ಯಾಕ್ಸಿನ್​ ಹಾಕಿಸಿಕೊಂಡವರಿಗೆ ಶಾಕಿಂಗ್​ ನ್ಯೂಸ್​ ಬಂದಿದೆ. ವ್ಯಾಕ್ಸಿನ್ ಹಾಕಿಸಿಕೊಂಡು ಸೇಫಾದ್ವಿ ಅಂದುಕೊಂಡವರಿಗೆ ಡಿಸಿಪಿ ಹೇಳಿಕೆ ಟೆನ್ಷನ್​ ತರಿಸಿದೆ.

ಬೆಂಗಳೂರಿನ ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಪುಷ್ಪಿತಾ(25) ಮತ್ತು ಈಕೆಯ ಸಹಾಯಕಿ ಪ್ರೇಮಾ (34) ಇಬ್ಬರೂ ವ್ಯಾಕ್ಸಿನ್​ ದಂಧೆಯಲ್ಲಿ ತೊಡಗಿದ್ದರು. ಪಿಎಚ್​ಸಿಗೆ ಬರುತ್ತಿದ್ದ ಲಸಿಕೆಯನ್ನು ಕದ್ದು ಪ್ರೇಮಾಳ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸುತ್ತಿದ್ದ ಪುಷ್ಪಿತಾ, ಬಳಿಕ ಅದನ್ನು ತಲಾ 500 ರೂಪಾಯಿ ಪಡೆದು ಜನರಿಗೆ ಹಾಕುತ್ತಿದ್ದರು. ಕರೊನಾ ಲಸಿಕೆ ಅಕ್ರಮವಾಗಿ ಮಾರಾಡ ಮಾಡುತ್ತಿರುವಾಗಲೇ ಅನ್ನಪೂರ್ಣೇಶ್ವರಿನಗರ ಪೊಲೀಸರ ಕೈಗೆ ಇಬ್ಬರೂ ಸಿಕ್ಕಿಬಿದ್ದಿದ್ದರು.

ಪ್ರೇಮಾ
ಪ್ರೇಮಾ

ವೈದ್ಯೆ ಪುಷ್ಪಿತಾ ಅಕ್ರಮವಾಗಿ 53 ಜನಕ್ಕೆ ವ್ಯಾಕ್ಸಿನ್ ನೀಡಿರುವುದು ಅಧಿಕೃತವಾಗಿ ಬೆಳಕಿಗೆ ಬಂದಿದೆ. ತಲಾ 500 ರೂಪಾಯಿ ಪಡೆದು ವ್ಯಾಕ್ಸಿನ್ ನೀಡಲಾಗಿದೆ. ಹಣ ಕೊಟ್ಟು ವ್ಯಾಕ್ಸಿನ್​ ಹಾಕಿಸಿಕೊಂಡಿದ್ದರೂ ನೋ ಯೂಸ್. ವೈಯಲ್​ನಿಂದ ಇಂಜಕ್ಷನ್ ಡ್ರಾ ಮಾಡಿ ಗಂಟೆಗಳು ಕಳೆದ ಬಳಿಕ ವ್ಯಾಕ್ಸಿನ್ ನೀಡಿದ್ದು, ಈ ರೀತಿ ವ್ಯಾಕ್ಸಿನೇಷನ್ ಮಾಡಿದ್ರೆ ಪ್ರಯೋಜನವಿಲ್ಲ. ಇಂತಹ ವ್ಯಾಕ್ಸಿನ್​ ಹಾಕಿಸಿಕೊಂಡವರಿಗೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಡಿಸಿಪಿ ಡಾ.ಸಂಜೀವ್ ಪಾಟೀಲ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net