

ಬೆಂಗಳೂರು: ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯದ ಕಿಕ್ ಮತ್ತಷ್ಟು ರಂಗೇರಿದೆ. ಕೇವಲ 8 ದಿನಗಳಲ್ಲೇ 925 ಕೋಟಿ ರೂ. ಮದ್ಯ ವಹಿವಾಟು ನಡೆದಿದೆ.
ಡಿ.7ರಿಂದ ಡಿ.16ರವರೆಗೆ (ಡಿ.12 ಮತ್ತು ಡಿ.13 ರಜೆ ಇತ್ತು) 925 ಕೋಟಿ ರೂ.ಮೌಲ್ಯದ 21.41 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 8.36 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ನೀಡಿರುವ ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಡಿ.22 ಮತ್ತು ಡಿ.27ರಂದು ಎರಡು ಹಂತದಲ್ಲಿ ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ 6-8 ದಿನಗಳಲ್ಲಿ ಅಂದಾಜು ಒಂದು ಸಾವಿರ ರೂ. ಮೌಲ್ಯದ ಮದ್ಯ ವಹಿವಾಟು ನಡೆಯವ ಸಾಧ್ಯತೆ ಇದೆ.
ಈಗಾಗಲೇ ಒಬ್ಬೊಬ್ಬ ಅಭ್ಯರ್ಥಿ 2 ಲಕ್ಷ ರೂ.ವರೆಗೆ ಮದ್ಯ ಖರೀದಿಸುತ್ತಿದ್ದಾರೆ. ಕರೊನಾದಿಂದ ಆದಾಯ ನಷ್ಟ ಅನುಭವಿಸಿದ್ದ ಇಲಾಖೆಗೆ ಗ್ರಾಪಂ ಚುನಾವಣೆಯಲ್ಲಿ ಶೇಕಡವಾರು ಮದ್ಯ ಮಾರಾಟದಲ್ಲಿ ಗಣನೀಯ ಹೆಚ್ಚವಾಗಿರುವುದಲ್ಲದೆ ಆದಾಯ ಸಹ ಏರಿಕೆಯಾಗಿದೆ. ಇದರಿಂದ ಇಲಾಖೆ ಅಧಿಕಾರಿಗಳು ಫುಲ್ ಖುಷ್ ಆಗಿದ್ದಾರೆ. ಹೀಗೆ ಮದ್ಯ ಬಿಕರಿಯಾಗಲು ಚುನಾವಣೆ ಕಾವಿನ ಜತೆಗೆ ಚಳಿ ಕೂಡ ಕಾರಣ ಎನ್ನಲಾಗಿದೆ.