More

    ಸೆಕ್ಸ್​, ಬೆತ್ತಲೆ ಫೋಟೋ ಕದ್ದುಮುಚ್ಚಿ ನೋಡ್ತೀರಿ, ನನ್ನ ದೇಹಕ್ಕೆ ವಿವಾದ ಯಾಕೆ ಎಂದ ಮಿಲಿಂದ್​

    ಪಣಜಿ: ಗೋವಾದ ಬೀಚ್​ನಲ್ಲಿ ಬೆತ್ತಲೆ ಓಡಾಡಿ ಜನ್ಮದಿನ ಆಚರಿಸಿಕೊಂಡಿದ್ದ ಮಾಡೆಲ್​ ಮಿಲಿಂದ್​ ಸೋಮನ್​ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಲೇ ಇದೆ.
    55ನೇ ಜನ್ಮದಿನದ ಹಿನ್ನೆಲೆಯಲ್ಲಿ ಗೋವಾದ ಬೀಚ್​ನಲ್ಲಿ ಬೆತ್ತಲೆಯಾಗಿ ಓಡಾಡಿದ ಫೋಟೋವನ್ನು ಮಿಲಿಂದ್​ ಶೇರ್​ ಮಾಡಿದ್ದರು. ಆ ಫೋಟೋಕ್ಕೆ ಪತ್ನಿ ಫೋಟೋ ಕ್ರೆಡಿಟ್ ಎಂದೂ ಬರೆದುಕೊಂಡಿದ್ದರು. ಇದು ಮುಜುಗರಕ್ಕೀಡು ಮಾಡುವ ಫೋಟೋ ಆಗಿರುವುದಾಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

    ಗೋವಾದ ಸುರಕ್ಷಾ ಮಂಚ್​ ಮಿಲಿಂದ್​ ವಿರುದ್ಧ ದೂರು ನೀಡಿತ್ತು. ದೂರು ಪರಿಗಣಿಸಿ ಮಿಲಿಂದ್ ಸೋಮನ್​ ವಿರುದ್ಧ ಐಪಿಸಿ ಸೆಕ್ಷನ್​ 294 ಮತ್ತು 67ರ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ ಪ್ರದರ್ಶನ ಮಾಡಿದ್ದಾರೆಂದು ಎಫ್​ಐಆರ್ ದಾಖಲಿಸಿದೆ.

    ಇದರ ಹೊರತಾಗಿಯೂ ತಮ್ಮ ಇನ್​ಸ್ಟಾಗ್ರಾಂ ಖಾತೆಯಿಂದ ಮಿಲಿಂದ್​ ಬೆತ್ತಲೆ ಓಟದ ಫೋಟೋವನ್ನು ಡಿಲೀಟ್​ ಮಾಡಲಿಲ್ಲ. ಇದನ್ನು ಕೇಳಿದವರಿಗೆ ಕಡ್ಡಿ ತುಂಡು ಮಾಡಿದಂತೆ ಉತ್ತರ ನೀಡಿದ್ದಾರೆ ಮಿಲಿಂದ್​.

    ಇದರಲ್ಲಿ ಕಾಮಪ್ರಚೋದಕ ಎನ್ನುವುದು ಏನಿದೆ? ಅಸ್ತಿತ್ವದಲ್ಲಿ ಏನು ಇದೆ ಅದನ್ನೇ ನಾನು ತೋರಿಸುತ್ತಿರುವುದು, ಇಲ್ಲದ್ದದ್ದು ಏನನ್ನೂ ತೋರಿಸಿಲ್ಲ. ಲೈಂಗಿಕತೆ ಮತ್ತು ಹಿಂಸಾಚಾರವನ್ನು ತೋರಿಸಬೇಕು ಎನ್ನುವುದು ನನ್ನ ವಾದ.ಅ ಅಷ್ಟಕ್ಕೂ ಯಾರೂ ನೋಡದ್ದು, ಯಾರೂ ಮಾಡಬಾರದ್ದೇನು ನಾನು ಮಾಡಿಲ್ಲ. ಕದ್ದುಮುಚ್ಚಿ ಸೆಕ್ಸ್​, ಬೆತ್ತಲೆ ದೇಹವನ್ನು ನೋಡುವವರೇ ಹೆಚ್ಚು. ಅದನ್ನು ನಾನು ಇನ್ಸ್​ಟಾಗ್ರಾಮ್​ನಲ್ಲಿ ಹಾಕಿಕೊಂಡರೆ ತಪ್ಪೇನು ಎಂದು ಪ್ರಶ್ನಿಸಿದವರನ್ನೇ ತಿರುಗು ಪ್ರಶ್ನಿಸಿದ್ದಾರೆ ಮಿಲಿಂದ್​.

    ಇದನ್ನೂ ಓದಿ: ಮಂಗಳಮುಖಿಯಾಗಿ ಬದಲಾದ ಮಿಲಿಂದ್​ ಸೋಮನ್​; ಪತ್ನಿ ಅಂಕಿತಾ ಏನಂತಾರೆ?

    ಮ್ಯಾಗಜೀನ್​ ಒಂದಕ್ಕೆ ಇದೇ ಬೆತ್ತಲೆ ದೇಹದ ಫೋಟೋವನ್ನು ಕವರ್​ ಪೇಜ್​ಗೆ ನೀಡಿದ್ದು ಅದು ಪ್ರಕಟವಾಗಿದೆ. ಅದನ್ನೇ ನಾನು ನನ್ನ ಇನ್​ಸ್ಟಾಗ್ರಾಂನಲ್ಲಿಯೂ ಹಂಚಿಕೊಂಡಿದ್ದೇನೆ. ಇದರಲ್ಲಿ ತಪ್ಪು ಎಂದು ಏನೂ ನನಗೆ ಅನ್ನಿಸುವುದಿಲ್ಲ. ಅದಕ್ಕಾಗಿ ಯಾರು ಏನು ಹೇಳಿದರೂ ನಾನದನ್ನು ಡಿಲೀಟ್​ ಮಾಡುವುದಿಲ್ಲ ಎಂದಿದ್ದಾರೆ.

    ‘ಸೆಕ್ಸ್ ಎನ್ನುವುದು ಪ್ರದರ್ಶನ ಮಾಡುತ್ತಿದ್ದರೆ, ನಿಮಗೆ ಇಷ್ಟ ಇದ್ದರೆ ನೋಡಿ, ಇಲ್ಲದಿದ್ದರೆ ನೋಡಬೇಡಿ. ಅದೇ ರೀತಿ ನನ್ನ ಫೋಟೋ ನೋಡಬೇಕು ಎನ್ನಿಸಿದರೆ ನೋಡಿ, ಇಲ್ಲದಿದ್ದರೆ ಇಲ್ಲ. ಅದನ್ನು ದೊಡ್ಡ ಇಶ್ಯು ಮಾಡುವುದು ಏನಿದೆ? ನೋಡಬೇಕೋ ಬೇಡವೋ ಎನ್ನುವುದು ನಿಮ್ಮ ಆಯ್ಕೆ. ನಿಮಗೆ ಹಿಂಸಾಚಾರ ಇಷ್ಟ ಎಂದರೆ ಅದನ್ನು ನೋಡುತ್ತೀರಿ, ರಕ್ತ ಇಷ್ಟ ಎಂದರೆ ಅದನ್ನೇ ಹುಡುಕುತ್ತೀರಿ, ಸೆಕ್ಸ್​, ಕಾಮಪ್ರಚೋದಕಗಳು ಇಷ್ಟ ಎಂದರೆ ಅದನ್ನು ನೋಡುತ್ತೀರಿ. ಯಾವುದೂ ಇಷ್ಟವಿಲ್ಲ ಎಂದರೆ ನಿಮಗೆ ಏನು ಇಷ್ಟವೋ ಅದನ್ನು ನೋಡುತ್ತೀರಿ. ನೀವು ನನ್ನ ಫೋಟೋ ನೋಡಿದ್ದೀರಿ ಎಂದರೆ ನಿಮಗೆ ಅದು ಇಷ್ಟವಾಗಿದೆ ಎಂದರ್ಥ, ಇನ್ಯಾಕೆ ವಿವಾದ ಮಾಡುವುದು ಎಂದು ಪ್ರಶ್ನಿಸಿದ್ದಾರೆ.

    ಬೆರಳ ತುದಿಯ ಕ್ಲಿಕ್​ನಲ್ಲಿ ಇಂಟರ್​ನೆಟ್​ನಲ್ಲಿ ಈಗ ಎಲ್ಲವೂ ಲಭ್ಯವಿದೆ. ಅಲ್ಲಿ ನೀವು ಎಷ್ಟೊಂದು ಇಂಥ ಫೋಟೋಗಳಿಗಾಗಿ ಹುಡುಕಾಡಿಲ್ಲ. ಹ್ಯಾಶ್​ಟ್ಯಾಗ್​ ಹಾಕಿ ಬೆತ್ತಲೆದೇಹದ ಕುರಿತು ಎಷ್ಟು ಮಂದಿ ಹುಡುಕಾಡಿಲ್ಲ, ಹಾಗೆ ಮಾಡಿದರೆ ಇಂಥ ಸಹಸ್ರಾರು ಫೋಟೋಗಳು ಕಾಣಿಸುತ್ತವೆ. ನಿಮಗೆ ಇಷ್ಟ ಎನಿಸಿದಾಗ ನೀವು ಹುಡುಕಿದಾಗ ನಿಮಗೆ ಈ ಫೋಟೋ ಕಾಣಿಸುತ್ತದೆ. ಅಂದರೆ ಇಷ್ಟಪಟ್ಟು ನೋಡಿದ್ದೀರಿ ಎಂದರ್ಥ ಎಂದು ವಿವಾದ ಸೃಷ್ಟಿಸುತ್ತಿರುವವರ ತಲೆಗೆ ಹೊಡೆದಂತೆ ಮಿಲಿಂದ್​ ಉತ್ತರಿಸಿದ್ದಾರೆ.

    ಎಲ್ಲವನ್ನೂ ಒಪ್ಪಿಸಿ ನಂತ್ರ ರೇಪ್​ಕೇಸ್​ ಹಾಕಿದ್ರೆ ಪ್ರಯೋಜನವಾಗಲ್ಲ- ಹೈಕೋರ್ಟ್​ನ ಈ ತೀರ್ಪು ನೋಡಿ…

    ಉನ್ನತ ಹುದ್ದೆಗಳಿಗೆ ಹೆಚ್ಚು ಮಹಿಳೆಯರನ್ನು ನೇಮಕ ಮಾಡಿಕೊಂಡಿದ್ದಕ್ಕೆ ₹66 ಲಕ್ಷ ದಂಡ!

    ಲೆದರ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ನಲ್ಲಿ 31 ಹುದ್ದೆಗಳಿಗೆ ನೇರ ಸಂದರ್ಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts