More

    ಮಂಗಳಮುಖಿಯಾಗಿ ಬದಲಾದ ಮಿಲಿಂದ್​ ಸೋಮನ್​; ಪತ್ನಿ ಅಂಕಿತಾ ಏನಂತಾರೆ?

    ಮುಂಬೈ: ಬಾಲಿವುಡ್​ನ ಪ್ರಸಿದ್ಧ ನಟ ಅಕ್ಷಯ್​ ಕುಮಾರ್​ ಲಕ್ಷ್ಮೀಯಾಗಿ ನಿನ್ನೆಯಷ್ಟೇ ತೆರೆ ಮೇಲೆ ಬಂದಿದ್ದಾರೆ. ಮಂಗಳಮುಖಿಯ ಪಾತ್ರದಲ್ಲಿ ನಟಿಸಿರುವ ಅಕ್ಷಯ್​ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರ ಬೆನ್ನಲ್ಲೇ ಬಾಲಿವುಡ್​ನ ಫಿಟ್​ ಮ್ಯಾನ್​ ಮಿಲಿಂದ್​ ಸೋಮನ್​ ಇದೀಗ ಮಂಗಳಮುಖಿಯಾಗಿ ಬದಲಾಗಿದ್ದಾರೆ.

    ಇದನ್ನೂ ಓದಿ: ಗುಜರಾತ್​ನಲ್ಲಿ 100% ಮಧ್ಯಪ್ರದೇಶದಲ್ಲಿ 80% ಅರಳುತಿದೆ ಕಮಲ

    ಮುಖದ ತುಂಬಾ ಕುಂಕುಮ. ಕಣ್ಣಿಗೆ ಗಾಢ ಕಾಡಿಗೆ. ಮೂಗಿಗೆ ದೊಡ್ಡದೊಂದು ಮೂಗುಬೊಟ್ಟು. ಇದು ಮಂಗಳಮುಖಿಯಾಗಿ ಬದಲಾಗಿರುವ ಮಿಲಿಂದ್ ಅವರ ವೇಷ. ಇಂತದ್ದೊಂದು ವಿಶೇಷ ಫೋಟೋವನ್ನು ಮಿಲಿಂದ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಟ್ರಾವೆಲ್​ ಮಂಗಳವಾರ! ಈಗ ಹೋಳಿ ಹಬ್ಬವಿಲ್ಲ ಎಂದು ನನಗೆ ಗೊತ್ತು. ಆದರೆ ನಾನು ಮುಂಬೈ ಕರ್ಜಾತ್​ನಲ್ಲಿದ್ದಾಗ ಇಂತಹ ಹಾಸ್ಯಮಯ ಸಮಯವನ್ನು ಕಳೆದಿದ್ದೇನೆ. ಇನ್ನಷ್ಟು ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಈಗ ಚೆನ್ನೈಗೆ ತೆರಳುತ್ತಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ.

    ಮಿಲಿಂದ್​ ಈ ಫೋಟೋವನ್ನು ಹಂಚಿಕೊಂಡ ತಕ್ಷಣ ಪತ್ನಿ ಅಂಕಿತಾ ಪ್ರತಿಕ್ರಿಯಿಸಿದ್ದಾರೆ. “ಕಮಾಲ್​” ಎಂದು ಫೋಟೋ ಮತ್ತು ತನ್ನ ಪತಿಗೆ ಹೊಗಳಿದ್ದಾರೆ. ಕೇವಲ ಅಂಕಿತಾ ಮಾತ್ರವಲ್ಲದೆ ಸಾವಿರಾರು ಜನರು ಮಿಲಿಂದ್​ ಅವರ ಫೋಟೋವನ್ನು ಮೆಚ್ಚಿಕೊಂಡಿದ್ದಾರೆ.

    ಇದನ್ನೂ ಓದಿ: ಚಿನ್ನದಂಥಾ ದೇಶಭಕ್ತಿ ಈ ನಿಶಿಗಂಧಾರದ್ದು; ಭಾರತೀಯ ಸೇನೆಗೆ 20 ಲಕ್ಷ ರೂ.ಮೌಲ್ಯದ ಆಭರಣಗಳ ದೇಣಿಗೆ

    ಅಕ್ಷಯ್​ ಕುಮಾರ್​ ಅವರ ಲಕ್ಷ್ಮೀ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಮಿಲಿಂದ್​ ಈ ರೀತಿಯ ಫೋಟೊ ಹಾಕಿರುವುದು ಅನೇಕರ ಕುತೂಹಲಕ್ಕೆ ಕಾರಣವಾಗಿದೆ. ನೀವೇನಾದರೂ ಲಕ್ಷ್ಮೀ ಸಿನಿಮಾದಲ್ಲಿ ನಟಿಸಿದ್ದೀರಾ ಎಂದು ಪ್ರಶ್ನೆ ಕೇಳಲಾರಂಭಿಸಿದ್ದಾರೆ. (ಏಜೆನ್ಸೀಸ್​)

    ಅರ್ನಬ್​ಗೆ ಸುತ್ತಿಕೊಂಡ ಆತ್ಮಹತ್ಯೆ ಪ್ರಕರಣ- ಸಾವಿನ ತನಿಖೆಗೆ ಕೋರಿ ಅರ್ಜಿ- ನೋಟಿಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts