More

    3 ಸಾವಿರ ಕೋಟಿ ಬೆಲೆಯ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಗುತ್ತಿಗೆ ನೀಡಲು ಕಾಂಗ್ರೆಸ್ ಸರ್ಕಾರ ಹುನ್ನಾರ: ವಿರೋಧ ಪಕ್ಷದ ನಾಯಕ ಅಶೋಕ್

    ಬೆಂಗಳೂರು:
    ಸುಮಾರು 3 ಸಾವಿರ ಕೋಟಿ ಬೆಲೆಯ ಬಿಡಿಎ ಕಾಂಪ್ಲೆಕ್ಸ್‌ಗಳನ್ನು 200 ಕೋಟಿ ರೂ ಕಿಕ್ ಬ್ಯಾಕ್ ಪಡೆದು ಖಾಸಗಿಯವರಿಗೆ ಗುತ್ತಿಗೆ ಕೊಡಲು ಸರ್ಕಾರ ಪರೋಕ್ಷವಾಗಿ ಮಾರಾಟ ಮಾಡಲು ಮುಂದಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ನೀಡುವ ಕ್ರಮವನ್ನು ಬಿಎಜಪಿ ಪ್ರಬಲವಾಗಿ ವಿರೋಧಿಸುತ್ತದೆ. ಈ ಬಗ್ಗೆ ಬೀದಿಗಿಳಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
    ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಈ ಕಡತ ಬಂದಿತ್ತು. ನಾನು ಆಗ ಸಚಿವನಾಗಿದ್ದ ಕಾರಣ, ಇದು ಲೂಟಿ ಹೊಡೆಯುವ ಸ್ಕೀಂ ಎಂದು ತಿಳಿಸಿ ರದ್ದು ಮಾಡಿಸಿದ್ದೆ. ಮತ್ತೆ ಈ ಮಾಫಿಯಾವು ಬಸವರಾಜ ಬೊಮ್ಮಾಯಿಯವರ ಮುಂದೆ ಈ ಕಡತವನ್ನು ತಂದಿತ್ತು. ಆಗಲೂ ಅವಕಾಶ ಕೊಟ್ಟಿರಲಿಲ್ಲ ಎಂದರು.
    ಎಚ್‌ಎಸ್‌ಆರ್ ಲೇ ಔಟ್, ಆಸ್ಟಿನ್ ಟೌನ್, ಕೋರಮಂಗಲ, ವಿಜಯನಗರ, ಆರ್.ಟಿ.ನಗರ, ಸದಾಶಿವನಗರದ ಬಿಡಿಎ ಸ್ವತ್ತುಗಳನ್ನು ಗುತ್ತಿಗೆ ನೀಡಲು ಸರ್ಕಾರ ತುದಿಗಾಲಿನಲ್ಲಿ ನಿಂತಿದೆ. ಇದೇನೂ ಕಾಂಗ್ರೆಸ್ಸಿಗರ ಅಪ್ಪನ ಆಸ್ತಿ ಅಲ್ಲ ಎಂದರು.
    2013-18ರಲ್ಲಿ ಇದೇ ಮಾದರಿಯ ಯೋಜನೆ ಜಾರಿಗೊಳಿಸಲು ಕಾಂಗ್ರೆಸ್ ಮುಂದಾಗಿತ್ತು. ಆಗಲೂ ಈ ನುಂಗಣ್ಣಗಳ ವಿರುದ್ದವಾಗಿ ಬೆಂಗಳೂರಿನ ಜನರು ಪ್ರತಿಭಟನೆ ಮಾಡಿದ್ದರು. ಮಡಿವಾಳದ ಆಸ್ತಿ ಕಾಂಗ್ರೆಸ್ ನಾಯಕರ ಪಾಲಾದಂತೆ ಇದು ಕೂಡ ಆಗಬಾರದೆಂದು ಜನರು ಹೋರಾಟ ಆರಂಭಿಸಿದ್ದಾರೆ ಎಂದರು.
    ಎಚ್‌ಎಸ್‌ಆರ್‌ನಲ್ಲಿ ಸತೀಶ್‌ರೆಡ್ಡಿಯವರ ನೇತೃತ್ವದಲ್ಲಿ ಪ್ರತಿಭಟನೆಗೆ ಜನರು ಮುಂದಾಗಿದ್ದಾರೆ. ಸರ್ಕಾರ ಪಾಪರ್ ಆಗಿದ್ದರೆ ಬೇರೆ ಆದಾಯ ಮೂಲಗಳನ್ನು ಹುಡುಕಬೇಕು. ಸರ್ಕಾರಿ ಆಸ್ತಿ ನುಂಗಿ ನೀರು ಕುಡಿಯಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಟೆಂಡರ್ ಪ್ರಸ್ತಾಪವವನ್ನು ರದ್ದು ಮಾಡಬೇಕು. ಇಲ್ಲವಾದರೆ ವಿಧಾನಸಭೆ ಒಳಗೆ ಮತ್ತು ಹೊರಗಡೆ ಹೋರಾಟ ನಡೆಸುತ್ತೇವೆ ಎಂದರು.
    ಬಿಡಿಎ ಕಾಂಪ್ಲೆಕ್ಸ್ ಟೆಂಡರ್ ಮಾಡಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರಿಗೆ ಕಪ್ಪ ಕೊಡಲು ಕಾಂಗ್ರೆಸ್ ಸರ್ಕಾರ ಹೊರಟಂತಿದೆ ಎಂದು ದೂರಿದರು.
    ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಳವಿಕ ಅವಿನಾಶ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಬಾಕ್ಸ್

    ರೈತರಿಗೆ ಪರಿಹಾರ ನಿಮ್ಮ ಪಾಲೂ ಹಾಕಿ:
    ಕೇಂದ್ರದಿಂದ ಬಂದಿರುವ ಹಣವನ್ನು ರೈತರ ಅಕೌಂಟ್‌ಗೆ ಹಾಕುತ್ತಿದ್ದೀರಿ. ಕೊಟ್ಟಿರುವ 2 ಸಾವಿರ ಹಣದಲ್ಲಿ ಮುರಿದುಕೊಳ್ಳಬೇಡಿ. ಅದರಲ್ಲಿ ರಾಜ್ಯ ಸರ್ಕಾರದ ಪಾಲು ಎಷ್ಟು? ನೀವು ಎಷ್ಟು ರೈತರಿಗೆ ಕೊಟ್ಟಿದ್ದೀರಿ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts