ಮಿಂಚಿನ ಹೊಡೆತಕ್ಕೆ 74 ಮಂದಿ ಸಾವು; ಇತ್ತೀಚಿನ ದಿನಗಳಲ್ಲೇ ಇದು ದೊಡ್ಡ ಆಘಾತ!

Untitled-1
Published on

ನವದೆಹಲಿ: ದೇಶದ ಕೆಲವು ಭಾಗಗಳಲ್ಲಿ ಜನರು ಹೊರಗೆ ಬರಲು ಹೆದರುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲೇ ಅತ್ಯಂತ ದೊಡ್ಡ ಆಘಾತ ಎಂಬಂಥ ಮಿಂಚಿನ ಹೊಡೆತಕ್ಕೆ ಒಟ್ಟು 74 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲೇ ಇಷ್ಟೊಂದು ಸಾವುಗಳು ಸಂಭವಿಸಿವೆ.

ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಈ ದುರಂತ ಸಂಭವಿಸಿದ್ದು, ಅತ್ಯಧಿಕ ಸಾವು ಉತ್ತರಪ್ರದೇಶದಲ್ಲಿ ಆಗಿದೆ. ಆಯಾ ರಾಜ್ಯಗಳ ಅಧಿಕೃತ ಮಾಹಿತಿ ಇದನ್ನು ದೃಢಪಡಿಸಿದೆ. ಜೈಪುರದ ಅಮೇರ್​ ಫೋರ್ಟ್ ಬಳಿ ಭಾನುವಾರ ಪಂಜಾಬ್​ನಿಂದ ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದ 11 ಪ್ರವಾಸಿಗರು ಮಿಂಚಿನ ಹೊಡೆತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ.

ಉತ್ತರಪ್ರದೇಶದ 16 ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಒಟ್ಟು 41 ಮಂದಿ ಮಿಂಚಿನ ಹೊಡೆತಕ್ಕೆ ಬಲಿಯಾಗಿದ್ದಾರೆ. ಮಾತ್ರವಲ್ಲ 30 ಮಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ 250 ಪ್ರಾಣಿಗಳು ಕೂಡ ಜೀವ ಕಳೆದುಕೊಂಡಿದ್ದು, 20 ಗಾಯಗೊಂಡಿವೆ ಎಂದು ಯುಪಿ ರಿಲೀಫ್ ಕಮಿಷನರ್​ ರಣ್​ವೀರ್ ಪ್ರಸಾದ್ ತಿಳಿಸಿದ್ದಾರೆ. ಮಿಂಚಿನ ಹೊಡೆತದಿಂದ ಸಾವಿಗೀಡಾದವರ ಕುಟುಂಬಕ್ಕೆ ತಲಾ 2 ಲಕ್ಷ ರೂ., ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಧನವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net