More

    ಅಪರಾಧ ನಡೆದ ಸ್ಥಳಕ್ಕೆ ಇನ್ನು ಇವರು ಬರಲಿದ್ದಾರೆ; ಇದು ದೇಶದಲ್ಲೇ ಮೊದಲು!

    ಬೆಂಗಳೂರು: ಇನ್ನೇನಾದರೂ ಗುರುತರ ಅಪರಾಧ ನಡೆದ ಸಂದರ್ಭದಲ್ಲಿ ಇವರು ಸ್ಥಳಕ್ಕೆ ಬರಲಿದ್ದಾರೆ. ಅಂದಹಾಗೆ ಇಂಥದ್ದೊಂದು ಬೆಳವಣಿಗೆ ದೇಶದಲ್ಲೇ ಮೊದಲಾಗಿದ್ದು, ನಾಳೆಯಿಂದಲೇ ಇದಕ್ಕೆ ಚಾಲನೆ ಸಿಗಲಿದೆ.
    ದೇಶದ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ ಸಲ ಎಂಬಂತೆ ಕರ್ನಾಟಕ ಗೃಹ ಇಲಾಖೆ ‘ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ’ (ಸೀನ್​ ಆಫ್​ ಕ್ರೈಮ್ ಆಫೀಸರ್​) ಹುದ್ದೆಯನ್ನು ಸೃಷ್ಟಿಸಿದೆ. ಇವರು ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ನಿಯೋಜಿಸಿದ ನುರಿತ ಹಾಗೂ ಪರಿಣತರಾಗಿರುತ್ತಾರೆ. ಹೊಸದಾಗಿ ಸೃಜಿಸಲಾಗಿರುವ ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಜುಲೈ 13ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಸ್ತಾಂತರಿಸಲಿದ್ದಾರೆ. ಪ್ರಥಮ ಹಂತದಲ್ಲಿ 206 ನುರಿತ ಅಧಿಕಾರಿಗಳ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.

    ಇದನ್ನೂ ಓದಿ: ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ಯಾವುದಾದರೂ ಅಪರಾಧ ಕೃತ್ಯ ನಡೆದ ತಕ್ಷಣ ಘಟನಾ ಸ್ಥಳಕ್ಕೆ ಹೋಗಿ ಅಲ್ಲಿರುವಂತಹ ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಸಂರಕ್ಷಿಸಲು ಈ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದುವರೆಗೆ ಈ ಕೆಲಸವನ್ನು ಸ್ಥಳೀಯ ಅಧಿಕಾರಿಗಳು ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಮೊದಲ ಹಂತದಲ್ಲಿ ಗಂಭೀರ ಸ್ವರೂಪದ ಅಪರಾಧಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿಶೇಷ ತರಬೇತಿ ಪಡೆದ ಈ ತಂಡ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಮೊದಲು ಭೇಟಿ ನೀಡಲಿದೆ.

    ಆ ಸ್ಥಳದಲ್ಲಿನ ಎಲ್ಲ ಸಾಕ್ಷ್ಯಾಧಾರಗಳನ್ನು ಸಂರಕ್ಷಣೆ ಮಾಡುವುದು, ಆ ನಂತರ ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡುವುದು, ತನಿಖಾಧಿಕಾರಿಗೆ ಆ ಸಾಕ್ಷ್ಯಾಧಾರಗಳನ್ನು ಒದಗಿಸುವುದು ಸೇರಿ ಇತರ ಅವಶ್ಯ ಕರ್ತವ್ಯಗಳನ್ನು ಮಾಡುತ್ತ ಅಪರಾಧಿಗಳನ್ನು ಅತ್ಯಂತ ಶೀಘ್ರದಲ್ಲಿ ಪತ್ತೆ ಮಾಡಲು ಮೂಲಭೂತವಾಗಿ ಬೇಕಾಗುವ ಎಲ್ಲ ಕಾರ್ಯಗಳನ್ನು ಈ ಅಧಿಕಾರಿಗಳು ಮಾಡುತ್ತಾರೆ. ಇದರಿಂದ ಅಪರಾಧಿಗಳ ಪತ್ತೆ ಮತ್ತು ಅಪರಾಧ ನಿಯಂತ್ರಣ ಸಾಧ್ಯವಾಗಲಿದ್ದು, ಈ ವ್ಯವಸ್ಥೆ ಪ್ರಮುಖವಾಗಿ ವಿದೇಶಗಳಲ್ಲಿ ಹೆಚ್ಚಾಗಿ ಇದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಇದನ್ನೂ ಓದಿ: ಕೋವಿಡ್​ನಿಂದ ಸತ್ತ 75 ದಿನಗಳ ಬಳಿಕ ನಡೆಯಿತು ಶವಸಂಸ್ಕಾರ; ಹಣಕ್ಕಾಗಿ ಹೆಣ ಇಟ್ಕೊಂಡ್ರಾ?

    ಪೊಲೀಸರ ಆರೋಗ್ಯ ಕಾಪಾಡುವ ಆರೋಗ್ಯ ಭಾಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಇರುವ ಕೈಪಿಡಿಯನ್ನು ಪೊಲೀಸ್ ಸಿಬ್ಬಂದಿಗೆ ನೀಡಲು ಮುಖ್ಯಮಂತ್ರಿಗಳು ನಾಳೆ ಬಿಡುಗಡೆ ಮಾಡಲಿದ್ದಾರೆ. ಅದೇ ರೀತಿ ಪೊಲೀಸರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ವಿದ್ಯಾನಿಧಿ-2 ಯೋಜನೆಗೆ ಕೂಡ ಸಿಎಂ ನಾಳೆ ಚಾಲನೆ ಕೊಡಲಿದ್ದಾರೆ. ಜತೆಗೆ ಅಗ್ನಿಶಾಮಕ ದಳ, ಗೃಹರಕ್ಷಕ ದಳ ಹಾಗೂ ಇತರ ಪೊಲೀಸ್ ಸೇವಾ ಪದಕಗಳನ್ನು ಸಿಎಂ ಪ್ರದಾನ ಮಾಡಲಿದ್ದಾರೆ.

    ಇದು ಕರೊನಾ ಲಸಿಕೆ ಇನ್ನೂ ಪಡೆಯದವರು ಓದಲೇಬೇಕಾದ ವಿಷಯ: ಹೊರಬಿತ್ತು ಮತ್ತೊಂದು ಅಧ್ಯಯನ ವರದಿ

    ಸೂಟು-ಬೂಟು​ ಹಾಕೊಂಡು ಬಂದ, ಮನೆಯವರು ಒಳಗಿರುವಾಗಲೇ ಲ್ಯಾಪ್​ಟಾಪ್​ ಕದ್ದೊಯ್ದ!

    ಕರೊನಾ ಸೋಂಕಿತರು ಸಾಕುಪ್ರಾಣಿಗಳಿಂದಲೂ ದೂರವಿರಬೇಕು!; ಇನ್ನೇನು ಹೇಳುತ್ತೆ ಈ ಅಧ್ಯಯನ?

    ಬರೋಬ್ಬರಿ 2,500 ಕೋಟಿ ರೂ. ಮೊತ್ತದ ಮಾದಕವಸ್ತು ವಶ!; ರಾಜಧಾನಿಯ ಇತಿಹಾಸದಲ್ಲೇ ಅತ್ಯಧಿಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts