More

    ಕೋವಿಡ್​ನಿಂದ ಸತ್ತ 75 ದಿನಗಳ ಬಳಿಕ ನಡೆಯಿತು ಶವಸಂಸ್ಕಾರ; ಹಣಕ್ಕಾಗಿ ಹೆಣ ಇಟ್ಕೊಂಡ್ರಾ?

    ನವದೆಹಲಿ: ಇಲ್ಲೊಬ್ಬ ವ್ಯಕ್ತಿ ಕೋವಿಡ್​-19 ಸೋಂಕಿಗೆ ಒಳಗಾಗಿ ಮೃತಪಟ್ಟು ಎರಡೂವರೆ ತಿಂಗಳ ಬಳಿಕ ಶವಸಂಸ್ಕಾರ ನಡೆದಿದೆ. ಕೊನೆಗೂ ಪತಿ ಸತ್ತ 75 ದಿನಗಳ ಬಳಿಕ ಅಂತಿಮಸಂಸ್ಕಾರ ನಡೆದಿದ್ದರಿಂದ, ಎರಡು ಮಕ್ಕಳ ತಾಯಿಯಾಗಿರುವ ಪತ್ನಿ ನಿಟ್ಟುಸಿರುಬಿಟ್ಟಿದ್ದಾಳೆ.

    28 ವರ್ಷದ ನರೇಶ್​ ಎಂಬ ಈ ವ್ಯಕ್ತಿ ಏಪ್ರಿಲ್ 10ರಂದು ಕೋವಿಡ್​-19 ಪಾಸಿಟಿವ್ ಆಗಿರುವುದು ದೃಢಪಟ್ಟಿತ್ತು. ಬಳಿಕ ಈತ ಉತ್ತರಪ್ರದೇಶದ ಹಪುರ್​ನ ಆಸ್ಪತ್ರೆಗೆ ದಾಖಲಾಗಿದ್ದ. ನಂತರ ಅಲ್ಲಿಂದ ಮೀರತ್​ನ ಲಾಲಾ ಲಜಪತ್ ರಾಯ್​ ಸ್ಮಾರಕ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಏಪ್ರಿಲ್ 15ರಂದು ಸಾವಿಗೀಡಾಗಿದ್ದಾನೆ. ಆಸ್ಪತ್ರೆಗೆ ತೆರಳಿ ಪಾರ್ಥಿವ ಶರೀರವನ್ನು ಕೇಳಿದರೆ, 15,000 ಪಾವತಿಸದೆ ಕೊಡುವುದಿಲ್ಲ ಎಂದು ವೈದ್ಯರು ಹೇಳಿದ್ದಾಗಿ ಪತ್ನಿ ಗುಡಿಯಾ ಆರೋಪಿಸಿದ್ದಾಳೆ. ಅಲ್ಲದೆ ಅಷ್ಟು ಹಣ ತನ್ನಲ್ಲಿರದ್ದರಿಂದ ವಾಪಸ್ ಬಂದಿದ್ದಾಗಿ ಹೇಳಿದ್ದಾಳೆ.

    ಇದನ್ನೂ ಓದಿ: ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?

    ಆದರೆ ಆಸ್ಪತ್ರೆ ವೈದ್ಯರು ಈ ಆರೋಪವನ್ನು ನಿರಾಕರಿಸಿದ್ದಾರೆ. ಹೆಣ ಕೊಡಲು ಹಣ ಕೇಳಿದ್ದಾರೆ ಎಂಬುದು ಸುಳ್ಳು. ಶವದ ಕುರಿತು ಯಾರೂ ವಾರಸುದಾರಿಕೆ ತೋರದ್ದರಿಂದ ಹಾಗೂ ಇಲ್ಲಿ ಸ್ಥಳಾವಕಾಶ ಕಡಿಮೆ ಇದ್ದಿದ್ದರಿಂದ ಅದನ್ನು ಜಿಎಸ್​ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ನಂತರ ಪೊಲೀಸರ ಸಹಾಯದಿಂದ ಸಂಬಂಧಿಕರನ್ನು ಸಂಪರ್ಕಿಸಿ ಶವಸಂಸ್ಕಾರ ನಡೆಸಲಾಗಿದೆ ಎಂದು ಶವಾಗಾರ ನಿರ್ವಾಹಕರು ಮಾಹಿತಿ ನೀಡಿದ್ದಾರೆ. ಕೊನೆಗೂ ಜುಲೈ 2ರಂದು ಪತಿಯ ಶವಸಂಸ್ಕಾರ ನಡೆದಿದೆ ಎಂದು ಗುಡಿಯಾ ತಿಳಿಸಿದ್ದಾಳೆ. (ಏಜೆನ್ಸೀಸ್)

    ನೋಡಿ ಈ ತತ್ತಿಚಿತ್ರ; ಇವನದ್ದು ಒಂದು ಮೊಟ್ಟೆಯ ಕಥೆಯಲ್ಲ…

    ಒಂದೇ ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು!; ಅಚ್ಚರಿ ಮೂಡಿಸುತ್ತಿದೆ 15 ವರ್ಷಗಳ ಈ ಮರ..

    ಮನೆಯೊಳಗೇ ಮಕ್ಕಳಿಬ್ಬರ ಅನುಮಾನಾಸ್ಪದ ಸಾವು!: ಹದಿಹರೆಯದ ಪುತ್ರ-ಪುತ್ರಿ ಇನ್ನಿಲ್ಲ..

    ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!

    ಮಹಿಳಾ ಪೊಲೀಸರಿಗೇ ಲೈಂಗಿಕ ಕಿರುಕುಳ ಕೊಟ್ಟ; ಮಾಸ್ಕ್ ಹಾಕಿಲ್ಲ ಎಂದು ತಡೆದಿದ್ದಕ್ಕೆ ಪೀಡಿಸಿದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts