ನವದೆಹಲಿ: ಒಂದು ಮಾವಿನ ಮರದಲ್ಲಿ ಒಂದೇ ತಳಿಯ ಮಾವಿನ ಹಣ್ಣುಗಳು ಕಾಣಿಸಿಕೊಳ್ಳುವುದು ಸಹಜ ಹಾಗೂ ಸರ್ವೇಸಾಮಾನ್ಯ ಸಂಗತಿ. ಆದರೆ ಇಲ್ಲೊಂದು ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು ಕಾಣಸಿಗುತ್ತವೆ. ಆದ್ದರಿಂದ ಈ ಮಾವಿನ ಮರ ಅಚ್ಚರಿಯ ಹಾಗೂ ಆಕರ್ಷಣೆಯ ಕೇಂದ್ರವಾಗಿದೆ.
ಹದಿನೈದು ವರ್ಷಗಳ ಈ ಮಾವಿನ ಮರದಲ್ಲಿ ತೋಟಗಾರಿಕಾ ಪರಿಣತರು ಕಳೆದ ಐದು ವರ್ಷಗಳಿಂದ ಇಂಥದ್ದೊಂದು ಪ್ರಯೋಗ ನಡೆಸಿದ್ದು, ಇದೀಗ 121 ಬಗೆಯ ಹಣ್ಣುಗಳನ್ನು ಒಂದೇ ಮರದಲ್ಲಿ ಕಾಣಲು ಸಾಧ್ಯವಾಗುವಂತಾಗಿದೆ. ಉತ್ತರಪ್ರದೇಶದ ಸಹರನ್ಪುರ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಯೋಗ ನಡೆದಿದೆ.
ಇದನ್ನೂ ಓದಿ: ಸೀಟ್ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ
ತೋಟಗಾರಿಕಾ ಪ್ರಯೋಗ ಹಾಗೂ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ರಾಜೇಶ್ ಪ್ರಸಾದ್ ಅವರು 121 ಬಗೆಯ ಮಾವಿನ ಗಿಡದ ರೆಂಬೆಗಳನ್ನು ಒಂದೇ ಮರಕ್ಕೆ ಕಸಿ ಮಾಡುವ ಮೂಲಕ ಹೀಗೊಂದು ಅಚ್ಚರಿಗೆ ಕಾರಣವಾಗಿದ್ದಾರೆ. ಈ ರೀತಿಯ ಕಸಿ ಮಾಡಿ ಆ ಮರದ ಆರೈಕೆಗೆ ವಿಶೇಷ ಗಮನ ನೀಡಲಾಗಿದೆ. ಪರಿಣಾಮವಾಗಿ ನೂರಕ್ಕೂ ಅಧಿಕ ಬಗೆಯ ಮಾವಿನಹಣ್ಣುಗಳು ಒಂದೇ ತಳಿಯ ಮಾವಿನ ಮರದಲ್ಲಿ ಸಿಗುವಂತಾಗಿದೆ. (ಏಜೆನ್ಸೀಸ್)
Saharanpur | Horticulturists grow 121 varieties of mangoes in single tree through grafting
We're working on new species so that better varieties of mangoes can be produced. People can also use this technique: Bhanu Prakash Ram, Joint Director, Horticulture & Training Centre pic.twitter.com/eOCLwLZa1J
— ANI UP (@ANINewsUP) June 30, 2021
ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!
ಹತ್ತು ದಿನಗಳ ಒಳಗೆ ಏನಂತ ಹೇಳಿ; ಟ್ವಿಟರ್ಗೆ ರಾಷ್ಟ್ರೀಯ ಮಹಿಳಾ ಆಯೋಗದ ತಾಕೀತು
ಕೆಥೊಲಿಕ್ ಪಾದ್ರಿಗಳ ಸೆಕ್ಸ್ ಸ್ಕ್ಯಾಂಡಲ್: 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!
ನಾಪತ್ತೆಯಾದ ಹದಿನಾಲ್ಕರ ಹುಡುಗಿ 2 ವರ್ಷಗಳ ಬಳಿಕ 4 ತಿಂಗಳ ಮಗುವಿನೊಂದಿಗೆ ಪತ್ತೆಯಾದಳು!
ಜೊಮ್ಯಾಟೋ ಡೆಲಿವರಿ ಯುವಕನಿಗೆ ಬೈಕ್ ಕೊಡುಗೆಯಾಗಿ ಕೊಟ್ಟ ಗ್ರಾಹಕರು; ಕಾರಣ ತಿಳಿದರೆ ಅಯ್ಯೋ ಅನಿಸುತ್ತೆ!
ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಇದು ಲಸಿಕೆಗೂ ಸವಾಲೊಡ್ಡುವ ಕರೊನಾ ವೈರಸ್; ಚಿಂತೆ ಹೆಚ್ಚಿಸಿದೆ ಈ ಹೊಸ ವೇರಿಯಂಟ್!