More

    ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?

    ನವದೆಹಲಿ: ಕರೊನಾ ವಿರುದ್ಧದ ಲಸಿಕೆಗೆ ಸಂಬಂಧಿಸಿದಂತೆ ಭಾರಿ ಊಹಾಪೋಹಗಳು ಹರಿದಾಡಿವೆ. ಯಾವುದು ಸತ್ಯ, ಯಾವುದು ಸುಳ್ಳು ಎಂದು ನಂಬಲಾಗದಂಥ ಅಪಪ್ರಚಾರಗಳು ಕೂಡ ನಡೆದುಹೋಗಿವೆ. ಅವು ಒಂದಲ್ಲ ಒಂದು ರೀತಿಯಲ್ಲಿ ಇನ್ನೂ ಚಲಾವಣೆಯಲ್ಲಿವೆ.

    ಈ ನಡುವೆ ಕರೊನಾ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರುತ್ತದೆ ಎಂಬ ಮಾತುಗಳೂ ಕೇಳಿಬಂದಿವೆ, ಬರುತ್ತಲೇ ಇವೆ. ಎದೆಹಾಲುಣಿಸುವ ಸ್ತ್ರೀಯರು ಲಸಿಕೆ ತೆಗೆದುಕೊಳ್ಳಬಾರದು, ಲಸಿಕೆ ತೆಗೆದುಕೊಂಡರೆ ಸ್ತ್ರೀ-ಪುರುಷರ ಸಂತಾನೋತ್ಪತ್ತಿ ಶಕ್ತಿ ಕುಂದುತ್ತದೆ ಎಂಬೆಲ್ಲ ಹೇಳಿಕೆಗಳ ಸಂಬಂಧ ಇದೀಗ ಕೇಂದ್ರ ಆರೋಗ್ಯ ಸಚಿವಾಲಯವೇ ಸ್ಪಷ್ಟನೆ ನೀಡಿದೆ.

    ಇದನ್ನೂ ಓದಿ: ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…

    ಕರೊನಾ ವಿರುದ್ಧದ ಎಲ್ಲ ಲಸಿಕೆಗಳೂ ಸುರಕ್ಷಿತ ಎಂಬುದು ಇದುವರೆಗಿನ ಅಧ್ಯಯನಗಳಿಂದ ಸಾಬೀತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಲಸಿಕೆ ತೆಗೆದುಕೊಳ್ಳುವುದರಿಂದ ಸಂತಾನೋತ್ಪತ್ತಿ ಶಕ್ತಿ ಕುಂದುತ್ತದೆ ಅಥವಾ ನಪುಂಸಕತ್ವ ಬರುತ್ತದೆ ಎಂಬುದಕ್ಕೆ ಇನ್ನೂ ಯಾವುದೇ ಸಾಕ್ಷ್ಯಗಳು ಲಭಿಸಿಲ್ಲ. ಇನ್ನು ಎದೆಹಾಲುಣಿಸುವ ಮಹಿಳೆಯರೂ ಲಸಿಕೆಯನ್ನು ತೆಗೆದುಕೊಳ್ಳಬಹುದು ಎಂದು ನ್ಯಾಷನಲ್​ ಎಕ್ಸ್​ಪರ್ಟ್​ ಗ್ರೂಪ್​ ಫಾರ್​ ಕೋವಿಡ್-19 ವ್ಯಾಕ್ಸಿನೇಷನ್​ (ಎನ್​ಇಜಿವಿಎಸಿ) ಶಿಫಾರಸು ಮಾಡಿದೆ. ಮಾತ್ರವಲ್ಲ, ಲಸಿಕೆ ಪಡೆದ ಬಳಿಕ ಎದೆಹಾಲು ನೀಡುವುದನ್ನು ನಿಲ್ಲಿಸಬೇಕಾಗಿಲ್ಲ ಎಂದೂ ಅದು ತಿಳಿಸಿದೆ ಎಂಬುದಾಗಿ ಸಚಿವಾಲಯ ಹೇಳಿದೆ.

    ಇದನ್ನೂ ಓದಿ: ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ಸದ್ಯ ಲಭ್ಯವಿರುವ ಹಾಗೂ ನೀಡಲಾಗುತ್ತಿರುವ ಯಾವುದೇ ಲಸಿಕೆ ಪುರುಷರು ಮತ್ತು ಮಹಿಳೆಯರಿಗೆ ನಪುಂಸಕತ್ವವನ್ನು ತರುವುದಿಲ್ಲ. ಎಲ್ಲ ಲಸಿಕೆಗಳನ್ನು ಮೊದಲು ಪ್ರಾಣಿಗಳ ಮೇಲೆ ಪ್ರಯೋಗಿಸಿ, ಅಡ್ಡಪರಿಣಾಮಗಳು ಇಲ್ಲ ಎಂಬುದನ್ನು ಪರೀಕ್ಷಿಸಿ ಖಚಿತ ಪಡಿಸಿಕೊಂಡೇ ನಂತರ ಮನುಷ್ಯರಿಗೆ ಅದನ್ನು ಶಿಫಾರಸು ಮಾಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. (ಏಜೆನ್ಸೀಸ್)

    ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!

    ಕೋವಿಡ್ ಬಾಧಿತ ಕ್ಷೇತ್ರಗಳಿಗೆ ಕೇಂದ್ರಸರ್ಕಾರದಿಂದ ಲೋನ್​ ಗ್ಯಾರಂಟಿ ಸ್ಕೀಮ್​

    ಈ ಕರೊನಾ ಸಂಕಷ್ಟದಲ್ಲೂ 70 ಲಕ್ಷ ರೂ. ಲಾಟರಿ ಹೊಡೆದರೆ ಹೇಗಿರುತ್ತೆ!?; ಬಂಪರ್ ಪ್ರೈಜ್​ ಮಾಹಿತಿ ಇಲ್ಲಿದೆ…

    ಹತ್ತು ದಿನಗಳ ಒಳಗೆ ಏನಂತ ಹೇಳಿ; ಟ್ವಿಟರ್​ಗೆ ರಾಷ್ಟ್ರೀಯ ಮಹಿಳಾ ಆಯೋಗದ ತಾಕೀತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts