

ಕೇರಳ: ಕರೊನಾ-ಲಾಕ್ಡೌನ್ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಇರುವುದನ್ನೆಲ್ಲ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇನ್ನೊಂದಷ್ಟು ಮಂದಿ ಅಂಥ ಸಂಕಷ್ಟದಲ್ಲಿ ಇರದಿದ್ದರೂ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ 70 ಲಕ್ಷ ರೂಪಾಯಿ ಲಾಟರಿ ಹೊಡೆದರೆ ಹೇಗಿರಬಹುದು!
ಇಂಥ ಟೈಮ್ನಲ್ಲೂ ಅಷ್ಟೊಂದು ಹಣನಾ ಎಂದು ಮೂಗು ಮುರಿಯುವ ಹಾಗಿಲ್ಲ. ಏಕೆಂದರೆ ಇದು ಕನಸಲ್ಲ, ನಿಜವಾಗಿಯೂ ಒಬ್ಬರಿಗೆ ಲಾಟರಿಯ ಬಂಪರ್ ಪ್ರೈಜ್ ಬಹುಮಾನವಾಗಿ 70 ಲಕ್ಷ ರೂಪಾಯಿ ಸಿಗಲಿದೆ. ಈ ಬಗ್ಗೆ ಕೇರಳ ಸರ್ಕಾರ ಇಂದು ಮಧ್ಯಾಹ್ನವೇ ಘೋಷಿಸಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ಲಾಟರಿ ಡ್ರಾ ಸ್ಥಗಿತಗೊಳಿಸಿದ್ದ ಕೇರಳದ ಲಾಟರಿ ಇಲಾಖೆ ಇಂದು ಕೇರಳ ಸರ್ಕಾರದ ಅಕ್ಷಯ ಎಕೆ-496 ಲಾಟರಿಯನ್ನು ಎತ್ತಿದೆ. ಇದರಲ್ಲಿ ಬಂಪರ್ ಪ್ರೈಜ್ ಆಗಿ 70 ಲಕ್ಷ ರೂಪಾಯಿ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ 10 ಲಕ್ಷ ರೂಪಾಯಿ ಸಿಗಲಿದೆ. ಅಕ್ಷಯ ಎಕೆ-496 ಲಾಟರಿ ಟಿಕೆಟ್ ಸಂಖ್ಯೆ ಎಯು-258505ಕ್ಕೆ ಬಂಪರ್ ಪ್ರೈಜ್ ಬಂದಿದ್ದರೆ, ಇನ್ನೊಂದು ಟಿಕೆಟ್ಗೆ ದ್ವಿತೀಯ ಬಹುಮಾನ ಲಭಿಸಿದೆ. ಇನ್ನು 12 ಟಿಕೆಟ್ಗಳು ಮೂರನೇ ಬಹುಮಾನಕ್ಕೆ ಆಯ್ಕೆ ಆಗಿವೆ.
ಕೇರಳದಲ್ಲಿ 1967ರಲ್ಲೇ ಲಾಟರಿ ಇಲಾಖೆ ಸ್ಥಾಪನೆಗೊಂಡಿದ್ದು, ಇದು ರಾಜ್ಯದ ಪ್ರಮುಖ ಆದಾಯ ಮೂಲವಾಗಿದೆ. ಪ್ರತಿದಿನವೂ ಇಲ್ಲಿ ಲಾಟರಿ ಡ್ರಾ ಇದ್ದು, ನಿತ್ಯ 2 ಲಕ್ಷ ಮಂದಿ ಇದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೇರಳದಲ್ಲಿ ವರ್ಷಕ್ಕೆ ಲಾಟರಿಯೊಂದರಿಂದಲೇ 10 ಸಾವಿರದಿಂದ 12 ಸಾವಿರ ಕೋಟಿ ರೂಪಾಯಿ ಆದಾಯ ಬರುತ್ತಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ 3 ತಿಂಗಳು ಲಾಟರಿಯನ್ನು ಸ್ಥಗಿತಗೊಳಿಸಲಾಗಿತ್ತು. (ಏಜೆನ್ಸೀಸ್)