

ಕೊಡಗು: ಮಕ್ಕಳಿಬ್ಬರು ಮನೆಯೊಳಗೇ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸಾವಿನ ಕುರಿತು ಇನ್ನೂ ನಿಖರವಾಗಿ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಉಂಜಿಗನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ. ಪರಿಣಾಮವಾಗಿ ಎಚ್.ಆರ್.ಗಿರೀಶ್- ಜಯಂತಿ ದಂಪತಿಯ ಹದಿಹರೆಯದ ಪುತ್ರ-ಪುತ್ರಿ ಮೃತಪಟ್ಟಿದ್ದಾರೆ. ಪೂರ್ಣೇಶ್ (13), ಮನಿಕ್ಸಾ (15) ಮೃತಪಟ್ಟವರು.
ಸೋಮವಾರಪೇಟೆಯಲ್ಲಿರುವ ಅಜ್ಜ-ಅಜ್ಜಿಯ ಮನೆಯಲ್ಲಿ ಈ ಮಕ್ಕಳ ಶವ ಪತ್ತೆಯಾಗಿದ್ದು, ಉಯ್ಯಾಲೆ ಆಡುತ್ತಿದ್ದಾಗ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸೋಮವಾರಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.