ಪ್ರೀತಿಯಿಂದ ಸಾಕಿದ್ದ ನಾಯಿಯ ನಿಧನಕ್ಕೆ ಕಣ್ಣೀರು ಹಾಕಿದ ನಟಿ ಹರಿಪ್ರಿಯಾ

haripriya
Published on

ಬೆಂಗಳೂರು: ನೀರ್ ದೋಸೆ ಬೆಡಗಿ ನಟಿ ಹರಿಪ್ರಿಯಾ ತನ್ನ ನೆಚ್ಚಿನ ನಾಯಿಯನ್ನ ಕಳೆದು ಕೊಂಡ ದುಃಖದಲ್ಲಿದ್ದಾರೆ. ಕಳೆದ ಎಂಟೂವರೆ ವರ್ಷದಿಂದ ಹರಿಪ್ರಿಯ ಅವರ ಮನೆ ಕುಟುಂಬದಲ್ಲೊಬ್ಬ ಪ್ರೀತಿಯ ಸದಸ್ಯನಂತೆ ಇದ್ದ ಲಕ್ಕಿ ಹೆಸರಿನ ಶ್ವಾನ ಇಂದು ನಿಧನವಾಗಿದೆ.


ಈ ಬಗ್ಗೆ ಸಂತಾಪ ಸೂಚಕವಾಗಿ, ಲಕ್ಕಿಯೊಂದಿಗೆ ಕಳೆದಿದ್ದ ಹಲವು ಸಂತೋಷದ ಕ್ಷಣಗಳ ಫೋಟೋಗಳನ್ನು ಹರಿಪ್ರಿಯ ಹಂಚಿಕೊಂಡಿದ್ದಾರೆ. "ನನ್ನ ಅದೃಷ್ಟ, ನನ್ನ ಮೊದಲು ಮಗು, ನನ್ನ ಕುಟುಂಬ.. ಅವನು ನಮ್ಮ ಜೀವನದ ಅವಿಭಾಜ್ಯ ಅಂಗ. 8.5 ವರ್ಷಗಳ ಕಾಲ ನಮ್ಮೊಂದಿಗಿದ್ದು ಅದ್ಭುತ ನೆನಪುಗಳನ್ನು ನೀಡಿದ್ದಾನೆ. ನಾನು ಯಾವಾಗಲೂ ಅವನೊಂದಿಗಿದ್ದಾಗ ತುಂಬಾ ಸುರಕ್ಷಿತವಾಗಿದ್ದಂತೆ ಅನಿಸುತ್ತಿತ್ತು. ನಾವಿಬ್ಬರು ಒಟ್ಟಿಗೆ ಆಡಿದ್ದೇವೆ, ಪ್ರಯಾಣಿಸಿದ್ದೇವ, ಪರಸ್ಪರ ಕಿರಿಕಿರಿ ಮಾಡಿಕೊಂಡಿದ್ದೇವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಜೀವನದಲ್ಲಿ ಅವನಿರಲು ನಾನು ಪುಣ್ಯ ಮಾಡಿದ್ದೆ. ನೀನು ಎಲ್ಲೇ ಹೋದರೂ ಒಳ್ಳೆಯ ಹುಡುಗನೇ.. ಮುಂದಿನ ಜನ್ಮದಲ್ಲಿ ನೀನು ನನ್ನನ್ನು ಗುರುತಿಸಿದರೆ ನನ್ನೊಂದಿಗೆ ಮಾತನಾಡು. ನನಗೆ ಹತ್ತಿರಲ್ಲೇ ನೀನು ಮತ್ತೆ ಹುಟ್ಟುತ್ತೀಯ ಎನ್ನುವ ನಂಬಿಕೆ ನನಗಿದೆ. ನಿನಗೆ ಅಂತಿಮವಾಗಿ ಬೈ ಹೇಳಲು ಸಾಕಷ್ಟು ನೋವಾಗುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net