ಯಮುನಾ ನದಿಗೆ ಹಾರಿದ ಸೋಶಿಯಲ್ ಮೀಡಿಯಾ ಸ್ಟಾರ್! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆತ್ಮಹತ್ಯೆಯ ದೃಶ್ಯ

himanshi
Published on

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆ್ಯಕ್ಟಿವ್ ಆಗಿದ್ದು, ತನ್ನದೇ ಆದ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಹಿಮಾಂಶಿ ಗಾಂಧಿ ಯಮುನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಗ್ನೇಚರ್ ಸೇತುವೆಯಿಂದ ಆಕೆ ನದಿಗೆ ಹಾರಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹಿಮಾಂಶಿ ತನ್ನದೇ ಆದ ಯೂಟ್ಯೂಬ್ ಚಾನೆಲ್​ ಅನ್ನು ಹೊಂದಿದ್ದಾರೆ. ಫೇಸ್​ಬುಕ್, ಇನ್​ಸ್ಟಾಗ್ರಾಂ ಎಲ್ಲೆಡೆ ಯಾವಾಗಲೂ ಆ್ಯಕ್ಟಿವ್ ಇರುತ್ತಿದ್ದ ಅವರು ಜೂನ್ 24ರಂದು ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ದೆಹಲಿಯ ಸಿಗ್ನೇಚರ್ ಸೇತುವೆಯಿಂದ ಯಮುನಾ ನದಿಗೆ ಹಾರಿದ್ದಾರೆ. ಕಪ್ಪು ಬಣ್ಣದ ಬಟ್ಟೆ ತೊಟ್ಟಿದ್ದ ಆಕೆ ಸೇತುವೆ ಅಡ್ಡ ಕಟ್ಟೆಯನ್ನು ಹತ್ತಲಾಗದೆ, ಅದರ ಮಧ್ಯೆಯೇ ನುಸುಳಿ ನದಿಗೆ ಬಿದ್ದಿರುವ ದೃಶ್ಯ ಹತ್ತಿರ ಸಿಸಿ ಕ್ಯಾಮರಾದಲ್ಲಿ ಚಿತ್ರೀಕರಣವಾಗಿದೆ. ಇದೀಗ ವಿಡಿಯೋವನ್ನು ಪಡೆದಿರುವ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಹಿಮಾಂಶಿ ಅವರ ಮೃತ ದೇಹ ಜೂನ್ 25ರಂದು ಕುಡೆಶಿಯಾ ಘಾಟ್‌ನಲ್ಲಿ ಮಧ್ಯಾಹ್ನದ ವೇಳೆ ಪತ್ತೆಯಾಗಿತ್ತು. ಅದಾಗಲೇ ಹಿಮಾಂಶಿ ನಾಪತ್ತೆಯಾಗಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬುರಾರಿ ಪೊಲೀಸ್ ಠಾಣಾ ಪೊಲೀಸರು ಆಕೆಯ ಮೃತ ದೇಹ ಪತ್ತೆಯಾದ ನಂತರ ಆ ಸ್ಥಳದ ಸುತ್ತ ಮುತ್ತಲಿನವರನ್ನೂ ವಿಚಾರಣೆಗೆ ಒಳಪಡಿಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net