More

    14ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ಮಾಡೆಲ್! ಅಕ್ಕನ ಮನೆಯಲ್ಲಿದ್ದವಳ ಈ ನಿರ್ಧಾರಕ್ಕೆ ಕಾರಣವೇನು?

    ಲಖನೌ: ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ನೂರಾರು ಕನಸು ಹೊತ್ತಿದ್ದ ಯುವತಿಯೊಬ್ಬಳು ಅಪಾರ್ಟ್​ಮೆಂಟ್​ನ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

    ಪ್ರಿಯಾ ಅಲಿಯಾಸ್ ಭವಾನಿ ಮೂಲತಃ ದೆಹಲಿಯವಳಾಗಿದ್ದು, ಮಹಾರಾಷ್ಟ್ರದ ಮುಂಬೈನಲ್ಲಿ ನೆಲೆಸಿದ್ದಳು. ಮಾಡೆಲಿಂಗ್ ಕ್ಷೇತ್ರದಲ್ಲಿ ಎತ್ತರದ ಸ್ಥಾನಕ್ಕೇರುವ ಬಯಕೆಯಲ್ಲಿ ಅನೇಕೆ ಮಾಡೆಲಿಂಗ್ ಕೆಲಸಗಳನ್ನು ಮಾಡಿಕೊಂಡಿದ್ದಳು. ಈ ನಡುವೆ ಕರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಸ್ವಲ್ಪ ದಿನ ತನ್ನ ಅಕ್ಕನೊಂದಿಗೆ ಇರುವುದಕ್ಕೆಂದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಪಟ್ಟಣದಲ್ಲಿದ್ದ ಅಕ್ಕನ ಮನೆಗೆ ತೆರಳಿದ್ದಾಳೆ.

    ಕರೊನಾ ನಿಯಂತ್ರಣಕ್ಕೆ ಮಾಡಲಾದ ಲಾಕ್​ಡೌನ್​ನಿಂದ ತನ್ನ ಜೀವನವೇ ಹಾಳಾಯಿತು ಎಂದು ಆಕೆ ಕೊರಗುತ್ತಿದ್ದಳಂತೆ. ಮಾಡೆಲಿಂಗ್​ನಲ್ಲಿ ನನ್ನ ಭವಿಷ್ಯ ಮುಂದುವರಿಯುವುದು ಕಷ್ಟವೆಂದು ಸಾಕಷ್ಟು ನೊಂದಿದ್ದಳಂತೆ. ಅದೇ ಬೇಸರದಲ್ಲಿದ್ದ ಆಕೆ ಸೋಮವಾರ ರಾತ್ರಿ 8.30ರ ಸಮಯಕ್ಕೆ ಅಪಾರ್ಟ್​ಮೆಂಟ್​ನ 14ನೇ ಮಹಡಿಯಲ್ಲಿದ್ದ ಅಕ್ಕನ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ ಆಕೆ ಅದಾಗಲೇ ಕೊನೆಯುಸಿರು ಎಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ವಿಚಾರದಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)

    11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

    ಹೆರಿಗೆಯಾದ ಅಕ್ಕನನ್ನು ನೋಡಲು ಹೋದ ತಂಗಿಯನ್ನೇ ರೇಪ್ ಮಾಡಿದ ಭಾವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts