More

    ಎಚ್ಚರಿಕೆ.. ಝಿಕಾ ವೈರಸ್ ಬಂದಿದೆ, ಮಕ್ಕಳ ಕುರಿತಿರಲಿ ಹೆಚ್ಚು ನಿಗಾ: ಡಾ. ಜಿ.ವಿ. ಬಸವರಾಜ್​

    ಬೆಂಗಳೂರು: ಕೋವಿಡ್​-19 ಮೂರನೇ ಆತಂಕದ ನಡುವೆಯೇ ಇದೀಗ ಝಿಕಾ ವೈರಸ್​ ಭೀತಿಯೂ ಕಾಡುತ್ತಿದ್ದು, ಇದು ಮಕ್ಕಳನ್ನು ಬಾಧಿಸುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಸೂಕ್ತ ಮುನ್ನೆಚ್ಚರಿಕೆ ವಹಿಸುವ ಜತೆಗೆ ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸುವುದು ಅಗತ್ಯ ಎನ್ನುತ್ತಿದ್ದಾರೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕ ಆರೋಗ್ಯ ಸಂಸ್ಥೆಯ ಡಾ.ಜಿ.ವಿ. ಬಸವರಾಜ್.

    ಝಿಕಾ ವೈರಸ್​ ಡೆಂಘೀ ಜ್ವರವನ್ನು ತರುವ ಈಡಿಸ್​ ಈಜಿಪ್ಟೈ ಸೊಳ್ಳೆಯಿಂದಲೇ ಹರಡುತ್ತಿದೆ. ಈ ಸೊಳ್ಳೆ ಕಚ್ಚಿದ 3ರಿಂದ 14 ದಿನಗಳಲ್ಲಿ ಈ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ, ತಲೆನೋವು, ಮೈಮೇಲೆ ಬರೆ ಅಥವಾ ದದ್ದಿನಂಥ ಬೆಳವಣಿಗೆ, ಕೀಲುನೋವು, ಹೊಟ್ಟೆನೋವು, ವಾಂತಿ, ಸ್ನಾಯುನೋವು ಈ ರೋಗದ ಪ್ರಮುಖ ಲಕ್ಷಣಗಳು ಎಂದು ಡಾ. ಬಸವರಾಜ್ ವಿವರಿಸಿದ್ದಾರೆ.

    ಇದನ್ನೂ ಓದಿ: ಬರೋಬ್ಬರಿ 2,500 ಕೋಟಿ ರೂ. ಮೊತ್ತದ ಮಾದಕವಸ್ತು ವಶ!; ರಾಜಧಾನಿಯ ಇತಿಹಾಸದಲ್ಲೇ ಅತ್ಯಧಿಕ!

    ಇದು ಮಕ್ಕಳನ್ನು ಹೆಚ್ಚು ಕಾಡುವಂಥ ರೋಗ. ಈ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳುವುದೇ ಈ ರೋಗ ಬರದಂತೆ ತಡೆಯುವು ಪ್ರಮುಖ ಮಾರ್ಗ. ಮಕ್ಕಳು ಈ ಸೊಳ್ಳೆ ಕಡಿತದಿಂದ ಪಾರಾಗುವಂತೆ ಮಾಡಲು ಅವರು ಶಾಲೆಗೆ ಅಥವಾ ಹೊರಗೆ ಹೋಗುವಾಗ ಮೈಪೂರ್ತಿಯಾಗಿ ಮುಚ್ಚುವಂತಹ ಉಡುಪುಗಳನ್ನು ತೊಡಿಸಬೇಕು. ಮನೆಯಲ್ಲಿ ಸೊಳ್ಳೆ ಪರದೆ ಅಥವಾ ಸೊಳ್ಳೆನಿರೋಧಕಗಳನ್ನು ಬಳಸಬೇಕು. ಇದು ನೆಲೆನಿಂತ ಶುದ್ಧನೀರಿನಲ್ಲಿ ಬೆಳೆಯುವ ಸೊಳ್ಳೆಯಾದ್ದರಿಂದ ಮನೆಯಲ್ಲಿ ಅಥವಾ ಆಸುಪಾಸಿನಲ್ಲಿ ನೀರನ್ನು ತುಂಬ ದಿನಗಳವರೆಗೆ ಶೇಖರಿಸಿ ಇಡಬಾರದು ಎಂಬ ಸಲಹೆ ವೈದ್ಯರದು.

    ಇನ್ನು ಗರ್ಭಿಣಿಯರಲ್ಲಿ ಅದರಲ್ಲೂ ಮೊದಲ ಸಲ ಗರ್ಭಧರಿಸಿದವರು ಈ ಸೋಂಕಿಗೆ ಒಳಗಾದರೆ ಇದು ಭ್ರೂಣದ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹುಟ್ಟುವ ಮಗು ನಾನಾ ಸಮಸ್ಯೆಗಳಿಗೆ ಒಳಗಾಗಬಹುದು. ಈ ಸೋಂಕಿಗೆ ಒಳಗಾದ ಸುಮಾರು ಶೇ. 5ರಿಂದ 15 ಗರ್ಭಿಣಿಯರಲ್ಲಿ ಇಂಥ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬ ಎಚ್ಚರಿಕೆ ನೀಡುತ್ತಾರೆ ಬಸವರಾಜ್.
    ಕೋವಿಡ್​-19ನಂತೆ ಈ ಕಾಯಿಲೆಗೂ ನಿಗದಿತವಾದ ಚಿಕಿತ್ಸೆ ಇಲ್ಲ. ಜ್ವರಕ್ಕೆ ಪ್ಯಾರಾಸಿಟಮಲ್​ ಮಾತ್ರೆ ಕೊಡಲಾಗುತ್ತದೆ. ಉಳಿದಂತೆ ಡಿಹೈಡ್ರೇಷನ್​ ತಪ್ಪಿಸಲು ಹೆಚ್ಚು ನೀರು, ಹಾಲು, ಮಜ್ಜಿಗೆ, ಹಣ್ಣಿನ ರಸ ಸೇವಿಸಬೇಕಾಗುತ್ತದೆ ಎಂಬ ಕಿವಿಮಾತು ಇವರದು.

    ಅಪರಾಧ ನಡೆದ ಸ್ಥಳಕ್ಕೆ ಇನ್ನು ಇವರು ಬರಲಿದ್ದಾರೆ; ಇದು ದೇಶದಲ್ಲೇ ಮೊದಲು!

    ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ಇದು ಕರೊನಾ ಲಸಿಕೆ ಇನ್ನೂ ಪಡೆಯದವರು ಓದಲೇಬೇಕಾದ ವಿಷಯ: ಹೊರಬಿತ್ತು ಮತ್ತೊಂದು ಅಧ್ಯಯನ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts