More

    ಆಪರೇಷನ್ ವೇಳೆ ಹಾಡು ಹಾಡಿದ ವೈದ್ಯ.. ಕಾರಣ ಏನು ಗೊತ್ತಾ..?

    ಚಂಡಿಗಢ: ಶಸ್ತ್ರಚಿಕಿತ್ಸೆಗೆ ಒಳಗಾಗುವುದಕ್ಕೂ ಮುನ್ನ ಭಯದಲ್ಲಿದ್ದ ಮಗುವಿನ ಗಮನ ಬೇರೆಡೆ ಸೆಳೆಯಲು ವೈದ್ಯ ಮಾಡಿದ ಚಿಕ್ಕ ಟ್ರಿಕ್ ಸದ್ಯ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ನೋಡಿದ ಜನರು ವೈದ್ಯರ ಮೇಲೆ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಪಂಜಾಬ್ ನಲ್ಲಿ ಬೆಳಕಿಗೆ ಬಂದಿರುವ ಈ ಘಟನೆಯ ವಿವರಕ್ಕೆ ಹೋದರೆ..

    ಇದನ್ನೂ ಓದಿ: ಅಡಿದಾಸ್ ಸಂಬಾ ಟ್ರೈನರ್ಸ್ ಶೂ.. ಕ್ಷಮೆಯಾಚಿಸಿದ ಬ್ರಿಟನ್ ಪ್ರಧಾನಿ ಸುನಕ್..! ಕಾರಣವೇನು ಹೀಗಿದೆ ನೋಡಿ?

    ಪಂಜಾಬ್​ನ ಮೋಗಾ ಜಿಲ್ಲೆಯ ಭಾಗಪುರಾಣ ಪಟ್ಟಣದ ಮೂರು ವರ್ಷದ ಬಾಲಕ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ. ಆಸ್ಪತ್ರೆಗೆ ಬಂದ ಮಗುವಿನ ಕಾಲಿನ ಮೂಳೆ ಮುರಿದಿದ್ದನ್ನು ಗಮನಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು.

    ಮಗುವಿಗೆ ಆಪರೇಷನ್ ಮಾಡಲು ಬಂದಿದ್ದ ಡಾ.ದಿವ್ಯಾಂಶು ಗುಪ್ತಾ ಮಗು ಗೊಂದಲಕ್ಕೀಡಾಗಿರುವುದನ್ನು ಗಮನಿಸಿದರು. ನೋವು ತಿಳಿಯದೆ ಅರಿವಳಿಕೆ ನೀಡಿದರೂ ಮಗು ಆಪರೇಷನ್ ಗೆ ಸಹಕರಿಸಲಿಲ್ಲ. ಇದರೊಂದಿಗೆ ಮಗುವಿನ ಗಮನ ಬೇರೆಡೆಗೆ ಸೆಳೆದು ಕಾರ್ಯಾಚರಣೆಯನ್ನು ಸುಗಮಗೊಳಿಸಲು ನಿರ್ಧರಿಸಿದರು.

    ಕೂಡಲೇ ಪಾಲಕರನ್ನು ಕರೆದು ಮಗುವಿಗೆ ನೆಚ್ಚಿನ ಹಾಡುಗಳು ಅಥವಾ ವಿಷಯಗಳು ಯಾವುವೆಂದು ಕೇಳಿದ್ದಾರೆ. ಆಗ ಮಗು ಉತ್ಸಾಹದಿಂದ ಸಿದ್ಧಮೂಸೆವಾಲಾ ಹಾಡುಗಳನ್ನು ತುಂಬಾ ಇಷ್ಟಪಡುತ್ತೇನೆ ಎಂದು ಹೇಳಿದೆ. ಹೀಗಾಗಿ ವೈದ್ಯರು ಮೊಬೈಲ್ ನಲ್ಲಿ ರಾಪರ್ ಹಾಡನ್ನು ನುಡಿಸಿ 25 ನಿಮಿಷದಲ್ಲಿ ಆಪರೇಷನ್ ಮುಗಿಸಿದ್ದಾರೆ.

    “ಹಾಡು ಕೇಳಿದಾಗ ಮಗುವಿನ ಆತಂಕ ಕಡಿಮೆಯಾಗಿದೆ. ಲಯಬದ್ಧವಾಗಿ ಕೈ ಬೀಸಿ ಹಾಡಿನಲ್ಲಿ ಮಗ್ನವಾಗಿದೆ. ಮತ್ತೊಂದೆಡೆ, ವೈದ್ಯಕೀಯ ಸಿಬ್ಬಂದಿಯೊಬ್ಬರು ಮಗುವಿನ ಗಮನವನ್ನು ಆಪರೇಷನ್‌ನಿಂದ ದೂರವಿರಿಸಲು ಹಾಡನ್ನು ಹಾಡಿದರು. ಈ ನಡುವೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ’ ಎಂದು ವೈದ್ಯರು ತಿಳಿಸಿದರು.

    ಮಗು ಚೇತರಿಸಿಕೊಳ್ಳುತ್ತಿದ್ದು, ಇನ್ನು ಕೆಲವೇ ತಿಂಗಳಲ್ಲಿ ನಡೆದಾಡಲಿದೆ ಎಂದರು. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವೈದ್ಯರ ಜವಾಬ್ದಾರಿ ಕಂಡು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.

    ಖ್ಯಾತ ಮಹಿಳಾ ಉದ್ಯಮಿಗೆ ಗಲ್ಲು..ಈಕೆ ವಂಚಿಸಿದ್ದು ಅಷ್ಟಿಷ್ಟಲ್ಲ, 1 ಲಕ್ಷ ಕೋಟಿ ರೂ.!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts