More

    ರಕ್ತದಾನದಿಂದ ಗಾಯಾಳುಗಳಿಗೆ ಮರುಜನ್ಮ

    ಮೈಸೂರು: ಸಂತ ಫಿಲೋಮಿನಾ ಕಾಲೇಜು ಹಾಗೂ ಯೂತ್ ರೆಡ್‌ಕ್ರಾಸ್, ಎನ್‌ಎಸ್‌ಎಸ್ ಮತ್ತು ಜೀವಧಾರಾ ರಕ್ತ ನಿಧಿ ಕೇಂದ್ರದಿಂದ ಬನ್ನಿಮಂಟಪದಲ್ಲಿರುವ ಸಂತ ಫಿಲೋಮಿನಾ ಕಾಲೇಜು ಆವರಣದಲ್ಲಿ 70 ಯುವಕ, ಯುವತಿಯರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
    ಜೀವಧಾರಾ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ನಿತ್ಯ ಅನೇಕ ರೋಗಿಗಳು, ಗರ್ಭಿಣಿಯರು, ಅಪಘಾತದಲ್ಲಿ ಗಾಯಗೊಂಡವರು ಸಾವಿಗೀಡಾಗುತ್ತಿದ್ದಾರೆ. ಜೀವನ್ಮರಣದ ನಡುವೆ ಹೋರಾಟ ನಡೆಸುವವರಿಗೆ ರಕ್ತದಾನದ ಮೂಲಕ ಮರುಜನ್ಮ ನೀಡಿ ಪ್ರತಿಯೊಬ್ಬರು ತಮ್ಮ ಜೀವನವನ್ನು ಜೀವನ ಸಾರ್ಥಕ ಪಡಿಸಿಕೊಳ್ಳಬೇಕಿದೆ ಎಂದು ಕೋರಿದರು.
    ದೇಶದ ಪ್ರಗತಿಗೆ ಅಡಿಪಾಯವಾಗಿರುವ ಯುವಜನರು ಕರ್ತವ್ಯ ಪ್ರಜ್ಞೆಯಿಂದ ಜವಾಬ್ದಾರಿ ಅರಿತು ಸ್ವಯಂ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು. ಆಗ ಮಾತ್ರ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಆಗುತ್ತದೆ ಎಂದರು.
    ವಿಶೇಷವಾಗಿ ಚುನಾವಣೆ ಕರ್ತವ್ಯದಲ್ಲಿ ಪ್ರತಿಯೊಬ್ಬರು ಕಾರ್ಯನಿರತರಾಗಿದ್ದಾರೆ ಹಾಗೂ ಬೇಸಿಗೆ ಸಂದರ್ಭದಲ್ಲಿ ರಕ್ತದಾನ ಮಾಡುವಲ್ಲಿ ಯಾರು ಮುಂದಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ, ಸೇಂಟ್ ಫಿಲೋಮಿನಾ ಕಾಲೇಜ್ ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
    ಸಂತ ಫಿಲೋಮಿನಾ ಕಾಲೇಜಿನ ಡೈರೆಕ್ಟರ್ ಮತ್ತು ಮ್ಯಾನೇಜರ್ ಡಾ. ಬರ್ನಾಡ್ ಪ್ರಕಾಶ್, ಪ್ರಾಂಶುಪಾಲ ಡಾ.ರವಿ ಜೆಡಿ ಸಲ್ಡಾನಾ, ಫ್ರಾನ್ಸಿಸ್ ಡಿಸೋಜ, ದೀಪ್ತಿ, ಎನ್‌ಎಸ್‌ಎಸ್ ಆಡಳಿತ ಅಧಿಕಾರಿ ಜೋಯಲ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts