More

    ಕೆಐಎ ರನ್‌ವೇನಲ್ಲಿ ವಿಡಿಯೋ ಮಾಡಿ ತಪ್ಪು ಸಂದೇಶ ರವಾನೆ; ಯೂಟ್ಯೂಬರ್ ಜೈಲಿಗೆ

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ರನ್ ವೇನಲ್ಲಿ ವಿಡಿಯೋ ಚಿತ್ರೀಕರಿಸಿ ಜಾಲತಾಣದಲ್ಲಿ ಹಂಚಿಕೊಂಡಿದ್ದ ಯೂಟ್ಯೂಬರ್‌ನ್ನು ಕೆಐಎ ಪೊಲೀಸರು ಬಂಧಿಸಿದ್ದಾರೆ.

    ಯಲಹಂಕ ಮೂಲಕ ವಿಕಾಸ್ ಗೌಡ (23) ಬಂಧಿತ. ಏಪ್ರಿಲ್ 7ರಂದು ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಲು ಮಧ್ಯಾಹ್ನ 12 ಗಂಟೆಯಲ್ಲಿ ಟರ್ಮಿನಲ್-2ಗೆ ಬಂದಿದ್ದ ವಿಕಾಸ್ ಗೌಡ, ಸೆಕ್ಯೂರಿಟಿ ಚೆಕ್ ಮುಗಿಸಿಕೊಂಡು ಒಳಹೋಗಿದ್ದಾನೆ. ವಿಮಾನ ನಿಲ್ದಾಣದಲ್ಲಿ ವಿಡಿಯೋ ಶೂಟಿಂಗ್ ಮಾಡುವ ಉದ್ದೇಶದಿಂದ ಬೋರ್ಡಿಂಗ್ ಆಗದೇ ವಿಮಾನ ನಿಲ್ದಾಣದ ಎಲ್ಲ ಕಡೆ ಅತಿಕ್ರಮ ಪ್ರವೇಶ ಮಾಡಿ ಮತ್ತು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ.

    ತಾನು ಒಂದು ದಿನ ವಿಮಾನ ನಿಲ್ದಾಣದಲ್ಲಿಯೇ ಇರುವುದಾಗಿ ಸುಳ್ಳು ಹೇಳಿ ಸಾರ್ವಜನಿಕರಲ್ಲಿ ಸೆಕ್ಯುರಿಟಿ ೆರ್ಸ್ ಮೇಲೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಹಿತಿ ನೀಡಿ ವಿಡಿಯೋ ಅನ್ನು 12ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ವಿಡಿಯೋವನ್ನು ಗಮನಿಸಿದ ಕೆಐಎ ಭದ್ರತ ಪಡೆಯ ಸಿಐಎಸ್‌ಎಫ್ ಇನ್‌ಸ್ಪೆಕ್ಟರ್ ಮುರಳಿಲಾಲ್ ಮೀನಾ, ಪ್ರಯಾಣಿಕ ವಿಕಾಸ ಗೌಡ ವಿರುದ್ಧ ಕೆಐಎ ಠಾಣೆಗೆ ದೂರು ಸಲ್ಲಿಸಿದ್ದರು.

    ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ವಿಕಾಸ್ ಗೌಡನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದಿದ್ದೇನೆ. ಪ್ರಯಾಣಿಸದೆ ರನ್‌ವೇನಲ್ಲೆ 4-5 ಗಂಟೆಗಳ ಕಾಲ ಉಳಿದುಕೊಂಡು ವಿಡಿಯೋ ಮಾಡಿಕೊಂಡು ಬಂದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts