ಮಿಸ್​​ ವರ್ಲ್ಡ್​​ 2023; ಈ ಬಾರಿ ಕಾಶ್ಮೀರದಲ್ಲಿ ನಡೆಯಲಿದೆ ಸ್ಪರ್ಧೆ

Miss World 2023
Published on

ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯಲಿರುವ 71ನೇ ಆವೃತ್ತಿಯ ವಿಶ್ವ ಸುಂದರಿ 2023 ಸ್ಪರ್ಧೆಯನ್ನು ಕಾಶ್ಮೀರದಲ್ಲಿ ಆಯೋಜಿಸಲಾಗುವುದು ಎಂದು ಮಿಸ್​ ವರ್ಲ್ಡ್​ ಸಂಸ್ಥೆಯ ಮುಖ್ಯಸ್ಥೆ ಜೂಲಿಯಾ ಎರಿಕ್​ ಮೊರೆಲಿ ತಿಳಿಸಿದ್ದಾರೆ.

ನಿಜವಾಗಿ ಹೇಳುವುದಾದರೆ ಕಾಶ್ಮೀರದ ನೈಜ ಸೌಂದರ್ಯವನ್ನು ನೋಡುವುದು ನಮಗೆ ಸಂತೋಷದ ವಿಚಾರವಾಗಿದೆ. ನಮಗೆ ಇಲ್ಲಿ ಪ್ರತಿಯೊಬ್ಬರು ಸಹಾಯ ಮಾಡುತ್ತಿದ್ದಾರೆ ಎಂದು ಮಿಸ್​ ವರ್ಲ್ಡ್​ ಸಂಸ್ಥೆಯ ಮುಖ್ಯಸ್ಥೆ ಜೂಲಿಯಾ ಎರಿಕ್​ ಮೊರೆಲಿ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಮೊರೆಲಿ 71ನೇ ಆವೃತ್ತಿಯ ವಿಶ್ವ ಸುಂದರಿ 2023ರ ಸ್ಪರ್ಧೆ ಭಾರತದ ಆತಿಥ್ಯದಲ್ಲಿ ನಡೆಯಲಿದ್ದು, ಕಾಶ್ಮೀರದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಕಾಶ್ಮೀರ ಕಣಿವೆಗೆ 140 ದೇಶದಿಂದ ಆಗಮಿಸುವ ಸ್ಪರ್ಧಿಗಳನ್ನು ನಾನು ಸ್ವಾಗತಿಸಲು ಹೆಚ್ಚು ಉತ್ಸುಕಳಾಗಿದ್ದೇನೆ ಎಂದಿದ್ದಾರೆ.

ಇಲ್ಲಿನ ಜನರು ತುಂಬಾ ಒಳ್ಳೆಯವರಾಗಿದ್ದು, ಪ್ರತಿಯೊಂದು ವಿಚಾರದಲ್ಲೂ ನಮಗೆ ಸಹಾಯ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಸ್ಪರ್ಧೆ ಆಯೋಜನೆ ಮಾಡುತ್ತಿರುವುದು ನಮಗೆ ತುಂಬಾ ಸಂತಸ ತಂದಿದ್ದು, ನೈಜ ಸೌಂದರ್ಯವನ್ನು ಸವಿಯಲು ಕಾತುರದಿಂದ ಕಾಯುತ್ತಿದ್ಧೇವೆ. ನವೆಂಬರ್​ ತಿಂಗಳು ಬರುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ವಿಶ್ವ ಸುಂದರಿ ಸ್ಪರ್ಧೆ ಡಿಸೆಂಬರ್​​ 8ರಂದು ಆರಂಭವಾಗಲಿದ್ದು, ನವೆಂಬರ್​ ತಿಂಗಳಲ್ಲಿ ಈವೆಂಟ್​​ಗೆ ಪೂರ್ವಸಿದ್ದತೆ ಆರಂಭವಾಗಲಿದೆ. 1996ರಲ್ಲಿ ಭಾರತ ಕೊನೆಯದಾಗಿ ವಿಶ್ವಸುಂದರಿ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net