More

    ಅರುಣಾಚಲ ಪ್ರದೇಶ, ಅಕ್ಸಾಯ್​ ಚಿನ್​ ತನ್ನದೆಂದ ಚೀನಾ; ಪ್ರಧಾನಿ ಮೋದಿಗೆ ಚಾಟಿ ಬೀಸಿದ ಕಾಂಗ್ರೆಸ್​

    ನವದೆಹಲಿ: ಗಡಿ ರಾಜ್ಯಗಳ ವಿಚಾರವಾಗಿ ಚೀನಾ ಮತ್ತೊಮ್ಮೆ ಭಾರತದ ಜೊತೆ ತಗಾದೆ ತೆಗೆದಿದ್ದು, ಅರುಣಾಚಲ ಪ್ರದೇಶ, ಅಕ್ಸಾಯ್​ ಚಿನ್​ ತನಗೆ ಸೇರಿದೆಂದು ಹೇಳಿಕೊಂಡಿದೆ.

    ಚೀನಾ ಸರ್ಕಾರ ನೂತನವಾಗಿ ಬಿಡುಗಡೆ ಮಾಡಿರುವ 2023ರ ಸ್ಟ್ಯಾಂಡರ್ಡ್​ ಮ್ಯಾಪ್​ನಲ್ಲಿ ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರದ ಭೂ ಪ್ರದೇಶವನ್ನು ತನ್ನದೆಂದು ಘೋಷಿಸಿದೆ.

    ಯಾವ ರೀತಿಯಲ್ಲಿ ಮಾತನಾಡಿದ್ದಾರೆ

    ಅರುಣಾಚಲಪ್ರದೇಶ ವಿಚಾರವಾಗಿ ಚೀನಾ ಖ್ಯಾತೆ ತೆಗೆದಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಇತ್ತೀಚಿಗೆ ಬ್ರಿಕ್ಸ್​ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್​ ಪಿಂಗ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. LAC ಬಗ್ಗೆ ಪ್ರಧಾನಿ ಮೋದಿ ಚೀನಾದ ಅಧ್ಯಕ್ಷರೊಂದಿಗೆ ಕಟ್ಟುನಿಟ್ಟಾಗಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.

    ಬ್ರಿಕ್ಸ್​ ಶೃಂಗಸಭೆ ನಡೆದು ನಾಲ್ಕು ದಿನ ಕಳೆದ ನಂತರ ಚೀನಾ ತನ್ನ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಅರುಣಾಚಲ ಪ್ರದೇಶ ಹಾಗೂ ಅಕ್ಸಾಯ್​ ಚಿನ್​ ತನಗೆ ಸೇರಿದೆಂದು ಹೇಳಿಕೊಂಡಿದೆ. ಹಾಗಾದರೆ ಪ್ರಧಾನಿ ಮೋದಿ ಅವರು ಚೀನಾದ ಕಾನೂನುಬಾಹಿರ ವರ್ತನೆಯನ್ನು ನಿಯಂತ್ರಿಸಲಾಗದ ರೀತಿಯಲ್ಲಿ ಮಾತನಾಡಿದ್ದಾರಾ ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

    ಇದನ್ನೂ ಓದಿ: ತೋಷಖಾನಾ ಭ್ರಷ್ಟಾಚಾರ ಪ್ರಕರಣ; ಮಾಜಿ ಪ್ರಧಾನಿ ಇಮ್ರಾನ್​ ಖಾನ್ ​ಶಿಕ್ಷೆಗೆ ತಡೆ ನೀಡಿದ ಹೈಕೋರ್ಟ್​

    ಹೊಸ ಖ್ಯಾತೆ

    ಕಳೆದ ವಾರ ದಕ್ಷಿಣ ಆಫ್ರಿಕಾದ ಜೊಹಾನ್ಸ್​ಬರ್ಗ್​ನಲ್ಲಿ ನಡೆದ ಬ್ರಿಕ್ಸ್​ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್​ ಪಿಂಗ್ ಮುಖಾಮುಖಿಯಾಗಿದ್ದರು. ಈ ಇಬ್ಬರು ನಾಯಕರು ಉಭಯ ದೇಶಗಳ ನಡುವಿನ ಬಿಕ್ಕಟ್ಟು ಶಮನ ಮಾಡುವ ನಿಟ್ಟನಲ್ಲಿ ಮಾತುಕತೆ ನಡೆಸಿದ್ದರು.

    ಮಾತುಕತೆ ವೇಳೆ ಗಡಿಯಲ್ಲಿ ಉಂಟಾಗಿರುವ ಶಮನ ಅಂತ್ಯಗೊಳಿಸಿ ಸೇನಾಪಡೆಗಳನ್ನು ಹಿಂಪಡೆಯಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಚೀನಾ ಹೊಸ ನಕ್ಷೆಯನ್ನು ಬಿಡುಗಡೆ ಮಾಡುವ ಮೂಲಕ ಹೊಸ ಖ್ಯಾತೆಯನ್ನು ತೆಗೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts