ಕೋವಿಡ್​​ ಹಗರಣ; ಬಿಜೆಪಿಗರು ಸತ್ಯ ಹರಿಶ್ಚಂದ್ರನ ಮರಿ ಮರಿ ಮೊಮ್ಮಕ್ಕಳಾಗಿದ್ದರೆ ಆತಂಕಪಡುವುದೇಕೆ: ಕಾಂಗ್ರೆಸ್​

Bjp Congress
Published on

ಬೆಂಗಳೂರು: ಹಗರಣದ ಕಡೆ ನಾವು ಬೆರಳು ತೋರಿಸಿದಾಗ ಸಾಕ್ಷಿ ಎಲ್ಲಿದೆ, ತನಿಖೆಯಾಗಲಿ ಎನ್ನುವ ಬಿಜೆಪಿಗರು ತನಿಖೆಗೆ ವಹಿಸಿದಾಕ್ಷಣ ದ್ವೇಷ ರಾಜಕಾರಣ ಎಂದು ಚೀರಾಡುತ್ತಾರೆ. ಬಿಜೆಪಿಗರು ಸತ್ಯ ಹರಿಶ್ಚಂದ್ರನ ಮರಿ ಮರಿ ಮೊಮ್ಮಕ್ಕಳಾಗಿದ್ದರೆ ಆತಂಕಪಡುವುದೇಕೆ ಎಂದು ರಾಜ್ಯ ಕಾಂಗ್ರೆಸ್​ ಪ್ರಶ್ನಿಸಿದೆ.

ಬಿಜೆಪಿ ಸರ್ಕಾರದಲ್ಲಿ ನಾನು ಸಚಿವನಾಗಿದ್ದ ಸಮಯದಲ್ಲಿ ಯಾವ ತಪ್ಪನ್ನೂ ಮಾಡಿಲ್ಲ. ತನಿಖೆಗೆ ಆದೇಶಿಸುವ ಮೂಲಕ ಸರ್ಕಾರ​ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಡಾ.ಕೆ. ಸುಧಾಕರ್​ ಆರೋಪಕ್ಕೆ ಕಾಂಗ್ರೆಸ್​ ತಿರುಗೇಟು ನೀಡಿದೆ.

ಕಳ್ಳರು ಇವರೇ ಎಂದರ್ಥವಲ್ಲವೇ

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್​ ಕೋವಿಡ್ ಹಗರಣವನ್ನು ತನಿಖೆಗೆ ವಹಿಸಿದರೆ ಸುಧಾಕರ್​ ಅವರು ಮೈಮೇಲೆ ಚೇಳು ಬಿದ್ದಂತೆ ಹೌಹಾರುತ್ತಿರುವುದೇಕೆ. ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದರೆ ಕುಂಬಳಕಾಯಿಯ ಕಳ್ಳರು ಇವರೇ ಎಂದರ್ಥವಲ್ಲವೇ ಎಂದು ಛೇಡಿಸಿದೆ.

Congress Tweet

ಹಗರಣವೊಂದನ್ನು ತನಿಖೆಗೆ ವಹಿಸುವುದು ದ್ವೇಷ ರಾಜಕಾರಣ ಹೇಗಾಗುತ್ತದೆ ಸುಧಾಕರ್ ಅವರೇ. ಹಗರಣದ ಕಡೆ ನಾವು ಬೆರಳು ತೋರಿಸಿದಾಗ ಸಾಕ್ಷಿ ಎಲ್ಲಿದೆ, ತನಿಖೆಯಾಗಲಿ ಎನ್ನುವ ಬಿಜೆಪಿಗರು ತನಿಖೆಗೆ ವಹಿಸಿದಾಕ್ಷಣ ದ್ವೇಷ ರಾಜಕಾರಣ ಎಂದು ಚೀರಾಡುತ್ತಾರೆ.

ಬಿಜೆಪಿಗರು ಸತ್ಯ ಹರಿಶ್ಚಂದ್ರನ ಮರಿ ಮರಿ ಮೊಮ್ಮಕ್ಕಳಾಗಿದ್ದರೆ ಆತಂಕಪಡುವುದೇಕೆ ಎಂದು ರಾಜ್ಯ ಕಾಂಗ್ರೆಸ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಡಾ. ಸುಧಾಕರ್​​​ ಅವರ ಹೇಳಿಕೆಗೆ ಚಾಟಿ ಬೀಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net