

ಗುವಾಹಟಿ: ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ವಿದ್ಯಾರ್ಥಿಗಳು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಅಸ್ಸಾಂನ ಗುವಾಹಟಿಯ ಜಲುಕ್ಬರಿ ಪ್ರದೇಶದಲ್ಲಿ ನಡೆದಿದೆ.
ಅರಿಂದಮ್, ನಿಯೋರ್ ದೇಕಾ, ಕೌಶಿಕ್ ಮೋಹನ್, ಉಪಂಗ್ಶು ಶರ್ಮಾ, ರಾಜ್ ಕಿರಣ್ ಭುಯಾನ್, ಎಮನ್ ಹಾಗೂ ಕೌಶಿಕ್ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ.
ಭಾನುವಾರ ತಡರಾತ್ರಿ ಜಲುಕ್ಬರಿ ಪ್ರದೇಶದಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಜಲುಕ್‌ಬರಿ ಫ್ಲೈಓವರ್ ರಸ್ತೆಯಲ್ಲಿ ನಿಂತಿದ್ದ ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಘಟನೆ ಕುರಿತು ಮಾತನಾಡಿದ ಜಂಟಿ ಪೊಲೀಸ್ ಕಮಿಷನರ್ ತುಬೆ ಪ್ರತೀಕ್ ವಿಜಯ್ ಕುಮಾರ್, ಭಾನುವಾರ ತಡರಾತ್ರಿ ಜಲುಕ್ಬರಿ ಪ್ರದೇಶದಲ್ಲಿ ನಡೆದ ಸಂಭವಿಸಿದ ಅಪಘಾತದಲ್ಲಿ ಮೃತರು ವಿದ್ಯಾರ್ಥಿಗಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)