More

    ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಬೆಳಗ್ಗೆ 5ರಿಂದ ಸರತಿ ಸಾಲು!

    ಮಂಡ್ಯ: ಖಾಸಗಿ ಶಾಲೆಗಳ ಎದುರು ರಾತ್ರಿಯಿಂದಲೂ ಮಕ್ಕಳ ದಾಖಲಾತಿಗಾಗಿ ಜನರ ಕ್ಯೂ ಇದೆ ಎಂದರೆ ಆಶ್ಚರ್ಯ ಆಗಲಾರದು. ಆದರೆ ಇಲ್ಲೊಂದು ಅಪರೂಪದ ಘಟನೆ ಪತ್ತೆಯಾಗಿದ್ದು ಈ ಸರ್ಕಾರಿ ಶಾಲೆಯಲ್ಲೇ ಮಕ್ಕಳನ್ನು ದಾಖಲಿಸಬೇಕು ಎಂದು ಪೋಷಕರು ಬೆಳಗ್ಗೆ 5 ಗಂಟೆಯಿಂದ ನಿಂತಿದ್ದಾರೆ!

    ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಸರತಿ ಸಾಲು!

    ಹೌದು, ಇದು ನಂಬಲು ಕಠಿಣವಾದರೂ ಸತ್ಯ! ಈ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆಯ ಕೆ.ಆರ್​ ಪೇಟೆ ಸರ್ಕಾರಿ ಶಾಲೆಯಲ್ಲಿ. ಕೆ.ಆರ್.ಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಂದೆ ಸರದಿ ಸಾಲಿನಲ್ಲಿ ಪೋಷಕರು ನಿಂತಿದ್ದು ಹೈ ಸ್ಕೂಲ್‌ಗೆ ಮಕ್ಕಳನ್ನು ಸೇರಿಸಲು ಬೆಳಗ್ಗೆಯಿಂದ‌ ಕಾದು ಕುಳಿತಿದ್ದಾರೆ.

    ಇಲ್ಲಿ ಮೊದಲು ಬಂದವರಿಗೆ ಅವಕಾಶ!

    ಎಸ್‌ಎಸ್‌ಎಲ್‌ಸಿಯಲ್ಲಿ‌ ಉತ್ತಮ ಫಲಿತಾಂಶವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ನೀಡಿದ್ದು ಈ ಹಿನ್ನೆಲೆಯಲ್ಲಿ, ‘ನಮ್ಮ ಮಕ್ಕಳೂ ಇದೇ ಶಾಲೆಯಲ್ಲಿ ಓದಿ ಒಳ್ಳೆಯವರಾಗಲಿ’ ಎಂದು‌ ಪೋಷಕರು ಬೆಳಗ್ಗೆ 5 ಗಂಟೆಯಿಂದ ಟೋಕನ್‌ಗಾಗಿ ಕಾದು ಕುಳಿತಿದ್ದಾರೆ.

    ಇತ್ತೀಚೆಗೆ ಬೇಡಿಕೆ ಹೆಚ್ಚಿರುವ ಕಾರಣ ಶಾಲೆ ಪ್ರವೇಶಕ್ಕೆ ಟೋಕನ್ ಪದ್ಧತಿ ಶುರುಮಾಡಲಾಗಿದೆ. ಮೊದಲು ಟೋಕನ್ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿರುವ ಕಾರಣ ಬೆಳಗ್ಗೆಯಿಂದಲೇ ಶಾಲೆಯ ಮುಂದೆ ಕಾದು ಪೋಷಕರು ಕುಳಿತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts