'ಅದು ಒಂದೇ ಒಂದು ಆಗಿದ್ದಕ್ಕೆ ದೊಡ್ಡ ಅವಕಾಶ ತಪ್ಪಿ ಹೋಗಿತ್ತು': ನಟಿ ಹೀಗೆನ್ನಲು ಕಾರಣವಿದೆ ನೋಡಿ..

mannara chopra
Published on

ಮುಂಬೈ: ಮುಖದ ಮೇಲಿನ ಮೊಡವೆಯಿಂದ ಒಂದು ದೊಡ್ಡ ಅವಕಾಶ ತಪ್ಪಿ ಹೋಗಿತ್ತು ಎಂದು ಬಾಲಿವುಡ್ ನಟಿ, ಮಾಡೆಲ್ ಮನ್ನಾರಾ ಚೋಪ್ರಾ ಹೇಳಿದ್ದಾರೆ.

ಕೆಲವು ಸಿನಿಮಾಗಳಲ್ಲಿ ನಟಿಸಿ, ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸುತ್ತಿರುವ ನಟಿ ಮನ್ನಾರ್ ಚೋಪ್ರಾ ಜನರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಆಕೆ ಹಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ನಟಿ ಒಂದೇ ಒಂದು ಮೊಡವೆಯಿಂದ ದೊಡ್ಡ ಅವಕಾಶವೊಂದನ್ನು ಕಳೆದುಕೊಂಡಿದ್ದರು.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಮನ್ನಾರ್ ಚೋಪ್ರಾ, ಜಾಹೀರಾತುಗಳಲ್ಲಿ ನಟಿಸಲು ಹಲವು ಸುತ್ತುಗಳ ಆಡಿಷನ್ ನೀಡಿದ್ದೆ. ಕೊನೇ ಹಂತದವರೆಗೂ ಆಯ್ಕೆಯಾಗಿದ್ದೆ. ಆದರೆ ಇನ್ನೇನು ಶೂಟಿಂಗ್ ಮಾಡಬೇಕು ಎನ್ನುವಷ್ಟರಲ್ಲಿ ನನ್ನ ಹಣೆಯ ಮೇಲೆ ಮೊಡವೆ ಆಗಿತ್ತು. ಈ ಮೊಡವೆ ಶೂಟಿಂಗ್ ಗೆ ಹೋದಾಗ ಜಾಸ್ತಿ ಆಗಿತ್ತು.

ಅದನ್ನು ಮರೆಮಾಚಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಮನೆಗೆ ವಾಪಸ್ ಹೋಗುವಂತೆ ಸಂಸ್ಥೆಯವರು ಹೇಳಿದ್ದರು. ಅದು ನನ್ನ ಜೀವನದಲ್ಲಿ ಆದ ಮೊದಲ ರಿಜೆಕ್ಷನ್ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net