More

    ಕ್ಯಾಲಿಫೋರ್ನಿಯಾದಲ್ಲಿ ಭಯೋತ್ಪಾದಕ ಗೋಲ್ಡಿಬ್ರಾರ್ ಹತ್ಯೆ!

    ವಾಷಿಂಗ್ಟನ್: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗೋಲ್ಡಿ ಬ್ರಾರ್ (30) ಅಮೆರಿಕದಲ್ಲಿ ಹತ್ಯೆಗೀಡಾಗಿದ್ದಾನೆ.

    ಇದನ್ನೂ ಓದಿ: ಅಮಿತ್ ಶಾ ವಿಡಿಯೋ ಮಾರ್ಫಿಂಗ್ ಪ್ರಕರಣ..ಮೂವರು ಕಾಂಗ್ರೆಸ್ ಮುಖಂಡರ ಬಂಧನ!

    ಕ್ಯಾಲಿಫೋರ್ನಿಯಾದ ಫೇರ್‌ಮಾಂಟ್‌ನಲ್ಲಿರುವ ಹಾಲ್ಟ್ ಅವೆನ್ಯೂನ ಮನೆಯೊಂದರ ಮುಂದೆ ತನ್ನ ಸ್ನೇಹಿತನೊಂದಿಗೆ ನಿಂತಿದ್ದ ಗೋಲ್ಡಿ ಬ್ರಾರ್ ನನ್ನು ಅಮೆರಿಕಾದ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ ಅಪರಿಚಿತ ದುಷ್ಕರ್ಮಿಗಳು ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ.

    ಈ ಘಟನೆಯಲ್ಲಿ ಗೋಲ್ಡಿಬ್ರಾರ್ ಮತ್ತು ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಆ ವೇಳೆಗಾಗಲೇ ಗೋಲ್ಡಿ ಬ್ರಾರ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು.

    ಗೋಲ್ಡಿ ಬ್ರಾರ್ ನ ಪ್ರತಿಸ್ಪರ್ಧಿಗಳಾದ ಅರ್ಶ್ ದಲ್ಲಾ ಮತ್ತು ಲಖ್ಬೀರ್ ಕೊಲೆಗೆ ಕಾರಣವೆಂದು ಘೋಷಿಸಿದ್ದಾರೆ. ಗೋಲ್ಡಿಬ್ರಾರ್ ಅವರ ಹುಟ್ಟೂರು ಪಂಜಾಬ್‌ನ ಶ್ರೀಮುಕ್ತ್ಸರ್ ಸಾಹಿಬ್ ಆಗಿದೆ.

    1994 ರಲ್ಲಿ ಜನಿಸಿದ ಈತ 2021ರ ಫೆಬ್ರವರಿ 8ರಂದು, ತನ್ನ ಸಹೋದರ ಗುರುಲಾಲ್ ಬ್ರಾರ್ ನನ್ನು ಹತ್ಯೆಮಾಡಿದ್ದ ಕಾಂಗ್ರೆಸ್ ನಾಯಕ ಗುರುಲಾಲ್ ಪಹಿಲ್ವಾನ್ ನನ್ನು ಕೊಂದು ನಂತರ ವಿದ್ಯಾರ್ಥಿ ವೀಸಾದ ಮೇಲೆ ಕೆನಡಾಕ್ಕೆ ಪಲಾಯನ ಮಾಡಿದ್ದ.

    ಆಗಸ್ಟ್ 2021 ರಲ್ಲಿ, ಗೋಲ್ಡಿಯ ಇನ್ನೊಬ್ಬ ಸಹೋದರ ವಿಕ್ಕಿ ಮಿದ್ದುಖೇರಾ (ದರೋಡೆಕೋರ) ಮೊಹಾಲಿಯಲ್ಲಿ ಕೊಲೆಯಾದ. ಗಾಯಕ ಸಿಧು ಮೂಸೆವಾಲಾ ಅವರ ಮ್ಯಾನೇಜರ್ ಶಗನ್ ಪ್ರೀತ್ ಸಿಂಗ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಇದರೊಂದಿಗೆ ಗೋಲ್ಡಿ ಬ್ರಾರ್ ಕೆನಡಾದ ಮುಸೇವಾಲಾ ಕೊಲೆಗೆ ಸ್ಕೆಚ್ ಹಾಕಿದ್ದ. ಮೇ 29, 2022 ರಂದು ಅವರು ಮುಸೇವಾಲಾ ಅವರನ್ನು ಕೊಂದಿದ್ದರು.

    223 ನೌಕರರು ಔಟ್.. ದೆಹಲಿ ಲೆಫ್ಟಿನೆಂಟ್ ಗವರ್ನರ್ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts