ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಂದು (ಮೇ 02) 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ನ ಮೋಸ್ಟ್ ಸ್ಟೈಲಿಶ್ ಹೀರೋಯಿನ್ಗಳಲ್ಲಿ ಒಬ್ಬರಾದ ಅನುಷ್ಕಾ ಶರ್ಮಾ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಇತರೆ ಸೆಲೆಬ್ರಿಟಿಗಳಂತೆ ಅನುಷ್ಕಾ ಶರ್ಮಾ ಕೂಡ ಮದುವೆಗೂ ಮುನ್ನ ಡೇಟಿಂಗ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಸಾಮಾನ್ಯವಾಗಿ ನಾವು ನೋಡಿದಂತೆ ಬಾಲಿವುಡ್ನ ಅನೇಕ ಸ್ಟಾರ್ಸ್ ತಾವು ಮದುವೆಯಾಗುವುದಕ್ಕೂ ಮುನ್ನ ಡೇಟಿಂಗ್ ಅಥವಾ ಲಿವ್ ಇನ್ ರಿಲೇಷನ್ಶಿಪ್ನಲ್ಲಿರುವುದನ್ನು ಕೇಳಿದ್ದೇವೆ. ಅದೇ ರೀತಿ ಅನುಷ್ಕಾ ಶರ್ಮಾ ಕೂಡ ವಿರಾಟ್ ಕೊಹ್ಲಿ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಡೇಟಿಂಗ್ ಮಾಡಿದ್ದರು ಎಂಬ ವಿಚಾರ ಸಖತ್ ವೈರಲ್ ಆಗುತ್ತಿದೆ.
ಬಾಲಿವುಡ್ ಪ್ರವೇಶಿಸುವ ಮೊದಲು ಅನುಷ್ಕಾ ಶರ್ಮಾ ಜೊಹೆಬ್ ಯುಸೂಫ್ ಎಂಬುವವರನ್ನು ಡೇಟ್ ಮಾಡುತ್ತಿದ್ದರು, ಎಂದು ವರದಿಯಾಗಿದೆ. ಆದರೆ, ಇವರಿಬ್ಬರು ಅಧಿಕೃತವಾಗಿ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಮುಂದಿನ ದಿನಗಳಲ್ಲಿ ಈ ಇಬ್ಬರು ಕಾರಣಾಂತರಗಳಿಂದ ಬೇರಾದರು. ಅದಾದ ಬಳಿಕ ರಣವೀರ್ ಸಿಂಗ್ ಜೊತೆ ಅನುಷ್ಕಾ ಹೆಸರು ಕೇಳಿ ಬರಲು ಶುರುವಾಯಿತು. 2010ರಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದ ಬ್ಯಾಂಡ್ ಬಾಜಾ ಬರಾಟ್ ಬಿಡುಗಡೆ ಬಳಿಕ ಇವರಿಬ್ಬರು ಜೊತೆಯಾಗಿ ಓಡಾಡಲು ಶುರು ಮಾಡಿದರು ಎಂದು ಹೇಳಲಾಗಿದೆ. ದಿಲ್ ಧಡಕ್ನೆ ದೋ ಚಿತ್ರದ ಬಳಿಕ ಇವರಿಬ್ಬರು ದೂರಾಗಿದ್ದರು.
ಇದನ್ನೂ ಓದಿ: ಶಾರುಖ್ಗೆ ವಿರಾಟ್ ಕೊಹ್ಲಿ ಎಂದರೆ ಅಚ್ಚುಮೆಚ್ಚು; ಅನುಷ್ಕಾ ಪತಿಯನ್ನು ಕಿಂಗ್ ಖಾನ್ ಅಳಿಯ ಎಂದು ಕರೆಯುವುದೇಕೆ ಗೊತ್ತಾ?
2010ರಲ್ಲಿ ಬಿಡುಗಡೆಯಾದ ಬದ್ಮಾಶ್ ಕಂಪನಿ ಸಿನಿಮಾದಲ್ಲಿ ಶಾಹಿದ್ ಕಪೂರ್ ಜೊತೆ ಕಾಣಿಸಿಕೊಂಡ ಅನುಷ್ಕಾ ಶರ್ಮಾ ಇವರನ್ನು ಡೇಟ್ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಆದರೆ, ಇದರ ಬಗ್ಗೆ ಈ ಇಬ್ಬರು ನಟರು ಖಚಿತಪಡಿಸಿರಲಿಲ್ಲ. ಇದಾದ ಬಳಿಕ ಅನುಷ್ಕಾ ಶರ್ಮಾ ಅವರ ಹೆಸರು ರಣಬೀರ್ ಕಪೂರ್ ಅವರೊಂದಿಗೆ ತಳಕು ಹಾಇಕೊಂಡಿತ್ತು. ಆದರೆ, ಇವರಿಬ್ಬರು ಉತ್ತಮ ಸ್ನೇಹಿತರೆಂದು ಸ್ಪಷ್ಟನೆ ನೀಡಿದ್ದರು.
ಅನುಷ್ಕಾ ಶರ್ಮಾ ಬಾಲಿವುಡ್ನ ಅರ್ಜುನ್ ಕಪೂರ್ ಹಾಗೂ ಕ್ರಿಕೆಟಿಗ ಸುರೇಶ್ ರೈನಾ ಅವರನ್ನು ಡೇಟ್ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ, ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಕೆಲವೊಮ್ಮೆ ಪಾರ್ಟಿಯಲ್ಲಿ ಕಾಣಿಸಿಕೊಂಡ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದಾದ ಬಳಿಕ ವಿರಾಟ್ ಕೊಹ್ಲಿ ಅವರನ್ನು ಡೇಟ್ ಮಾಡಲು ಶುರು ಮಾಡಿದ ಅನುಷ್ಕಾ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.