ಇಬ್ಬರನ್ನು ಬಿಟ್ಟರೆ ಲಿಂಗಾಯತ ಸಚಿವರಿಗೆ ಸಿಗದ ಪ್ರಬಲ ಖಾತೆಗಳು!

mb patil sharan prakash patil
Published on

ಬೆಂಗಳೂರು: ನಿನ್ನೆ ರಾತ್ರಿ ಕೆಲ ನೂತನ ಶಾಸಕರಿಗೆ ಖಾತೆ ಹಂಚಲಾಗಿದ್ದು ಲಿಂಗಾಯತ ಸಚಿವರಿಗೆ ಪ್ರಬಲ ಖಾತೆಗಳು ಮಿಸ್ ಆಗಿವೆ. ಎಂಟು ಲಿಂಗಾಯತ ಸಚಿವರಿದ್ದು ಎರಡೇ ಪ್ರಬಲ ಖಾತೆಗಳು ಕೈಸೇರಿವೆ.

ಎಂಬಿ ಪಾಟೀಲ್​ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಿಕ್ಕಿದ್ದು ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಖಾತೆ ಪಡೆದಿದ್ದಾರೆ.

ಉಳಿದಂತೆ ಎಚ್ ಕೆ ಪಾಟೀಲ್​ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ, ಈಶ್ವರ್ ಖಂಡ್ರೆಗೆ ಅರಣ್ಯ ಖಾತೆ, ದರ್ಶನಾಪುರ್ ಗೆ ಸಣ್ಣ ಕೈಗಾರಿಕೆ ಖಾತೆ, ಶಿವಾನಂದ ಪಾಟೀಲ್​ಗೆ ಜವಳಿ ಮತ್ತು ಸಕ್ಕರೆ ಖಾತೆ, ಎಸ್ಎಸ್ ಮಲ್ಲಿಕಾರ್ಜುನಗೆ ಗಣಿ ಮತ್ತಿ ಭೂ ವಿಜ್ಞಾನ ಖಾತೆ ನೀಡಲಾಗಿದೆ.

ಇನ್ನು ಲಕ್ಷ್ಮಿ ಹೆಬ್ಬಾಳ್ಕರ್​ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net