More

    29 ರೂಪಾಯಿಯ ಷೇರು ಖರೀದಿಸಲು ಮುಗಿಬಿದ್ದ ಹೂಡಿಕೆದಾರರು: ಮೇ 6 ಮಹತ್ವದ ದಿನವಾಗಿದೆ ಏಕೆ?

    ಮುಂಬೈ:  ಹೂಡಿಕೆದಾರರು ಗುರುವಾರ ಗುಜರಾತ್​ ಟೂಲ್‌ರೂಮ್ ಲಿಮಿಟೆಡ್‌ನ ಷೇರುಗಳ ಮೇಲೆ ಮುಗಿಬಿದ್ದರು. ಇದರಿಂದಾಗಿ ಈ ಸ್ಟಾಕ್‌ ಅಪ್ಪರ್ ಸರ್ಕ್ಯೂಟ್ ಹಿಟ್​ ಆಯಿತು. ವಹಿವಾಟಿನ ಅಂತ್ಯದ ವೇಳೆಗೆ, ಈ ಷೇರಿನ ಬೆಲೆಯು 5% ರ ಅಪ್ಪರ್​ ಸರ್ಕ್ಯೂಟ್ ಹೊಡೆದು ರೂ 29.32 ಕ್ಕೆ ತಲುಪಿತು.

    ಈ ಷೇರುಗಳ ಬೆಲೆ ಸತತ ಎರಡನೇ ವಹಿವಾಟು ದಿನಗಳಲ್ಲಿ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಗಿದೆ. ಕಂಪನಿಯು ನಿರ್ದೇಶಕರ ಮಂಡಳಿಯ ಸಭೆಯ ದಿನಾಂಕವನ್ನು ಘೋಷಿಸಿ ಹಿನ್ನೆಲೆಯಲ್ಲಿ ಈ ಏರಿಕೆ ಕಂಡುಬಂದಿದೆ.

    ಕಂಪನಿ ಏನು ಹೇಳಿದೆ?:

    ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯನ್ನು 6 ಮೇ 2024 ಕ್ಕೆ ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ, ಇತರ ವಿಷಯಗಳ ಜತೆಗೆ, ಮಾರ್ಚ್ 31, 2024 ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ನಮ್ಮ ಪಟ್ಟಿಗೆ ನುರಿತ ಸಲಹೆಗಾರರ ​​ನೇಮಕವನ್ನು ಚರ್ಚಿಸಿ ನಿರ್ಧರಿಸಲಾಗುವುದು. ಇದು ಗುಜರಾತ್ ಟೂಲ್‌ರೂಮ್ ಲಿಮಿಟೆಡ್‌ನ ಭವಿಷ್ಯದ ನಿರೀಕ್ಷೆಗಳಲ್ಲಿ ನಮ್ಮ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಈ ಸ್ಮಾಲ್-ಕ್ಯಾಪ್ ಕಂಪನಿಯು ಮಾರುಕಟ್ಟೆಗೆ ತಿಳಿಸಿದೆ.

    ಇತ್ತೀಚೆಗೆ ಗುಜರಾತ್ ಟೂಲ್‌ರೂಮ್ ಲಿಮಿಟೆಡ್ ಗುಜರಾತ್‌ನಲ್ಲಿ ದೀರ್ಘಾವಧಿಯ ಗುತ್ತಿಗೆಯಲ್ಲಿ 65 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ನವೀಕರಿಸಬಹುದಾದ ಇಂಧನ ವಲಯಕ್ಕೆ ಪ್ರವೇಶಿಸಲು ಕಾರ್ಯತಂತ್ರದ ಕ್ರಮವನ್ನು ಘೋಷಿಸಿದೆ. ಸ್ವಾಧೀನಪಡಿಸಿಕೊಂಡ ಭೂಮಿಯು ಗುಜರಾತ್ ಟೂಲ್‌ರೂಮ್‌ನ ಮಹತ್ವಾಕಾಂಕ್ಷೆಯ ಹೈಬ್ರಿಡ್ ವಿದ್ಯುತ್ ಸ್ಥಾವರ ಯೋಜನೆಗೆ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಕಂಪನಿ 572 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಹೈಬ್ರಿಡ್ ವಿದ್ಯುತ್ ಸ್ಥಾವರವು ಗಂಟೆಗೆ 97.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ.

    ಈ ಕಂಪನಿಯು ಇತ್ತೀಚೆಗೆ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ 65 ಕೋಟಿ ರೂ. ಮೊತ್ತದ ಆರ್ಡರ್​ ಪಡೆದುಕೊಂಡಿದೆ. ಕಳೆದ ತಿಂಗಳು ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಗುಜರಾತ್ ಟೂಲ್‌ರೂಮ್​ಗೆ ರೂ. 29 ಕೋಟಿ ಮೌಲ್ಯದ ಆರ್ಡರ್ ದೊರೆತಿತ್ತು. ಈ ಮೂಲಕ ಒಟ್ಟು ಒಪ್ಪಂದದ ಮೊತ್ತ 200 ಕೋಟಿ ರೂ. ದಾಟಿದೆ. ಗುಜರಾತ್​ ಟೂಲ್​ರೂಮ್​ ಕಂಪನಿಯು ಆಮದು-ರಫ್ತು, ಮೂಲಸೌಕರ್ಯ ವಲಯದಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಕಂಪನಿಯಾಗಿದೆ.

    ದುಬೈ ಕಂಪನಿ ಜತೆ ರೈಲ್ವೆ ಸಿಗ್ನಲಿಂಗ್ ವ್ಯವಹಾರ ಒಪ್ಪಂದ: ಪಿಎಸ್​ಯು ಕಂಪನಿ ಷೇರುಗಳಿಗೆ ಭರ್ಜರಿ ಡಿಮ್ಯಾಂಡು

    ರೂ 593ರಿಂದ 240ಕ್ಕೆ ಕುಸಿದ ಷೇರು ಬೆಲೆ: ಸತತ 14 ದಿನಗಳ ಲೋವರ್​ ಸರ್ಕ್ಯೂಟ್​ ನಂತರ ಈಗ ಏರಿದ್ದೇಕೆ?

    ನೀವು ಈ ಐಪಿಒದಲ್ಲಿ ಹೂಡಿಕೆ ಮಾಡಿದರೆ ಮೊದಲ ದಿನವೇ ದುಪ್ಪಟ್ಟಾಗಬಹುದು ಹಣ: ಗ್ರೇ ಮಾರುಕಟ್ಟೆಯಲ್ಲಿ ಈಗಾಗಲೇ ಈ ಸ್ಟಾಕ್​ಗೆ 125% ಪ್ರೀಮಿಯಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts