More

  ಒಮ್ಮೆ ಹೋದ್ರೆ ಮತ್ತೆ ನೀವು ನನ್ನ ನೋಡೋದು ಡೌಟ್​; ನಿವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ಬಿಚ್ಚುಮಾತು, ಫ್ಯಾನ್ಸ್​ ಶಾಕ್!

  ನವದೆಹಲಿ: ಉತ್ತಮ ನಿರೀಕ್ಷೆಯೊಂದಿಗೆ ಐಪಿಎಲ್-2024 ಅಭಿಯಾನ ಆರಂಭಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತನ್ನ ಮೊದಲ ಪಂದ್ಯದಲ್ಲೇ ಸೋಲಿನಿಂದ ಲೀಗ್ ಪ್ರಾರಂಭಿಸಿತು. ಬಳಿಕ ಚೇತರಿಸಿಕೊಂಡು ಎರಡನೇ ಪಂದ್ಯ ಪಂಜಾಬ್ ವಿರುದ್ಧ ಗೆದ್ದು ಭರವಸೆ ಮೂಡಿಸಿತು. ಆದರೆ, ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಪಡೆ ಸತತ 6 ಪಂದ್ಯಗಳಲ್ಲಿ ಸೋಲುವ ಮೂಲಕ ಈ ಒಂದು ಹಂತದಲ್ಲಿ ಟ್ರೋಫಿ ಗೆಲ್ಲುವ ಆಸೆಯನ್ನೇ ಕೈ ಚೆಲ್ಲಿತ್ತು. ಆದರೆ, ಜಾದುವಿನಂತೆ ಲೀಗ್‌ನ ದ್ವಿತೀಯಾರ್ಧದಲ್ಲಿ ಪುಟಿದೆದ್ದ ರೀತಿ ನೋಡಿದ್ರೆ, ಈ ‘ಸಲ ಖಂಡಿತ ನಮ್ದೆ’ ಎಂಬ ಘೋಷಣೆ ಸತ್ಯವಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿದೆ. ಇನ್ನು ಸತತ 5 ಗೆಲುವಿನೊಂದಿಗೆ ಇಂದಿಗೂ ತಮ್ಮ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿರುವ ಆರ್​ಸಿಬಿಗೆ ಸಿಎಸ್​ಕೆ ವಿರುದ್ಧದ ಪಂದ್ಯ ಮಾತ್ರವಲ್ಲದೆ, ಉಳಿದ ಪ್ರತಿಯೊಂದು ಪಂದ್ಯಗಳು ಸಹ ಬಹಳ ಮುಖ್ಯವಾಗಿದೆ.

  ಇದನ್ನೂ ಓದಿ: ಅಬ್ಬರಿಸಲಿದೆ ಮುಂಗಾರು ಮಾರುತ; ವಾರ ಪೂರ್ತಿ ಮಳೆ ಸುರಿಯೋದು ಪಕ್ಕಾ

  ಸದ್ಯ ಏನೇ ಆದರೂ ಆರ್​ಸಿಬಿ ಪ್ಲೇಆಫ್​ ಕನಸು ಉಳಿಸಿಕೊಳ್ಳುವುದು ಬಲುಕಷ್ಟವಾಗಿದ್ದೇ ಆದರೂ ಒಂದು ರೀತಿ ಪವಾಡವೇ ನಡೆಯಬೇಕಿದೆ. ಆದರೂ ಅದು ಅಷ್ಟು ಸುಲಭವಲ್ಲ. ಸದ್ಯ ಈ ಎಲ್ಲಾ ಲೆಕ್ಕಾಚಾರಗಳ ಮಧ್ಯೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನೆಚ್ಚಿನ ಆಟಗಾರ, ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಇದೀಗ ತಮ್ಮ ಕ್ರಿಕೆಟ್ ನಿವೃತ್ತಿಯ ಬಗ್ಗೆ ಮುಕ್ತವಾಗಿ ಮಾತನಾಡಿರುವ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ ವಿರಾಟ್​ ಹೇಳಿದ್ದೇನು? ಎಂಬ ಸಂಗತಿ ಹೀಗಿದೆ ನೋಡಿ.

  ಪ್ರಸ್ತುತ ಐಪಿಎಲ್​ 17ನೇ ಆವೃತ್ತಿಯಲ್ಲಿ ಆರ್​ಸಿಬಿ ಪರ ಆಡುತ್ತಿರುವ ವಿರಾಟ್​, ಈ ಸೀಸನ್​ನಲ್ಲಿ ಇಲ್ಲಿಯವರೆಗೆ ಆಡಿದ ಅಷ್ಟು ಪಂದ್ಯಗಳಲ್ಲಿ ಒಂದು ಶತಕ ಮತ್ತು ಐದು ಅರ್ಧ ಶತಕ ಸಿಡಿಸುವ ಮೂಲಕ 600 ರನ್​ಗಳನ್ನು ಗಳಿಸಿ, ಆರೆಂಜ್​ ಕ್ಯಾಪ್​ ಪಡೆದುಕೊಂಡಿದ್ದಾರೆ. ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ‘ರನ್​ ಮಷಿನ್’​ ಮುಂಬರುವ ಪಂದ್ಯಗಳಲ್ಲಿ ತಂಡವನ್ನು ಗೆಲುವಿನೆಡೆಗೆ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದೇ ಅಭಿಮಾನಿಗಳು ಆಶಿಸಿದ್ದಾರೆ.

  See also  ಮಹಿಳೆಯೊಂದಿಗೆ ಅಸಭ್ಯ ವರ್ತನೆ ಆರೋಪ: ವ್ಯಕ್ತಿಯೊಬ್ಬನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

  ಇದನ್ನೂ ಓದಿ: ಆರ್​ಸಿಬಿ ಈ ಒಂದು ಕೆಲಸ ಮಾಡಿದ್ರೆ ಸಾಕು ಪ್ಲೇಆಫ್​ ಅಲ್ಲ ಕಪ್​ ಸಹ ಗೆಲ್ಲುತ್ತದೆ ಎಂದ ಮೊಹಮ್ಮದ್​ ಕೈಫ್​!

  ಸಕ್ಸಸ್​​ ಹಿಂದೆ ಯಾಕಿಷ್ಟು ಹಸಿವಿನಿಂದ ಓಡುತ್ತಿದ್ದೀರಿ ವಿರಾಟ್​? ಇದರ ಹಿಂದಿರುವ ಬಲವಾದ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, “ಇದು ತುಂಬ ಸರಳ. ಒಬ್ಬ ಕ್ರೀಡಾಪಟುವಾದ ಮೇಲೆ ಇಂದಲ್ಲ ನಾಳೆ, ನಮ್ಮ ವೃತ್ತಿಜೀವನದ ಅಂತಿಮ ದಿನಾಂಕವನ್ನು ನೋಡಲೇಬೇಕಿದೆ. ಆದ್ದರಿಂದಲೇ ನಾನು ಈ ರೀತಿ ಹೆಚ್ಚು ಶ್ರಮವಹಿಸಿ, ಮಿತಿಮೀರಿ ಕೆಲಸ ಮಾಡುತ್ತಿದ್ದೇನೆ. ಅಂದು ಇದನ್ನು ನಾನು ಮಾಡಲೇ ಇಲ್ಲ ಏಕೆ? ಎಂದು ನನ್ನ ಕರಿಯರ್ ಮುಗಿದ ಮೇಲೆ ಚಿಂತಿಸುತ್ತ ಕೂರಬಾರದು. ಅಂತಹ ಪರಿಸ್ಥಿತಿ ನನಗೆ ಬರಬಾರದು ಎಂದರೆ, ಇಂದು ಅದ್ಭುತ ಆಟ ಆಡಲೇಬೇಕಿದೆ” ಎಂದರು.

  “ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ನನಗೆ ಯಾವುದೇ ವಿಷಾದ ಇರಬಾರದು. ಖಂಡಿತವಾಗಿ ಆ ರೀತಿ ನಾನು ಮಾಡಿಕೊಳ್ಳುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಒಮ್ಮೆ ನಾನು ಇದನ್ನೆಲ್ಲಾ ಮುಗಿಸಿ, ಹೊರನಡೆದರೆ, ಖಂಸಿತ ಮತ್ತೆ ನೀವು ನನ್ನ ನೋಡೋದಿಲ್ಲ. ನಾನು ಆಡುವ ಕೊನೆವರೆಗೂ ನನ್ನಲ್ಲಿರುವ ಬೆಸ್ಟ್​ ಅನ್ನು ನೀಡಲು ಬಯಸುತ್ತೇನೆ. ಅದೊಂದೇ ನನ್ನನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ” ಎಂದು ಹೇಳಿದ್ದಾರೆ,(ಏಜೆನ್ಸೀಸ್).

  ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

  ಇದಕ್ಕೆಲ್ಲಾ ನನಗೆ ಕ್ಯಾಮರಾ ಬೇಕಿಲ್ಲ… ವಿಚ್ಛೇದನದ ಬಗ್ಗೆ ಕಡೆಗೂ ಮೌನ ಮುರಿದ ನಟಿ ಸಂಜೀದಾ ಶೇಖ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts