More

    ರೂ 593ರಿಂದ 240ಕ್ಕೆ ಕುಸಿದ ಷೇರು ಬೆಲೆ: ಸತತ 14 ದಿನಗಳ ಲೋವರ್​ ಸರ್ಕ್ಯೂಟ್​ ನಂತರ ಈಗ ಏರಿದ್ದೇಕೆ?

    ಮುಂಬೈ: ಸನ್ ಫಾರ್ಮಾ ಅಡ್ವಾನ್ಸ್ಡ್ ರಿಸರ್ಚ್ ಕಂಪನಿ (SPARC) ಲಿಮಿಟೆಡ್‌ನ ಷೇರುಗಳು ತಮ್ಮ 14 ದಿನಗಳ ಕುಸಿತದ ಪ್ರವೃತ್ತಿಯನ್ನು ಮುರಿದಿವೆ. ವಾರದ ಮೂರನೇ ವಹಿವಾಟಿನ ದಿನವಾದ ಗುರುವಾರ ಈ ಷೇರುಗಳ ಬೆಲೆ 4% ವರೆಗೆ ಏರಿಕೆ ಕಂಡಿತು.

    ವಹಿವಾಟಿನ ವೇಳೆ ಷೇರಿನ ಬೆಲೆ 243.85 ರೂಪಾಯಿ ತಲುಪಿತ್ತು. ಈ ಸ್ಟಾಕ್ ಸತತ 13 ವಹಿವಾಟು ದಿನಗಳಿಂದ 5% ಕುಸಿತ ಕಂಡು, ಲೋವರ್ ಸರ್ಕ್ಯೂಟ್ ಹಿಟ್ ಆಗುತ್ತ ಬಂದಿದೆ. ಕಳೆದ 14 ವಹಿವಾಟು ದಿನಗಳಲ್ಲಿ ಈ ಷೇರು ಬೆಲೆ 49% ರಷ್ಟು ಕುಸಿತ ಕಂಡಿದೆ. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 593.93 ಹಾಗೂ ಕನಿಷ್ಠ ಬೆಲೆ ರೂ. 35.17 ಇದೆ.

    ವೊಡೊಬೆಟಿನಿಬ್​ (vodobetinib) ಔಷಧ ಕುರಿತು PROSEEK ಅಧ್ಯಯನವನ್ನು ನಡೆಸಲಾಗಿತ್ತು. ಪಾರ್ಕಿನ್ಸನ್ ಕಾಯಿಲೆಯ ರೋಗಿಗಳ ಕುರಿತುಈ ಅಧ್ಯಯನವನ್ನು ಮಾಡಲಾಗಿದೆ. ಅಧ್ಯಯನದ ಫಲಿತಾಂಶಗಳ ಪ್ರಕಾರ, ವೊಡೊಬೆಟಿನಿಬ್ ತೆಗೆದುಕೊಳ್ಳುವ ರೋಗಿಗಳು ಚಿಕಿತ್ಸೆಯಲ್ಲಿ ಯಾವುದೇ ಪ್ರಯೋಜನವಾಗಿದ್ದು ಕಂಡುಬರಲಿಲ್ಲ. 442 ರೋಗಿಗಳು PROSEEK ಅಧ್ಯಯನದ ಭಾಗ-1 ಅನ್ನು ಪೂರ್ಣಗೊಳಿಸಿದ್ದಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಈಗ ಕಂಪನಿಯು ಅಧ್ಯಯನವನ್ನು ಕೈಬಿಡಲು ನಿರ್ಧರಿಸಿದೆ. ಇದು ಕಂಪನಿಗೆ ದೊಡ್ಡ ಹೊಡೆತವಾಗಿದೆ. ಇದನ್ನು ಪಾರ್ಕಿನ್ಸನ್ ಕಾಯಿಲೆ, ಲೆವಿ ದೇಹ ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್​ ಬಗ್ಗೆ ಅಧ್ಯಯನ ಮಾಡಲಾಗುತ್ತಿತ್ತು.

    ಪಾರ್ಕಿನ್ಸನ್ ಕಾಯಿಲೆಯು ಪ್ರಗತಿಶೀಲ ನರವೈಜ್ಞಾನಿಕ ಅಸ್ವಸ್ಥತೆಯಾಗಿದೆ. ಪಾರ್ಕಿನ್ಸನ್ ಕಾಯಿಲೆಗೆ ವೊಡಾಬಾಟಿನಿಬ್ ಔಷಧ ಮಾರಾಟದ ವ್ಯವಹಾರವು 5 ಶತಕೋಟಿ ಡಾಲರ್​ ಆಗಬಹುದೆಂದು ನಿರೀಕ್ಷಿಸಲಾಗಿತ್ತು.

    ಸನ್ ಫಾರ್ಮಾ ಅಡ್ವಾನ್ಸ್ಡ್ ರಿಸರ್ಚ್ ಕಂಪನಿಯಲ್ಲಿ 65.67 ರಷ್ಟು ಪಾಲು ಪ್ರವರ್ತಕರ ಬಳಿ ಇದೆ. ಸಾರ್ವಜನಿಕ ಷೇರುದಾರರು ಶೇಕಡಾ 34.33ಷೇರುಗಳನ್ನು ಹೊಂದಿದ್ದಾರೆ. ಪ್ರವರ್ತಕ ಘಟಕಗಳಲ್ಲಿ, ಶಾಂಘ್ವಿ ಫೈನಾನ್ಸ್ ಈ ಸ್ಪಾಕ್​ನಲ್ಲಿ 42.28% ಪಾಲನ್ನು ಹೊಂದಿದ್ದರೆ, ಸನ್ ಫಾರ್ಮಾದ ದಿಲೀಪ್ ಶಾಂಘ್ವಿ 19.05% ಪಾಲು ಹೊಂದಿದ್ದಾರೆ.

    ನೀವು ಈ ಐಪಿಒದಲ್ಲಿ ಹೂಡಿಕೆ ಮಾಡಿದರೆ ಮೊದಲ ದಿನವೇ ದುಪ್ಪಟ್ಟಾಗಬಹುದು ಹಣ: ಗ್ರೇ ಮಾರುಕಟ್ಟೆಯಲ್ಲಿ ಈಗಾಗಲೇ ಈ ಸ್ಟಾಕ್​ಗೆ 125% ಪ್ರೀಮಿಯಂ

     

    ಮಂಗಳವಾರ ಒಂದೇ ದಿನದಲ್ಲಿ 20% ಏರಿಕೆಯಾದ ಷೇರುಗಳು: ಈ 5 ಸ್ಟಾಕ್​ಗಳಿಗೆ ಗುರುವಾರವೂ ಡಿಮ್ಯಾಂಡು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts