More

    ದಾಖಲೆ ಬರೆದ ಬೆಳ್ಳಿ ಬೆಲೆ: ಸಾರ್ವಕಾಲಿಕ ಗರಿಷ್ಠ ದರ

    ನವದೆಹಲಿ: ಬುಲಿಯನ್ ಮಾರುಕಟ್ಟೆಯಲ್ಲಿ ಗುರುವಾರ 24 ಕ್ಯಾರೆಟ್ ಚಿನ್ನದ ಬೆಲೆ 542 ರೂಪಾಯಿ ಹೆಚ್ಚಾಗಿದ್ದು, 10 ಗ್ರಾಂಗೆ 73476 ರೂ. ಮುಟ್ಟಿದೆ. ಬೆಳ್ಳಿ ಪ್ರತಿ ಕೆಜಿಗೆ 1195 ರೂಪಾಯಿ ದುಬಾರಿಯಾಗಿದೆ. ಬೆಳ್ಳಿಯು ಪ್ರತಿ ಕೆಜಿಗೆ 85700 ರೂ. ಆಗಿದೆ. ಬುಧವಾರದಂದು ಬಂಗಾರದ ಬೆಲೆ 72934 ರೂ. ಮತ್ತು ಬೆಳ್ಳಿ ಬೆಲೆ 84505 ರೂ. ಇತ್ತು.

    2024 ರ ಏಪ್ರಿಲ್ 19 ರಂದು ಚಿನ್ನವು ಸಾರ್ವಕಾಲಿಕ ಗರಿಷ್ಠ ಬೆಲೆಯಾದ 73596 ರೂ. ಮುಟ್ಟಿತ್ತು. ಬೆಳ್ಳಿಯು 2024ರ ಮೇ 15 ರಂದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 84505 ರೂಪಾಯಿ ತಲುಪಿತ್ತು. ಅದರೆ, ಗುರುವಾರ ಈ ದಾಖಲೆ ಮುರಿದು ಬೆಳ್ಳಿ ಬೆಲೆಯು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 85700 ರೂ. ತಲುಪಿದೆ.

    ಇಂಡಿಯನ್​ ಬುಲಿಯನ್​ ಆ್ಯಂಡ್​ ಜುವೆಲ್ಲರ್ಸ್​ ಅಸೋಸಿಷಯೇಷನ್​ (ಐಬಿಜೆಎ) ದರಗಳ ಪ್ರಕಾರ, ಗುರುವಾರದಂದು 23 ಕ್ಯಾರೆಟ್ ಚಿನ್ನದ ದರವು 540 ರೂ. ಏರಿಕೆಯಾಗಿ ಪ್ರತಿ 10 ಗ್ರಾಂಗೆ 73182 ರೂ. ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 496 ರೂ. ಏರಿಕೆಯಾಗಿ 67304 ರೂ. ತಲುಪಿದೆ. 18 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 496 ರೂ. ದುಬಾರಿಯಾಗಿ 55107 ರೂ. ತಲುಪಿದೆ. 14 ಕ್ಯಾರೆಟ್ ಚಿನ್ನದ ಬೆಲೆ 318 ರೂ. ಏರಿಕೆಯಾಗಿ 42984 ರೂ. ಮುಟ್ಟಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts