ಮಾಜಿ ಪ್ರಧಾನಿಯ ನೆಚ್ಚಿನ ದೇವಸ್ಥಾನದಲ್ಲಿ ಭಕ್ತರ ತಲೆ ಮೇಲೆ ಕಾಲಿಟ್ಟ ಪುಡಿ ರೌಡಿ!

ganagapura
Published on

ಬೆಂಗಳೂರು: ಈ ದೇವಸ್ಥಾನ ಮಾಜಿ ಪ್ರಧಾನಿ ಸೇರಿದಂತೆ ಅನೇಕ ಮಾಜಿ ಮುಖ್ಯಮಂತ್ರಿಗಳ ನೆಚ್ಚಿನ ತಾಣ. ಇಲ್ಲಿಗೆ ದೇಶದ ವಿವಿಧಡೆಯಿಂದ ಸಾವಿರಾರು ಭಕ್ತರು ಬರುತ್ತಾರೆ. ಆದ್ರೆ ಇದೇ ದೇವಸ್ಥಾನದ ಸಂಗಮ ಸ್ಥಳದಲ್ಲಿ ಪುಡಿ ರೌಡಿಯ ದೌರ್ಜನ್ಯ ನಡೆಯುತ್ತಿದೆ.

ಈ ದೇವಸ್ಥಾನ ಮತ್ಯಾವುದೂ ಅಲ್ಲ, ಗಾಣಗಾಪುರದ ದತ್ತಾತ್ರೇಯನ ಸನ್ನಿಧಿ! ಇಲ್ಲಿ ಪುಡಿ ರೌಡಿಯಿಂದ ಭಕ್ತರಿಗೆ ದೌರ್ಜನ್ಯ ನಡೆದಿದ್ದು, ಈತ ಭಕ್ತರ ತಲೆ ಮೇಲೆ ಕಾಲಿಟ್ಟಿದ್ದಾನೆ. ಕಲಬುರಗಿ ಜಿಲ್ಲೆಯ ಅಫಜಲಪುರ ಗಾಣಗಾಪುರದಲ್ಲಿ ಪುಡಿ ರೌಡಿ ಉದ್ಧಟತನ ಮೆರೆದಿದ್ದು ಈತನನ್ನು ಯಲ್ಲಪ್ಪ ಕಲ್ಲೂರ್ ಎಂದು ಗುರುತಿಸಲಾಗಿದೆ. ವಿಚಿತ್ರ ಎಂದರೆ ಈತ ಗಾಣಗಾಪುರದ ನಿವಾಸಿ.

ಗಾಣಗಾಪುರದ ಸಂಗಮ ಸ್ಥಳದಲ್ಲಿರೋ ಔದುಂಬರ ವೃಕ್ಷದ ಕೆಳಗೆ ದತ್ತ ಚರಿತ್ರೆ ಪಾರಾಯಣವನ್ನು ಭಕ್ತರು ಮಾಡುತ್ತಾರೆ. ದತ್ತ‌ ಚರಿತ್ರೆ ಪಾರಾಯಣಕ್ಕೆ ಕೂತ ಸಮಯದಲ್ಲೇ ಭಕ್ತರ ತಲೆ ಮೇಲೆ ಕಾಲಿಟ್ಟು, ಹಲ್ಲೆ ಮಾಡಿದ ಈ ಯಲ್ಲಪ್ಪ ಕಲ್ಲೂರ್ ದೌರ್ಜನ್ಯ ಮಾಡಿದ್ದಾನೆ.

ಕಳೆದ ಕೆಲ ವರ್ಷಗಳಿಂದ ಭಕ್ತರಿಗೆ ಕಿರುಕುಳ ಯಲ್ಲಪ್ಪ ನೀಡುತ್ತಿರುವ ಆರೋಪ ಕೇಳಿಬಂದಿದ್ದು ನಲವತ್ತಕ್ಕೂ ಅಧಿಕ ಪ್ರಕರಣ ಇದ್ದರೂ ಪೊಲೀಸರು ಮಾತ್ರ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗಾಣಗಾಪುರ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net