More

    ಹಗಲಲ್ಲೇ ಲಾಂಗ್​ ಹಿಡಿದು ಕಾಲೇಜು ವಿದ್ಯಾರ್ಥಿಗಳನ್ನು ಅಟ್ಟಾಡಿಸಿದ ಪುಡಿ ರೌಡಿಗಳು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಬೆಂಗಳೂರು: ಪುಡಿ ರೌಡಿಗಳ ಅಟ್ಟಹಾಸಕ್ಕೆ ಬೆಚ್ಚಿ ಬಿದ್ದಿರುವ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳು ಆತಂಕದಲ್ಲೇ ದಿನ ದೂಡುತ್ತಿರವ ಪ್ರಕರಣ ಬೆಳಕಿಗೆ ಬಂದಿದೆ.

    ಮಟಮಟ ಮಧ್ಯಾಹ್ನವೇ ಪುಡಿ ರೌಡಿಗಳು ಲಾಂಗ್ ಹಿಡಿದು ವಿದ್ಯಾರ್ಥಿಗಳನ್ನು ಅಟ್ಟಾಡಿಸಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ಈ ಘಟನೆ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ವಾಣಿ ವಿದ್ಯಾಸಂಸ್ಥೆ ಬಳಿ ನಡೆದಿದೆ. ಪುಡಿ ರೌಡಿಗಳ ಹಾವಳಿಗೆ ಸ್ಥಳೀಯರ ಸಹ ಬೆಚ್ಚಿಬಿದ್ದಿದ್ದು, ನಗರದ ಕಾನೂನು ಸುವ್ಯವಸ್ಥೆಯ ಮೇಲೆ ಪ್ರಶ್ನೆ ಮಾಡುವಂತಿದೆ.

    ಲಾಂಗ್ ಹಿಡಿದು ವಿದ್ಯಾರ್ಥಿಗಳ ಬಳಿ ಪುಡಿ ರೌಡಿಗಳು ‌ಸುಲಿಗೆ ಮಾಡಿದ್ದಾರೆ. ಜೀವ ಉಳಿಸಿಕೊಳ್ಳಲು ಕೆಲವು ವಿದ್ಯಾರ್ಥಿಗಳು ಫ್ಯಾಕ್ಟರಿ ಶೆಡ್​ ಸೇರಿದರೆ, ಅಲ್ಲಿಗೂ ನುಗ್ಗಿದ ರೌಡಿಗಳು ವಿದ್ಯಾರ್ಥಿಗಳನ್ನು ಬೆದರಿಸಿದ್ದಾರೆ. ಒಂದೇ ದಿನ ಮೂರು ಕಡೆ ಸುಲಿಗೆ ಮಾಡಿದ್ದಾರೆ. ರೌಡಿಗಳ ಪುಂಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಾಂಗ್​ ಹಿಡಿದು ವಿದ್ಯಾರ್ಥಿಗಳನ್ನು ಅಟ್ಟಾಡಿಸಿಕೊಂಡು ಬರುತ್ತಿರುವ ದೃಶ್ಯ ಮತ್ತು ವಿದ್ಯಾರ್ಥಿಗಳು ಹೆದರಿ ಓಡುತ್ತಿರುವ ದೃಶ್ಯ ಸ್ಪಷ್ಟವಾಗಿ ಗೋಚರವಾಗುತ್ತದೆ.

    ಘಟನೆ ಬೆನ್ನಲ್ಲೇ ಎಚ್ಚೆತ್ತ ಮಾದನಾಯಕನ ಹಳ್ಳಿ ಪೊಲೀಸರು ಪುಡಿ ರೌಡಿಗಳ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    4 ರಾಜ್ಯಗಳ ಚುನಾವಣಾ ಗೆಲುವೇ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ: ಮಮತಾ ಬ್ಯಾನರ್ಜಿ ಕೊಟ್ಟ ವಿವರಣೆ ಹೀಗಿದೆ…

    ಪಾಕ್​ ಯುವತಿ ಜತೆ ಮದ್ವೆಯಾದ ಬೆನ್ನಲ್ಲೇ ಆತ್ಮಾಹುತಿ ದಾಳಿ ನಡೆಸಿದ ಕೇರಳದ M.Tech ವಿದ್ಯಾರ್ಥಿ!

    ಚಿರಂಜೀವಿ ಜತೆ ಶ್ರುತಿ; ಭೋಲಾ ಶಂಕರ್​ಗೆ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts