28 ಗಂಟೆ 45 ನಿಮಿಷಗಳಲ್ಲಿ ಸಿದ್ಧವಾಯ್ತು 10 ಮಹಡಿಯ ಬಿಲ್ಡಿಂಗ್​! ಮಹತ್ತರ ಸಾಧನೆ ಮಾಡಿ ತೋರಿದ ಚೀನಾ

aaa
Published on

ಬೀಜಿಂಗ್: ಚೀನಾ ಅನೇಕ ವಿಚಾರಗಳಲ್ಲಿ ಅಭಿವೃದ್ಧಿ ಕಂಡಿದೆ. ಇದೀಗ ಅದೇ ದೇಶ ಕೇವಲ 28 ಗಂಟೆ 45 ನಿಮಿಷಗಳಲ್ಲಿ 10 ಮಹಡಿಯ ಬಿಲ್ಡಿಂಗ್​ ನಿರ್ಮಿಸಿ ಮಹತ್ತರ ಸಾಧನೆಯೊಂದನ್ನು ಮಾಡಿದೆ.

ಚೀನಾದ ಚಾಂಗ್‌ಶಾದಲ್ಲಿರುವ ಬ್ರಾಡ್ ಗ್ರೂಪ್ ಇಂತದ್ದೊಂದು ಬಿಲ್ಡಿಂಗ್​ ನಿರ್ಮಿಸಿದೆ. ಪ್ರತಿ ಮಹಡಿಯ ಎಲ್ಲ ವಿನ್ಯಾಸಗಳನ್ನು ಮೊದಲೇ ಇಂಡಸ್ಟ್ರಿಯಲ್ಲಿ ತಯಾರಿಸಿಟ್ಟುಕೊಳ್ಳಲಾಗಿತ್ತು. ನಂತರ ಅದನ್ನು ಬಿಲ್ಡಿಂಗ್​ ನಿರ್ಮಿಸಬೇಕಾಗಿದ್ದ ಜಾಗಕ್ಕೆ ತಂದು ಒಂದರ ಮೇಲೆ ಒಂದರಂತೆ ಇಟ್ಟು ಬೋಲ್ಟ್​ ಮತ್ತು ನಟ್​ಗಳಿಂದ ಕನೆಕ್ಟ್​ ಮಾಡಲಾಗಿದೆ. ಪೂರ್ತಿ ವಿನ್ಯಾಸವಾದ ನಂತರ ಅದಕ್ಕೆ ವಿದ್ಯುತ್ ಮತ್ತು ನೀರು ಸರಬರಾಜಿನ ವ್ಯವಸ್ಥೆ ಮಾಡಲಾಗಿದೆ. ಈ ರೀತಿ ಒಂದೇ ಸ್ಥಳದಲ್ಲಿ ಬಿಲ್ಡಿಂಗ್​ ನಿರ್ಮಿಸಲು ತಗುಲಿದ ಸಮಯ 28 ಗಂಟೆ 45 ನಿಮಿಷ.

ಈ ರೀತಿಯ ಬಿಲ್ಡಿಂಗ್​ ನಿರ್ಮಾಣ ಮಾಡುವ ವಿಡಿಯೋವನ್ನು ಚಿತ್ರೀಕರಿಸಿ ಹರಿಬಿಡಲಾಗಿದೆ. ಬಿಲ್ಡಿಂಗ್​ ನಿರ್ಮಾಣ ಅತ್ಯಂತ ಸುಲಭವಾಗಿತ್ತು ಎಂದು ಬಿಲ್ಡಿಂಗ್​ ನಿರ್ಮಾದಲ್ಲಿ ತೊಡಗಿಸಿಕೊಂಡವರು ಹೇಳಿದ್ದಾರೆ. ಬಿಲ್ಡಿಂಗ್​ನ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net