ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

aaaaa
Published on

ಲಂಡನ್: ಪ್ರೀತಿಸಿ ಮದುವೆಯಾಗಿ ಗಂಡನೊಂದಿಗೆ ಹನಿಮೂನ್​ಗೆ ತೆರಳಿದ್ದ ಯುವತಿಗೆ ತನ್ನ ಪತಿ ಗಂಡಸಲ್ಲ ಬದಲಾಗಿ ಟ್ರಾನ್ಸ್​ಜೆಂಡರ್​ ಎನ್ನುವ ವಿಚಾರ ತಿಳಿದುಬಂದಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ. ಇದೀಗ ಆ ಯುವತಿ ತನ್ನ ಗಂಡನ ಸ್ತ್ರೀ ರೂಪವನ್ನು ಮತ್ತೊಮ್ಮೆ ಮದುವೆಯಾಗಲು ಸಿದ್ಧಳಾಗಿರುವುದಾಗಿ ಹೇಳಲಾಗಿದೆ.

ಬ್ರಿಟನ್​ನ ಜೆಕ್​(33) ಅಮೆರಿಕದ ಹಾರ್ವಿ (30) ಜತೆ 2007ರಲ್ಲಿ ಪರಿಚಯ ಮಾಡಿಕೊಂಡಿದ್ದ. 2010ರಿಂದ ಪ್ರೀತಿಯಲ್ಲಿದ್ದ ಜೋಡಿ 2018ರಲ್ಲಿ ಮದುವೆಯಾಗಿತ್ತು. ಮದುವೆಯಾಗಿ ಮೂರು ತಿಂಗಳ ನಂತರ ಈ ಜೋಡಿ ಬ್ರಿಟನ್​ನ ದ್ವೀಪವೊಂದಕ್ಕೆ ಹನಿಮೂನ್​ಗೆಂದು ಹೋಗಿತ್ತು. ಆಗ ಜೆಕ್​ ಸಂಪೂರ್ಣ ಪುರುಷನಲ್ಲ ಎನ್ನುವ ವಿಚಾರ ಹಾರ್ವಿಗೆ ತಿಳಿದುಬಂದಿದೆ. ತನ್ನ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವುದಾಗಿ ಜೆಕ್​ ಹೇಳಿಕೊಂಡಿದ್ದಾನೆ.

ಗಂಡನ ವಿಚಾರ ತಿಳಿದ ನಂತರ ಬೇಸರ ಮಾಡಿಕೊಳ್ಳದ ಹಾರ್ವಿ ಆತನಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ನಿರ್ಧರಿಸಿದ್ದಾಳೆ. ತಾನು ದುಡಿದು ಉಳಿಸಿದ್ದ 45 ಸಾವಿರ ಪೌಂಡ್ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾಳೆ. ನಂತರ ಅವಳಾಗಿ ಬದಲಾದ ಆತನಿಗೆ ರಾಯನಾ ಎಂದು ಹೆಸರಿಟ್ಟಿದ್ದಾಳೆ. ಆಕೆಗೆ ಮೇಕಪ್​ ಮಾಡುವುದು, ಡ್ರೆಸ್​ ತೊಡಿಸುವುದು ಹೀಗೆ ಸಂತೋಷದಿಂದ ಜೀವನ ಕಳೆಯಲಾರಂಭಿಸಿದ್ದಾರೆ. ಇದೀಗ ಹಾರ್ವಿ ರಾಯನಾ ಜತೆ ಮದುವೆ ಆಗುವ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾಳೆ. ಈ ದಂಪತಿಯ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net