ಪ್ರೀತ್ಸಲ್ಲ ಎಂದಿದ್ದಕ್ಕೆ ಚಾಕು ಚುಚ್ಚಿದ ಪಾಪಿ! ಯುವತಿಯ ಅಪ್ಪನ ಅಂಗಡಿಗೂ ಬಿತ್ತು ಬೆಂಕಿ!

kerala
Published on

ತಿರುವನಂತಪುರಂ: ಯುವತಿ ಪ್ರೀತಿಗೆ ಒಪ್ಪಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಯುವಕನೋರ್ವ ಆಕೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೇಳದ ಮಲಪ್ಪುರಂನ ಎಲನಾಡ್​ನಲ್ಲಿ ನಡೆದಿದೆ. ಯುವತಿಯ ತಂದೆಯ ಅಂಗಡಿಗೂ ಬೆಂಕಿ ಬಿದ್ದಿದ್ದು ಅದರಲ್ಲೂ ಅನುಮಾನಗಳು ಆರಂಭವಾಗಿವೆ.

21 ವರ್ಷದ ದೃಶ್ಯಾ ಕೊಲೆಯಾದ ಯುವತಿ. ದೃಶ್ಯಾಳನ್ನು ವಿನೇಶ್​ ವಿನೋದ್​ (21) ಹೆಸರಿನ ಯುವಕ ಪ್ರೀತಿಸುತ್ತಿದ್ದನಂತೆ. ಆದರೆ ಆಕೆ ಪ್ರೀತಿಗೆ ಒಪ್ಪಿರಲಿಲ್ಲ. ಅದೇ ಕಾರಣಕ್ಕೆ ಸಿಟ್ಟಾಗಿದ್ದ ವಿನೇಶ್​ ಗುರುವಾರ ಬೆಳಗ್ಗೆ 8.30ರ ಸಮಯಕ್ಕೆ ಯುವತಿಯ ಮನೆಗೆ ನುಗ್ಗಿದ್ದಾನೆ. ಆಕೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಅದನ್ನು ತಡೆಯಲು ಯುವತಿಯ ಸಹೋದರಿ ಬಂದಿದ್ದು ಆಕೆಯ ಮೇಲೂ ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ಹೇಳಲಾಗಿದೆ.

ಚಾಕು ಇರಿತದಿಂದಾಗಿ ದೃರ್ಶಯ ಸ್ಥಳದಲ್ಲೇ ಸಾವನಪ್ಪಿದ್ದಾಳೆ. ಆಕೆಯ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರಂದು ಯುವತಿಯ ತಂದೆಯ ಅಂಗಡಿಗೆ ಬೆಂಕಿ ಬಿದ್ದಿದೆ. ಅದರ ಹಿಂದೆಯೂ ವಿನೇಶ್​ನ ಕೈವಾಡವಿರಬಹುದು ಎನ್ನಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net