ಎಸ್​​ಐನಿಂದ ಡೈರೆಕ್ಟರ್​ವರೆಗೆ.. ಲೈಂಗಿಕ ಕಿರುಕುಳ ನೀಡಿದ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದ ನಟಿ!

actror
Published on

ತಿರುವನಂತಪುರಂ: ಕೇರಳದ ನಟಿಯೊಬ್ಬರು ಸೋಶಿಯಲ್​ ಮೀಡಿಯಾಗಳಲ್ಲಿ ಸೆಲೆಬ್ರಿಟಿಗಳು ಮತ್ತು ಅನೇಕ ಗಣ್ಯರ ವಿರುದ್ಧ ಗಂಭೀರ ಆರೋಪ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. 14 ಜನರ ಹೆಸರಿನ ಪಟ್ಟಿಯೊಂದನ್ನು ಬಿಡುಗಡೆ ಮಾಡಿ ಅವರೆಲ್ಲರೂ ತನಗೆ ಮಾನಸಿಕವಾಗಿ ಮತ್ತು ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗಿದೆ.

ಮಲಯಾಳಂ ಚಿತ್ರರಂಗದ ನಟಿ ರೇವತಿ ಸಂಪತ್​ ಇಂತದ್ದೊಂದು ಆರೋಪ ಮಾಡಿರುವ ನಟಿ. ಈಕೆ ತನ್ನ ಫೇಸ್​ಬುಕ್​ ಪೋಸ್ಟ್​ನಲ್ಲಿ 14 ಜನರ ಹೆಸರನ್ನು ಹೆಸರಿಸಿದ್ದಾಳೆ. ನಟ ಸಿದ್ದೀಕ್, ನಿರ್ದೇಶಕ ರಾಜೇಸ್​ ತೌಚ್​ರೈವರ್, ಡಿವೈಎಫ್​ಐ ನಾಯಕ ನಂದು ಅಶೋಕನ್ ಸೇರಿದಂತೆ ವೈದ್ಯಮ ಸಬ್​ ಇನ್​ಸ್ಪೆಕ್ಟರ್​ಗಳೂ ಪಟ್ಟಿಯಲ್ಲಿದ್ದಾರೆ. ಇವರೆಲ್ಲರೂ ನನಗೆ ಲೈಂಗಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಕಿರುಕುಳ ನೀಡಿದ್ದಾರೆ. ಇವರೆಲ್ಲರೂ ಅಪರಾಧಿಗಳು ಎಂದು ಆಕೆ ಆರೋಪಿಸಿದ್ದಾರೆ.

ನಟಿಯ ಈ ಪೋಸ್ಟ್​ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ನಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ. ಆದರೆ ಈ ರೀತಿ ಕಿರುಕುಳ ನೀಡಿದವರು ಎಂತದ್ದೇ ಸ್ಥಾನದಲ್ಲಿದ್ದರೂ ಅವರಿಗೆ ಶಿಕ್ಷೆಯಾಗಲೇಬೇಕೆಂದು ಅನೇಕರು ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net