

ಭೋಪಾಲ್: ಮಹಿಳೆಯೊಬ್ಬಳು ಗಂಡನೊಂದಿಗೆ ಫೋನಿನಲ್ಲಿ ಮಾತನಾಡುತ್ತಾ ಮನೆಯಿಂದ ಹೊರಹೋದವಳು ದೂರದ ಊರಿನ ರೈಲ್ವೆ ಹಳಿ ಬಳಿ ಮಾಂಸದ ತುಂಡಾಗಿ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಗ್ವಾಲಿಯರ್ನ ರೀತು ಹೆಸರಿನ ಮಹಿಳೆಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಗಂಡ ಎಂಬಿಬಿಎಸ್ ಮುಗಿಸಿದ್ದು ಪಿಜಿ ಮಾಡಲೆಂದು ಬಿಹಾರದ ಪಟನಾದಲ್ಲಿ ನೆಲೆಸಿದ್ದ. ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ರೀತು ಜೂನ್ 10ರಂದು ಗಂಡನೊಂದಿಗೆ ಫೋನ್ನಲ್ಲಿ ಮಾತನಾಡುತ್ತ ಮನೆಯಿಂದ ಹೊರಬಂದಿದ್ದಾಳೆ. ಹಾಗೆ ಹೊರಬಂದವಳು ವಾಪಸು ಮನೆಗೆ ಹೋಗೇ ಇಲ್ಲ.
ರೀತು ಕಾಣದಿರುವುದರ ಕುರಿತಾಗಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರಿಗೆ ಗುನಾ ಜಿಲ್ಲೆಯ ಮೈನಾ ರೈಲ್ವೆ ನಿಲ್ದಾಣ ರೈಲ್ವೆ ಹಳಿ ಬಳಿ ಯಾವುದೋ ಮಹಿಳೆಯ ದೇಹ ತುಂಡು ತುಂಡಾಗಿ ಪತ್ತೆಯಾಗಿರುವುದಾಗಿ ಮಾಹಿತಿ ಸಿಕ್ಕಿದೆ. ಸರಿಯಾಗಿ ಪರಿಶೀಲನೆ ನಡೆಸಿದಾಗ ರೀತು ಗ್ವಾಲಿಯರ್ನಿಂದ ಗುನಾಕ್ಕೆ ರೈಲಿನಲ್ಲಿ ಹೊರಟಿದ್ದು ಗ್ವಾಲಿಯರ್ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾಗಳಿಂದ ತಿಳಿದುಬಂದಿದೆ. ಅಲ್ಲಿ ತುಂಡಾಗಿ ಸಿಕ್ಕಿದ್ದ ಹೆಣವೂ ಕೂಡ ಆಕೆಯದ್ದೇ ಎಂದು ಗೊತ್ತಾಗಿದೆ. ದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ರೀತು ಯಾರಿಂದ ಏಕಾಗಿ ಕೊಲೆಯಾದಳು ಎನ್ನುವ ವಿಚಾರ ತನಿಖೆಯಿಂದ ತಿಳಿದುಬರಬೇಕಿದೆ. (ಏಜೆನ್ಸೀಸ್)