

ನೇಪಾಳ: ನೆರೆಯ ರಾಷ್ಟ್ರ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರ ಪತ್ನಿ ಸೀತಾ ದಹಲ್ ಬುಧವಾರ ನಿಧನರಾಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಸೆಮಿಫೈನಲ್‌ಗೇರಿದ ಭಾರತ: ನೇಪಾಳ ಎದುರು 2-0 ಜಯ
ಅವರಿಗೆ 69 ವರ್ಷ ವಯಸ್ಸಾಗಿತ್ತು. ಬುಧವಾರ ಬೆಳಗ್ಗೆ ಆಮ್ಲಜನಕದ ಪ್ರಮಾಣ ಕಡಿಮೆಯಾದ ನಂತರ ಆಕೆಯನ್ನು ಕಣ್ಮಂಡುವಿನ ನಾರ್ವಿಕ್ ಇಂಟರ್‌ನ್ಯಾಶನಲ್ ಅಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಕಠ್ಮಂಡು ಮೂಲದ ಮೈ ರಿಪಬ್ಲಿಕಾ ವರದಿ ಮಾಡಿದೆ .
“69 ವರ್ಷದ ಮಹಿಳೆ ಶ್ರೀಮತಿ. ಸೀತಾ ದಹಲ್, ಪ್ರೋಗ್ರೆಸ್ಸಿವ್ ಸುಪ್ರಾನ್ಯೂಕ್ಲಿಯರ್ ಪಾಲ್ಸಿ, ಪಾರ್ಕಿನ್ಸ್ನಿಸನ್, ಡಯಾಬಿಟಿಸ್ ಮೆಲ್ಲಿಟಸ್-II ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳಿಂದ ಬಳಲುತ್ತಿದ್ದು ಬೆಳಿಗ್ಗೆ 8 ಗಂಟೆ ಹೊತ್ತಿಗೆ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವಿಗೀಡಾದರು ಎಂದು ಆಸ್ಪತ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಅವರನ್ನು ತಕ್ಷಣ ವಿವಿಧ ತಂತ್ರಗಳನ್ನು ಬಳಸಿ ಪುನರುಜ್ಜೀವಿಸಲು ಪ್ರಯತ್ನಿಸಿದರೂ ವೈದ್ಯರು ಸಫಲರಾಗಲಿಲ್ಲ. ಬೆಳಗ್ಗೆ 8.33ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ದೀರ್ಘಕಾಲದಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಸೀತಾ ದಹಲ ತಮ್ಮ ಮೂವರು ಮಕ್ಕಳು ಹಾಗೂ ಪ್ರಧಾನಿಯನ್ನು ಅಗಲಿದ್ದಾರೆ.