ಜಾತ್ರಾ ಮಹೋತ್ಸವದಲ್ಲಿ ನಡೆಯಿತು ದಿಡೀರ್ ಅವಘಡ!

accident in fair
Published on

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧೆಡೆ ಗ್ರಾಮ ದೇವತೆಗಳನ್ನು ಪೂಜಿಸುವ ಜಾತ್ರಾ ಮಹೋತ್ಸವಗಳು ಅದ್ಧೂರಿಯಾಗಿ ನಡೆಯುತ್ತಿವೆ. ಇದರ ನಡುವೆ ಚಿಕ್ಕಬಳ್ಳಾಪುರ ನಗರದ ಕಂದವಾರ ಪೇಟೆಯಲ್ಲಿ ಉತ್ಸವ ದೇವರ ಪಲ್ಲಕ್ಕಿಯೊಂದಿಗೆ ಭಕ್ತರು ಕೆಳಗೆ ಬಿದ್ದ ವಿಡಿಯೋ ವೈರಲ್ ಆಗಿದೆ.

ಜಾತ್ರಾ ಮಹೋತ್ಸವದ ಕೊನೆಯ ದಿನದಂದು ಮನೆ ಮನೆಗೆ ತೆರಳಿ ಗ್ರಾಮ ದೇವತೆಗಳಿಗೆ ಜನರಿಂದ ಪೂಜೆ ಮಾಡಿಸಲಾಗುತ್ತಿದೆ. ಹಾಗೆಯೇ ಭಕ್ತರು ಪೂಜಾ ಕಾಣಿಕೆಯನ್ನು ಸಮರ್ಪಿಸಿ ಹರಕೆಯನ್ನು ತೀರಿಸಿಕೊಳ್ಳುತ್ತಿದ್ದಾರೆ.

ಅಸಲಿಗೆ ಆಗಿದ್ದೇನು?

ಚಿಕ್ಕಬಳ್ಳಾಪುರ ನಗರದ ಕಂದವಾರಪೇಟೆಯಲ್ಲಿನ ಕಂದವಾರ ಕೆರೆಯ ಬಳಿ ಮುತ್ತ್ಯಾಲಮ್ಮ, ಸಪ್ಪಲಮ್ಮ, ಗಂಗಮ್ಮ ಉತ್ಸವ ಮೂರ್ತಿಗಳನ್ನು ಸಮಿತಿ ಕಾರ್ಯಕರ್ತರು ಸಾಗಿದ್ದು ದೇವರು ಮೈ ಮೇಲೆ ಬಂದಂತೆ ಅತ್ತ ಇತ್ತ ಪಲ್ಲಕ್ಕಿಯನ್ನು ಹೊತ್ತುಕೊಂಡು ಓಡಾಡಿದ್ದು ಇದೇ ವೇಳೆ ಕಾಲು ಜಾರಿ ಹಲವರು ಪಲ್ಲಕ್ಕಿಯೊಂದಿಗೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಇದರಿಂದ ಹೆಚ್ಚಿನ ಪ್ರಾಣಾಪಾಯ ಸಂಭವಿಸುವುದು ತಪ್ಪಿದೆ. ಮತ್ತೊಂದೆಡೆ ಇದೊಂದು ಅಪಶಕುನ ಎಂಬುದಾಗಿ ಭಕ್ತಾದಿಗಳು ಉದ್ಘಾರ ತೆಗೆಯುತ್ತಿದ್ದಾರೆ.

ಗ್ರಾಮ ದೇವತೆಗಳು ಅಷ್ಟು ಸುಲಭವಾಗಿ ಶಾಂತಗೊಳ್ಳುವುದಿಲ್ಲ. ಮೈ ಮೇಲೆ ಬಂದು ಆಡಿಸುತ್ತವೆ.‌ ದೇವರ ಪಲ್ಲಕ್ಕಿಯನ್ನು ಹೊತ್ತು ಓಡಾಡುವುದು ಅಷ್ಟು ಸುಲಭವಲ್ಲ. ಅತ್ತಿಂದತ್ತ ಮನಸ್ಸಿಗೆ ಬಂದಂತೆ ದೇವರು ಎಳೆದೊಯ್ಯುತ್ತಾನೆ ಎಂದು ಭಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net