More

    Video Viral | ಶಾರ್ಕ್​ V/s ಅಂಡರ್​ಟೇಕರ್​! ಗೆದ್ದದ್ದು ಯಾರು?

    ನವದೆಹಲಿ: ಮಾಜಿ WWE ಸೂಪರ್‌ಸ್ಟಾರ್ ಅಂಡರ್‌ಟೇಕರ್ ಅವರ ಪತ್ನಿ ಮಿಚೆಲ್ ಮೆಕ್‌ಕೂಲ್ ಬೀಚ್‌ನಲ್ಲಿ ವಿಹಾರ ಮಾಡುತ್ತಿದ್ದಾಗ ಸಮುದ್ರದ ಬಳಿ ಶಾರ್ಕ್​ ಮೀನನ್ನು ಗುರುತಿಸಿದ್ದು ನಂತರ ಶಾರ್ಕ್ ವಿರುದ್ಧ ಅಂಡರ್​ಟೇಕರ್​ ನಿಂತರು ಎಂದು ವರದಿಯಾಗಿದೆ.

    ಜುಲೈ 9 ರಂದು ಒಂದೆರಡು ವೀಡಿಯೊಗಳು ಮತ್ತು ಸ್ಟಿಲ್ ಛಾಯಾಚಿತ್ರವನ್ನು ಒಳಗೊಂಡಿರುವ ಟ್ವಿಟ್ ಮೂಲಕ ಮೆಕೂಲ್ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಮೆಕ್​ಕೂಲ್ ಪ್ರಕಾರ, ಅವರು ಸಮುದ್ರತೀರದಲ್ಲಿ ಮಲಗಿ ಪುಸ್ತಕವನ್ನು ಓದುತ್ತಿದ್ದಾಗ ಈ ದೈತ್ಯ ಜೀವಿಯನ್ನು ಗಮನಿಸಿದ್ದಾರೆ. ಇದು ಶಾರ್ಕ್ ಎಂದು ಭಾವಿಸಿ, ತಕ್ಷಣವೇ ತನ್ನ ಪತಿ ಅಂಡರ್​ಟೇಕರ್​ಗೆ ಸಂದೇಶ ಕಳುಹಿಸಿದ್ದಾರೆ. ನಂತರ ನಾವು ನೋಡಿದ್ದು ಅಂಡರ್‌ಟೇಕರ್ ಶಾರ್ಕ್ ಪಕ್ಕದಲ್ಲಿ ನಿಂತಿರುವುದು. ಅವರು, WWE ಐಕಾನ್ ಶಾರ್ಟ್ಸ್ ಮತ್ತು ಕ್ಯಾನ್ನೊಂದಿಗೆ ಕಪ್ಪು ಟೀ ಧರಿಸಿದ್ದರು.

    ಈ ಟ್ವಿಟರ್​ ಪೋಸ್ಟ್​ಗೆ ನಾನಾ ರೀತಿಯ ಕಾಮೆಂಟ್​ಗಳು ಬಂದಿದ್ದು ಅಭಿಮಾನಿಯೊಬ್ಬರಂತೂ, ಶಾರ್ಕ್​ ಮೀನು ಬದುಕುಳಿದದ್ದು ಪುಣ್ಯ ಎಂದು ಬರೆದಿದ್ದಾರೆ.

    ನಂತರ ಈ ಕುರಿತಾಗಿ ಸ್ಪಷ್ಟನೆ ನೀಡಿದ ಮೆಕ್​ಕೂಲ್, ಈ ಕುರಿತಾಗಿ ಸ್ಪಷ್ಟನೆ ನೀಡಿದ್ದು, ಅದು ನರ್ಸ್​ ಶಾರ್ಕ್​ ಎಂಬ ಅಪಾಯಕಾರಿ ಅಲ್ಲದ ಶಾರ್ಕ್​ ಎಂದು ಹೇಳಿದ್ದು, ಆ ಸಂದರ್ಭದಲ್ಲಿ ಅಂಡರ್​ಟೇಕರ್​ಗೆ ಈ ಮಾಹಿತಿ ತಿಳಿದಿರಲಿಲ್ಲ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts