More

    ಮಹಿಳೆಯ ಹೊಟ್ಟೆ ಸ್ಕ್ಯಾನ್​ ಮಾಡಿದಾಗ ವೈದ್ಯರಿಗೆ ಕಾದಿತ್ತು ಶಾಕ್! ಪತ್ತೆಯಾಯ್ತು 11.5 ಕೆ.ಜಿ. ಗಡ್ಡೆ…

    ತುಮಕೂರು: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಗೆಡ್ಡೆ ಬೆಳೆಯುವುದು ತೀರ ಸಾಮಾನ್ಯ ವಿಚಾರವಾಗಿದ್ದು, ಪತ್ತೆಯಾದ ತಕ್ಷಣ ಸುಲಭವಾಗಿ ಚಿಕಿತ್ಸೆ ಸಿಗುತ್ತಿದೆ. ಸಾಮಾನ್ಯವಾಗಿ ಗೆಡ್ಡೆ ಬೆಳೆದ ಕೆಲ ಸಮಯದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ.

    ಈ ಪ್ರಕರಣದಲ್ಲಿ ಮಾತ್ರ ವೈದ್ಯರು, ಮಹಿಳೆಯ ಹೊಟ್ಟೆಯಿಂದ 11.5 ಕೆ.ಜಿ ತೂಕದ ಗೆಡ್ಡೆಯನ್ನು ಹೊರತೆಗೆದಿದ್ದಾರೆ. ಈ ಅಪರೂಪದ ಘಟನೆ, ತುಮಕೂರು ಜಿಲ್ಲೆ, ತಿಪಟೂರು ಪಟ್ಟಣದ ಕುಮಾರ್ ಆಸ್ಪತ್ರೆಯಲ್ಲಿ ನಡೆದಿದೆ.

    ಮಹಿಳೆಯ ಹೊಟ್ಟೆ ಸ್ಕ್ಯಾನ್​ ಮಾಡಿದಾಗ ವೈದ್ಯರಿಗೆ ಕಾದಿತ್ತು ಶಾಕ್! ಪತ್ತೆಯಾಯ್ತು 11.5 ಕೆ.ಜಿ. ಗಡ್ಡೆ…

    ತಿಪಟೂರು ಪಟ್ಟಣದ ಗಾಂಧಿನಗರದ ಮೂಲದ 45 ವರ್ಷದ ಮಹಿಳೆ ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದರು, ಈ ವೇಳೆ ಪರೀಕ್ಷೆಯಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದೆ.

    ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಿದ ಕುಮಾರ್ ಆಸ್ಪತ್ರೆಯ ವೈದ್ಯ ಡಾ ಶ್ರೀಧರ್ ಮತ್ತು ಅವರ ತಂಡದವರು, 11.5 ಕೆ.ಜಿ. ತೂಕದ ಗೆಡ್ಡೆ ಹೊರತೆಗೆದಿದ್ದಾರೆ. ಕಳೆದ ಭಾನುವಾರ ಮಾಡಿರುವ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದ್ದು ಯಶಸ್ವಿಯಾಗಿದೆ. ಮಹಿಳೆ ಸದ್ಯ ಆರೋಗ್ಯವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts