More

    60 ವರ್ಷದ ವ್ಯಕ್ತಿಯ ಕಿಡ್ನಿಯಲ್ಲಿದ್ದ ಬರೋಬ್ಬರಿ 418 ಕಲ್ಲುಗಳನ್ನು ಹೊರ ತೆಗೆದ ವೈದ್ಯರು!

    ಹೈದರಾಬಾದ್​: ಕಿಡ್ನಿಯಲ್ಲಿ ಒಂದೆರೆಡು ಕಲ್ಲುಗಳು ಇರುವುದನ್ನು ನಾವು ನೋಡಿದ್ದೇವೆ. ಆದರೆ, ಹೈದರಾಬಾದ್​ ಮೂಲದ ವ್ಯಕ್ತಿಯೊಬ್ಬನ ಕಿಡ್ನಿಯಿಂದ ಬರೋಬ್ಬರಿ 418 ಕಲ್ಲುಗಳನ್ನು ಆಪರೇಷನ್​ ಮೂಲಕ ಹೊರತೆಗೆಯಲಾಗಿದ್ದು, ವೈದ್ಯರನ್ನೇ ಅಚ್ಚರಿಗೆ ದೂಡಿದೆ.

    ಕೆಲ ದಿನಗಳಿಂದ 60 ವರ್ಷದ ವ್ಯಕ್ತಿಯು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ. ಆತನ ಕಿಡ್ನಿ ಕಾರ್ಯ ತೀವ್ರವಾಗಿ ದುರ್ಬಲವಾಗಿತ್ತು. ಶೇ. 27 ರಷ್ಟು ಕಿಡ್ನಿ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಆ ವ್ಯಕ್ತಿ ಆಗಾಗ ನೋವಿನಿಂದ ಬಳಲುತ್ತಿದ್ದರು. ನೋವನ್ನು ಸಹಿಸಲಾಗದ ಆತ ಹೈದರಾಬಾದ್‌ನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಯುರಾಲಜಿ (AINU) ನಲ್ಲಿ ವೈದ್ಯರನ್ನು ಭೇಟಿಯಾದರು.

    ವ್ಯಕ್ತಿಯ ಕಿಡ್ನಿ ಕಾರ್ಯವನ್ನು ಪರೀಕ್ಷಿಸಿದ ವೈದ್ಯರು ಒಂದು ಕ್ಷಣ ಶಾಕ್​ ಆದರು. ಕಿಡ್ನಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲುಗಳಿರುವುದನ್ನು ವೈದ್ಯರು ದೃಢಪಡಿಸಿ, ಆಪರೇಷನ್ ಮಾಡಲೇಬೇಕಿದೆ ಎಂದು ಸೂಚಿಸಿದರು. ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡ ವೈದ್ಯರು ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನ ಬಳಸಿ ರೋಗಿಯ ಕಿಡ್ನಿಯಿಂದ ಕಲ್ಲುಗಳನ್ನು ಹೊರತೆಗೆದಿದ್ದಾರೆ. ಒಂದಲ್ಲ.. ನೂರಲ್ಲ.. ಬರೋಬ್ಬರಿ 418 ಕಲ್ಲುಗಳನ್ನು ಏಕಕಾಲಕ್ಕೆ ಯಶಸ್ವಿಯಾಗಿ ಹೊರತೆಗೆಯಲಾಗಿದೆ.

    ಡಾ.ಕೆ.ಪೂರ್ಣಚಂದ್ರ ರೆಡ್ಡಿ, ಡಾ.ಗೋಪಾಲ್ ಮತ್ತು ಡಾ.ದಿನೇಶ್ ನೇತೃತ್ವದ ಮೂತ್ರಶಾಸ್ತ್ರಜ್ಞರ ತಂಡವು ಸುಧಾರಿತ ಶಸ್ತ್ರಚಿಕಿತ್ಸಾ ತಂತ್ರಗಳನ್ನು ಬಳಸಿಕೊಂಡು ಈ ಆಪರೇಷನ್​ ಪೂರ್ಣಗೊಳಿಸುವ ಮೂಲಕ ಅಪರೂಪದ ಸಾಧನೆಯನ್ನು ಮಾಡಿದೆ. ಸುಮಾರು ಎರಡು ಗಂಟೆಗಳ ಕಾಲ ಆಪರೇಷನ್​ ನಡೆಯಿತು.

    ಚಿಕ್ಕ ಕ್ಯಾಮೆರಾದೊಂದಿಗೆ ಲೇಸರ್ ಪ್ರೋಬ್‌ಗಳು ಮತ್ತು ವಿಶೇಷ ಉಪಕರಣಗಳನ್ನು ಬಳಸಿಕೊಂಡು ಯಾವುದೇ ಸರ್ಜರಿ ಇಲ್ಲದೆ ಕಿಡ್ನಿ ಕಲ್ಲುಗಳನ್ನು ತೆಗೆದುಹಾಕಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೆರ್ಕ್ಯುಟೇನಿಯಸ್ ನೆಫ್ರೊಲಿಥೊಟೊಮಿ (ಪಿಸಿಎನ್‌ಎಲ್) ಮೂಲಕ ಕಡಿಮೆ ಹಾನಿಕಾರಕ ರೀತಿಯಲ್ಲಿ ಆಪರೇಷನ್​ ನಡೆಸಲಾಗಿದೆ ಎಂದು ವೈದ್ಯಕೀಯ ತಂಡ ತಿಳಿಸಿದೆ. ಸದ್ಯ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್​ ಆಗಲಿದ್ದಾರೆ. (ಏಜೆನ್ಸೀಸ್​)

    ಕಿಡ್ನಿ ಸ್ಟೋನ್ ಇದೆ ಅಂತ ಗೊತ್ತಾಗುವುದು ಹೇಗೆ? ಅದನ್ನು ಗುಣಪಡಿಸಲು ಇರುವ ಮನೆಮದ್ದು ಏನು?

    ಕಿಡ್ನಿ ಕಲ್ಲುಗಳಿಗೆ ಹೋಮಿಯೋಕೇರ್ ಪರಿಹಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts