More

    ರಿಯಲ್ ಲೈಫ್ ಸಿಂಗಂ ನೋಡಬಯಸುತ್ತೀರಾ? ಇವರು ಉಳಿಸಿದ್ದು 300ಕ್ಕೂ ಹೆಚ್ಚು ಕುಟುಂಬಗಳನ್ನು!

    ಬಾಗ್‌ಪತ್: ಸಿಂಗಂ ಚಿತ್ರದ ಡ್ಯಾಶಿಂಗ್ ಪೊಲೀಸ್ ಅಧಿಕಾರಿಯ ಪಾತ್ರ ನಿಮಗೆಲ್ಲ ನೆನಪಿಬಹುದು. ಆದರೆ ನೀವು ಅಂತಹ ಪೊಲೀಸ್ ಅಧಿಕಾರಿಯನ್ನು ನೋಡಲು ಬಯಸಿದರೆ, ನಿಮ್ಮ ಆಸೆ ಈಡೇರುವುದು ಅಪರೂಪಕ್ಕೆ. ಅಂತಹ ಅಪರೂಪದ ಆಫೀಸರ್​ ಈ ಲೇಡಿ ಪೊಲೀಸ್!

    ಇವರು ಉತ್ತರಪ್ರದೇಶದ ಬಾಗ್‌ಪತ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಲೇಡಿ ಸಿಂಗಮ್ ಹೆಸರು ಮಧು ಠಾಕೂರ್ ಎಂದು. ಇವರು ಜನರ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಪರಿಹರಿಸುವುದಕ್ಕೆ ಹೆಸರುವಾಸಿ.

    ರಿಯಲ್ ಲೈಫ್ ಸಿಂಗಂ ನೋಡಬಯಸುತ್ತೀರಾ? ಇವರು ಉಳಿಸಿದ್ದು 300ಕ್ಕೂ ಹೆಚ್ಚು ಕುಟುಂಬಗಳನ್ನು!

    ಇದನ್ನೂ ಓದಿ: ಭಾವಿ ಪತಿಯನ್ನೇ ಬಂಧಿಸಿ ಲೇಡಿ ಸಿಂಗಂ ಎನಿಸಿಕೊಂಡಿದ್ದ ಜುನ್ಮೊನಿ ರಭಾ ದುರಂತ ಸಾವು

    ಮಧು ಠಾಕೂರ್, ಬಾಗ್‌ಪತ್ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿ. 10 ತಿಂಗಳ ಹಿಂದೆ ಅವರು ಮಹಿಳಾ ಪೊಲೀಸ್ ಠಾಣೆ ಪ್ರಭಾರ ವಹಿಸಿಕೊಂಡಿದ್ದರು. ಅವರ ಕೆಲಸದ ಶೈಲಿ ಮತ್ತು ಸಹಕಾರ ಮನೋಭಾವವನ್ನು ಕಂಡ ಸ್ಥಳೀಯರು ಲೇಡಿ ಸಿಂಗಮ್ ಎಂದು ಪ್ರೀತಿಯಿಂದ ಕರೆಯುತ್ತಾರೆ.

    ಪತಿ-ಪತ್ನಿಯರ ನಡುವಿನ ಜಗಳವಾಗಲಿ, ವಧು-ವರರ ನಡುವಿನ ಜಗಳವಾಗಲಿ, ಏನೇ ಇದ್ದರೂ ಅವರಿಗೆ ವಿಷಯ ತಲುಪಿದ ಕೂಡಲೇ ಬಗೆಹರಿಯುತ್ತದೆ ಎಂಬುದು ಜನರ ನಂಬಿಕೆ. ಹೀಗೆ ಅವರು ಇಲ್ಲಿಯವರೆಗೆ 300ಕ್ಕೂ ಹೆಚ್ಚು ಕುಟುಂಬಗಳನ್ನು ಒಡೆಯದಂತೆ ಉಳಿಸಿದ್ದಾರೆ.

    ಇದನ್ನೂ ಓದಿ: ಮತ್ತೆ ‘ಸಿಂಗಂ’ ಆಗಲು ಅಜಯ್​ ದೇವಗನ್​ ರೆಡಿ; ಮುಂದಿನ ವರ್ಷ ಪ್ರಾರಂಭವಾಗಲಿದೆ ಮೂರನೆಯ ಭಾಗ 

    ರಿಯಲ್ ಲೈಫ್ ಸಿಂಗಂ ನೋಡಬಯಸುತ್ತೀರಾ? ಇವರು ಉಳಿಸಿದ್ದು 300ಕ್ಕೂ ಹೆಚ್ಚು ಕುಟುಂಬಗಳನ್ನು!

    ಪತಿ-ಪತ್ನಿಯರ ನಡುವಿನ ಜಗಳಗಳು ಪ್ರತಿ ಮನೆಯಲ್ಲೂ ನಡೆಯುವ ವಿಷಯ. ಬಾಗ್​ಪತ್ ಇದಕ್ಕೆ ಹೊರತಾಗಿರಲಿಲ್ಲ. ಹಿಂದಿನಂತೆ ಈಗಲೂ ಕೌಟುಂಬಿಕ ಕಲಹ ಹೆಚ್ಚಾದಾಗ ಜನ ಠಾಣೆಗೆ ಧಾವಿಸುತ್ತಾರೆ. ಪ್ರಕರಣ ದಾಖಲಾಗುತ್ತದೆ. ಆದರೆ, ಪತಿ-ಪತ್ನಿ ಎಷ್ಟು ದಿನವಾದರೂ ಠಾಣೆಗೆ ಬರುವುದಿಲ್ಲ. ಈ ವಿವಾದಗಳು ಬಹುತೇಕ ಲೇಡಿ ಸಿಂಗಮ್ ಮಧು ಠಾಕೂರ್ ಪೊಲೀಸ್ ಠಾಣೆಯಲ್ಲಿಯೇ ಇತ್ಯರ್ಥ ಮಾಡಿಬಿಡುತ್ತಾರೆ. ಬಾಗ್​ಪತ್ ಪೊಲೀಸ್ ಠಾಣೆಯಲ್ಲಿ 350 ಪ್ರಕರಣಗಳು ಬಂದಿದ್ದು, ಈವರೆಗೆ ಮಧು ಠಾಕೂರ್​ 300 ಪ್ರಕರಣಗಳನ್ನು ರಾಜಿ ಮಾಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ತನ್ನನ್ನು ತಾನೇ ಲೇಡಿ ಸಿಂಗಂ ಎಂದು ಕರೆದುಕೊಂಡು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಸಬ್​​ ಇನ್ಸ್​ಪೆಕ್ಟರ್​! ​

    ಈ ಕುರಿತಾಗಿ ಪ್ರತಿಕ್ರಿಯೆ ನೀಡುವ ಅವರು, “ನಾನು ಸಮಸ್ಯೆಗಳನ್ನು ಹತ್ತಿರದಿಂದ ಆಲಿಸಿ ಎರಡೂ ಕಡೆಯವರಿಗೆ ವಿವರಿಸಿ ಒಪ್ಪಿಸುತ್ತೇನೆ. ಇದು ಸಾಮಾಜಿಕ ಜಾಲತಾಣಗಳ ಯುಗ. ಪರಸ್ಪರ ಅನುಮಾನವೇ ಜಗಳಗಳಿಗೆ ದೊಡ್ಡ ಕಾರಣವಾಗಿದೆ. ಎರಡೂ ಕಡೆಯವರ ಮಾತನ್ನು ಆಲಿಸಿದ ನಂತರ, ಪರಿಸ್ಥಿತಿಯನ್ನು ಜನರಿಗೆ ವಿವರಿಸಿ ಕುಟುಂಬಗಳು ಒಟ್ಟಿಗೆ ಇರುವಂತೆ ಮನವೊಲಿಸುತ್ತೇನೆ” ಎಂದು ತಮ್ಮ ಕಾರ್ಯ ಶೈಲಿಯನ್ನು ವಿವರಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts