More

    ಧಾರವಾಡದಲ್ಲಿ ಹಣ ಕಟ್ಟಿದ್ದರೂ ಬಾಕಿ ತೋರಿಸುತ್ತಿರುವ ಬಿಲ್! ಜನತೆ ಗರಂ…

    ಧಾರವಾಡ: ಧಾರವಾಡದಲ್ಲಿ ಇದೀಗ ವಿದ್ಯುತ್ ಬಿಲ್ ಗದ್ದಲ ಶುರುವಾಗಿದ್ದು, ಬಿಲ್ ತಿದ್ದುಪಡಿ ಮಾಡಿಸಲು ನೂಕುನುಗ್ಗಲು ಶುರುವಾಗಿದೆ.

    ಹಳೇ ಬಾಕಿಯನ್ನು ಪಾವತಿಸಿದ್ದರೂ ಮತ್ತೊಮ್ಮೆ ಬಿಲ್‌ನಲ್ಲಿ ಅರಿಯರ್ಸ್​ ಎಂದು ಸೇರ್ಪಡೆಗೊಂಡಿದೆ. ಇದರಿಂದಾಗಿ ಧಾರವಾಡದ ಹೆಸ್ಕಾಂ ಕಚೇರಿಯಲ್ಲಿ ಗದ್ದಲ ಉಂಟಾಗಿದ್ದು ಹೆಚ್ಚು ಬಿಲ್ ಬಂದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇದನ್ನೂ ಓದಿ: ವಿದ್ಯುತ್ ಬಿಲ್ ಭಾಗಶಃ ಪಾವತಿ ಅವಕಾಶ: ಎಇಇಗೆ ಲಿಖಿತ ಮನವಿ ಸಲ್ಲಿಸಿದರೆ ಸೌಲಭ್ಯ; ಎಲ್ಲ ಬಗೆಯ ಗ್ರಾಹಕರಿಗೆ ನಿಯಮ ಅನ್ವಯ

    ಧಾರವಾಡ ವಿದ್ಯಾಗಿರಿಯಲ್ಲಿರುವ ಹೆಸ್ಕಾಂ ಉಪವಿಭಾಗ ಕಚೇರಿಗೆ ಬಿಲ್ ತಿದ್ದುಪಡಿ ಮಾಡಿಸಲು ಹೆಸ್ಕಾಂ ಕಚೇರಿಗೆ ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಈ ಸಂದರ್ಭ ಜನರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೂ ಇಳಿದಿದ್ದು ಹೆಸ್ಕಾಂ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ಕುರಿತಾಗಿ ಅಧಿಕಾರಿಗಳು ಸಮಜಾಯಿಷಿ ನೀಡಿದ್ದು ಸಾಫ್ಟ್‌ವೇರ್ ಸಮಸ್ಯೆಯಿಂದ ಹಳೇ ಬಾಕಿ ಮತ್ತೆ ಬಂದಿದೆ ಎಂದು ಹೇಳಿದ್ದಾರೆ.

    ಧಾರವಾಡದಲ್ಲಿ ಹಣ ಕಟ್ಟಿದ್ದರೂ ಬಾಕಿ ತೋರಿಸುತ್ತಿರುವ ಬಿಲ್! ಜನತೆ ಗರಂ…
    ನೂತನ ಬಿಲ್​ನಲ್ಲಿ ಹಳೆಯ ಬಿಲ್​ನ ಮೊತ್ತ ಬಾಕಿ ಎಂದು ಉಲ್ಲೇಖ​

    ವಿದ್ಯುತ್​ ಬಿಲ್​ ತಿದ್ದುಪಡಿಗಿಲ್ಲ ಹೆಚ್ಚಿನ ಕೌಂಟರ್​!

    ಸಾಫ್ಟ್​ವೇರ್​ ಸಮಸ್ಯೆಯಿಂದಾಗಿ ಬಿಲ್​ನಲ್ಲಿ ದೋಷ ಬಂದಿದ್ದು ಅದನ್ನು ತಿದ್ದುಪಡಿ ಮಾಡಿಸಲು ಜನರು ಹೆಸ್ಕಾಂ ಕಚೇರಿಗೆ ಬರುತ್ತಿದ್ದಾರೆ. ಆದರೆ ನಗರದ ಎಲ್ಲ ಜನರ ಬಿಲ್ ಒಂದೇ ಕಡೆ ತಿದ್ದುಪಡಿ ಮಾಡಲಾಗುತ್ತಿದೆ. ಈ ನಡುವೆ ಕಚೇರಿಯಲ್ಲಿ ಹೆಚ್ಚಿನ ಕೌಂಟರ್​ ಇರದ ಕಾರಣ, ಜನದಟ್ಟಣೆ ಉಂಟಾಗುತ್ತಿದ್ದು ಜನರು ತೊಂದರೆಗೆ ಈಡಾಗಿದ್ದಾರೆ.

    ಧಾರವಾಡದಲ್ಲಿ ಹಣ ಕಟ್ಟಿದ್ದರೂ ಬಾಕಿ ತೋರಿಸುತ್ತಿರುವ ಬಿಲ್! ಜನತೆ ಗರಂ…
    ರವಿ ಮುರ‌್ನಾಳ, ಸುದ್ದಿಗಾರರೊಂದಿಗೆ ನೋವು ತೋಡಿಕೊಂಡ ಸಾರ್ವಜನಿಕ

    ಇದನ್ನೂ ಓದಿ: ವಿದ್ಯುತ್ ಬಿಲ್ ಪಾವತಿಗೆ ಜನರ ಹಿಂದೇಟು

    ಇದೀಗ ಜನರು ಹೆಸ್ಕಾಂ ವಿರುದ್ಧ ಕಿಡಿಕಾರುತ್ತಿದ್ದು, “ಇವರು ಬೇಕಾಬಿಟ್ಟಿಯಾಗಿ ಬಿಲ್ ಕೊಡುತ್ತಿದ್ದಾರೆ. ಅದನ್ನು ತಿದ್ದುಪಡಿ ಮಾಡಿಸಲು ಓಡಾಡಿಸುತ್ತಿದ್ದಾರೆ. ಕಳೆದ ತಿಂಗಳು ತುಂಬಿದ ಹಣವೂ ಬಿಲ್​ಗೆ ಪುನಃ ಅರಿಯರ್ಸ್ ಎಂದು ಸೇರ್ಪಡೆಯಾಗಿದೆ. ಇದರಿಂದ ಮತ್ತೊಮ್ಮೆ ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts