More

    ಮತ್ತೆ ‘ಸಿಂಗಂ’ ಆಗಲು ಅಜಯ್​ ದೇವಗನ್​ ರೆಡಿ; ಮುಂದಿನ ವರ್ಷ ಪ್ರಾರಂಭವಾಗಲಿದೆ ಮೂರನೆಯ ಭಾಗ

    ಮುಂಬೈ: ಮೂರನೆಯ ಭಾಗ ಯಾವಾಗ? ಎಂಬ ಪ್ರಶ್ನೆ ಇಂದು, ನಿನ್ನೆಯದಲ್ಲ. ‘ಸಿಂಗಂ 2’ ಒಂದು ಲೆವೆಲ್​ಗೆ ಹಿಟ್​ರ ಆಗುತ್ತಿದ್ದಂತೆಯೇ, ಇಂಥದ್ದೊಂದು ಪ್ರಶ್ನೆ ಕೇಳಿ ಬಂದಿತ್ತು. ಆದರೆ, ಅಜಯ್​ ದೇವಗನ್​ ಮತ್ತು ನಿರ್ದೇಶಕ ರೋಹಿತ್​ ಶೆಟ್ಟಿ ಇಬ್ಬರೂ ಬೇರೆಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ, ‘ಸಿಂಗಂ 3’ ಪೆಂಡಿಂಗ್​ ಇತ್ತು. ಈಗ ‘ಸಿಂಗಂ’ ಚಿತ್ರದ ಮೂರನೆಯ ಭಾಗ ಶುರುವಾಗುತ್ತಿರುವ ಮುನ್ಸೂಚನೆಯೊಂದು ಸಿಕ್ಕಿದೆ.

    ಇದನ್ನೂ ಓದಿ: ರಮ್ಯಾ ಹುಟ್ಟುಹಬ್ಬಕ್ಕೆ ವಿಶಿಷ್ಟ ಉಡುಗೊರೆ; ಗೋಡೆ ಮೇಲೆ 35 ಅಡಿ ಚಿತ್ರ

    ‘ಸಿಂಗಂ’ ಚಿತ್ರದ ಮೂರನೆಯ ಭಾಗ ಬರುತ್ತದಂತೆ. ಹಾಗಂತ ಒಂದು ಸುದ್ದಿ ಕೇಳಿ ಬರುತ್ತಿದೆ. ಈ ಚಿತ್ರಕ್ಕೆ ‘ಸಿಂಗಂ ಅಗೇನ್​’ ಎಂಬ ಹೆಸರನ್ನು ಇಡಲಾಗಿದ್ದು, ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ‘ಸಿಂಗಂ’ ಚಿತ್ರವು ತಮಿಳಿನ ಅದೇ ಹೆಸರಿನ ಚಿತ್ರದ ರೀಮೇಕ್​ ಆಗಿತ್ತು. ತಮಿಳಿನಲ್ಲಿ ‘ಸಿಂಗಂ 2’ ಬಂದರೂ, ಹಿಂದಿಯಲ್ಲಿ ಅದನ್ನು ರೀಮೇಕ್​ ಮಾಡಲಿಲ್ಲ. ಬದಲಗೆ ‘ಸಿಂಗಂ 2’ ಹೆಸರಿನಲ್ಲಿ ಬೇರೆಯದೇ ಕಥೆಯನ್ನು ಹೇಳಿದರು ರೋಹಿತ್​ ಶೆಟ್ಟಿ. ಇದು ತಕ್ಕ ಮಟ್ಟಿಗೆ ಹಿಟ್​ ಆಯಿತು. ಈಗ ಮೂರನೆಯ ಭಾಗದಲ್ಲಿ ಅವರು ಏನು ಹೇಳಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಮೂಲಗಳ ಪ್ರಕಾರ, ಮೂರನೆಯ ಭಾಗದಲ್ಲಿ ಭಯೋತ್ಪಾದನೆಯ ವಿರುದ್ಧ ಸಿಂಗಂ ಸಮರ ಸಾರಲಿದ್ದಾರಂತೆ.

    ಇದನ್ನೂ ಓದಿ: ದಿಗಂತ್​ ಕಾಲಿಗೆ ಬ್ಯಾಂಡೇಜ್​; ಕುಂಟುತ್ತಲೇ ‘ತಿಮ್ಮಯ್ಯ ಅಂಡ್​ ತಿಮ್ಮಯ್ಯ’ ಚಿತ್ರದ ಪ್ರಚಾರ ಮಾಡುತ್ತಿರುವ ದೂಧ್​ ಪೇಡ

    ಈ ಚಿತ್ರ ಸೆಟ್ಟೇರುವುದಕ್ಕೆ ಇನ್ನೊಂದಿಷ್ಟು ಸಮಯ ಬೇಕು. ಸದ್ಯ ಅಜಯ್​ ದೇವಗನ್​ ‘ಭೋಲಾ’ ಚಿತ್ರದ ಬ್ಯುಸಿಯಲ್ಲಿದ್ದಾರೆ. ಮೊದಲು ಅದು ಮುಗಿಯಬೇಕು. ಆ ನಂತರ ‘ಸಿಂಗಂ 2’ ಶರುವಾಗುವ ಸಾಧ್ಯತೆ ಇದೆ.

    ಯಶ್ ಮುಂದಿನ ಚಿತ್ರಕ್ಕೆ ಮಗಳೇ ನಿರ್ಮಾಪಕಿ? ಐರಾ ಹೆಸರಲ್ಲಿ ನಿರ್ಮಾಣ ಸಂಸ್ಥೆ ಪ್ರಾರಂಭ ಸಾಧ್ಯತೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts