

ಬೆಂಗಳೂರು: ರಮ್ಯಾ ಇತ್ತೀಚೆಗಷ್ಟೇ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬಕ್ಕೆ ಅವರಿಗೆ ಸ್ಯಾಂಡಲ್ವುಡ್ನ ಹಲವು ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದ ಬಾದಲ್ ನಂಜುಂಡಸ್ವಾಮಿ, ರಮ್ಯಾಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ತಮ್ಮ ವಿಶಿಷ್ಟ ಶೈಲಿಯ ಕಲಾಕೃತಿಗಳಿಂದ ಗಮನ ಸೆಳೆಯುವ ಬಾದಲ್, ಈ ಬಾರಿ ರಮ್ಯಾ ಹುಟ್ಟುಹಬ್ಬಕ್ಕೆ ಒಂದು ದೊಡ್ಡ ಪೇಂಟಿಂಗ್ನ್ನು ಉಡುಗೊರೆಯಾಗಿ ನೀಡಿದ್ದಾರೆ. ಯಲಹಂಕ ಸಮೀಪದ ಒಂದು ಕಟ್ಟಡದ ಗೋಡೆಯ ಮೇಲೆ ಬಾದಲ್, ರಮ್ಯಾ ಅವರ 35 ಅಡಿ ಉದ್ದದ ಚಿತ್ರ ಬಿಡಿಸಿದ್ದಾರೆ. ರಮ್ಯಾ ಅವರಿಗೆ 'ಸ್ಯಾಂಡಲ್ವುಡ್ ಕ್ವೀನ್' ಎಂಬ ಬಿರುದಿರುವುದು ಎಲ್ಲರಿಗೂ ಗೊತ್ತೇ ಇದೆ. ಇದನ್ನೇ ಥೀಮ್ ಆಗಿಟ್ಟುಕೊಂಡಿರುವ ಅವರು, ಇಸ್ಟಪೀಟ್ ಎಲೆ ಮೇಲೆ ರಮ್ಯಾ ಅವರ ತಲೆ ಮೇಲೆ ಕಿರೀಟ ಇಟ್ಟು ಅವರನ್ನು ರಾಣಿಯನ್ನಾಗಿ ಚಿತ್ರಿಸಿದ್ದಾರೆ. ಈ ಪೇಂಟಿಂಗ್ ರೂಪುಗೊಂಡಿದ್ದು ಹೇಗೆ ಎಂದು ಬಾದಲ್, ಸೋಷಿಯಲ್ ಮೀಡಿಯಾದಲ್ಲಿ ಒಂದು ಮೇಕಿಂಗ್ ವಿಡಿಯೋ ಸಹ ಹಂಚಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ನಟಿಯೊಬ್ಬರ ಚಿತ್ರ ಇಷ್ಟು ಬೃಹತ್ ಆಗಿ ಮೂಡಿ ಬಂದಿರುವುದು ಇದೇ ಮೊದಲು ಎನ್ನುವುದು ವಿಶೇಷ. ಈ ಪೇಂಟಿಂಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ರಮ್ಯಾ ಸಹ ಬಾದಲ್ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇನ್ನು, ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಸಾಕಷ್ಟು ವಥರಲ್ ಆಗುತ್ತಿದೆ.
ಇನ್ನು, ರಮ್ಯಾ ಈ ಬಾರಿಯ ಹುಟ್ಟುಹಬ್ಬವನ್ನು ಜಪಾನ್ನಲ್ಲಿ ಆಚರಿಸಿಕೊಂಡಿದ್ದಾರೆ. ಜಪಾನ್ನ ಫ್ಲೋಟಿಂಗ್ ಫ್ಲವರ್ ಗಾರ್ಡ್ನ್ನಲ್ಲಿ ಕುಳಿತಿರುವ ತಮ್ಮ ಒಂದಿಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ರಮ್ಯಾ, ತಾವು 40ರ ಕ್ಲಬ್ ಸೇರಿದ್ದು, ಈ ಸಂದರ್ಭದಲ್ಲಿ ತಮಗೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ್ದಾರೆ.