More

    ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಹೇಳಿದ್ದೆಲ್ಲ ಸುಳ್ಳು ಎಂದು ಸಾಬೀತು ಮಾಡಿದರೆ ಚಿತ್ರರಂಗ ಬಿಟ್ಟುಬಿಡುತ್ತೇನೆ; ನಡಾವ್​ಗೆ ವಿವೇಕ್​ ಚಾಲೆಂಜ್​

    ಮುಂಬೈ: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಅಸಭ್ಯವಾಗಿದೆ ಎಂದು ಇಸ್ರೇಲಿ ನಿರ್ಮಾಪಕ ನಾಡವ್ ಲ್ಯಾಪಿಡ್ ಹೇಳಿದ್ದನ್ನು ಸವಾಲಾಗಿ ಸ್ವೀಕರಿಸಿರುವ ಆ ಚಿತ್ರದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ, ಈಗ ಅದರ ಮುಂದುವರೆದ ಭಾಗವನ್ನು ನಿರ್ದೇಶಿಸಲು ತಯಾರಿ ನಡೆಸಿದ್ದಾರೆ. ಮೊದಲ ಹಂತವಾಗಿ, ‘ದಿ ಕಾಶ್ಮೀರ್​ ಫೈಲ್ಸ್​ – ಅನ್​ರಿಪೋರ್ಟೆಡ್​’ ಎಂಬ ಚಿತ್ರವ್ನು ಘೋಷಿಸಿರುವ ಅವರು, ಆ ಚಿತ್ರವನ್ನು ಇನ್ನೊಂದು ವರ್ಷದಲ್ಲಿ ತೆರೆಗೆ ತರುವುದಾಗಿ ಹೇಳಿದ್ದಾರೆ.

    ಇತ್ತೀಚೆಗಷ್ಟೇ ಮುಕ್ತಾಯವಾದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ (IFFI) ಸ್ಪರ್ಧಾತ್ಮಕ ಚಿತ್ರ ವಿಭಾಗದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಪ್ರದರ್ಶನಗೊಂಡಿತ್ತು. ಚಿತ್ರೋತ್ಸವದ ಮುಕ್ತಾಯದ ಸಮಾರಂಭದಲ್ಲಿ ಮಾತನಾಡಿದ ಇಸ್ರೇಲಿ ನಿರ್ಮಾಪಕ ಮತ್ತು ಸ್ಪರ್ಧಾತ್ಮಕ ವಿಭಾಗದ ಜ್ಯೂರಿ ಮುಖ್ಯಸ್ಥರಾದ ನಾಡವ್ ಲ್ಯಾಪಿಡ್, ಚಿತ್ರ ಅಸಭ್ಯವಷ್ಟೇ ಅಲ್ಲ, ಬಹಳ ಕೆಟ್ಟದಾಗಿತ್ತು ಎಂದು ಹೇಳಿದ್ದರು.

    ಇದನ್ನೂ ಓದಿ: ಹೆಚ್ಚಿನ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ಸಮಂತಾ ಶಿಫ್ಟ್! ಈ ಸುದ್ದಿ ನಿಜವೇ? ಆಪ್ತ ಮೂಲಗಳು ಹೇಳುವುದೇ ಬೇರೆ

    ಲ್ಯಾಪಿಡ್​ ಅವರ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ನಟ ಅನುಪಂ ಖೇರ್​, ದರ್ಶನ್​ ಕುಮಾರ್ ಮುಂತಾದವರು ಲ್ಯಾಪಿಡ್​ ಅವರ ಮಾತುಗಳನ್ನು ಖಂಡಿಸಿದ್ದರು. ಇನ್ನಿ, ಭಾರತದಲ್ಲಿ ಇಸ್ರೇಲ್​ ರಾಯಭಾರಿಯಾಗಿರುವ ನವೋರ್​ ಗಿಲಾನ್​, ಲ್ಯಾಪಿಡ್​ಗೆ ಮೊದಲು ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು.

    ”ದಿ ಕಾಶ್ಮೀರ್​ ಫೈಲ್ಸ್​’ ಚಿತ್ರವನ್ನು ನಾವೇನೋ ಊಹಿಸಿ ಮಾಡಿದ್ದಲ್ಲ. ನಾವು ಒಂದು ಚಿತ್ರ ಮಾಡಿದ್ದೇವೆ ಅಷ್ಟೇ. ಆದರೆ, ಹೇಳದಿರುವ ಅದೆಷ್ಟೋ ಕಥೆಗಳು ಮತ್ತು ಸತ್ಯಗಳು ಇವೆ. ನಾವು ಸುಲಭವಾಗಿ 10 ಸಿನಿಮಾಗಳನ್ನು ಮಾಡಬಹುದಿತ್ತು. ಆದರೆ, ಒಂದು ಚಿತ್ರ ಮಾತ್ರ ಮಾಡಿದೆವು. ಇಷ್ಟೆಲ್ಲಾ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ಇನ್ನಷ್ಟು ಸತ್ಯಗಳನ್ನು ಹೇಳಬೇಕು ಎಂದು ತೀರ್ಮಾನಿಸಿದ್ದೇನೆ. ಕಾಶ್ಮೀರದಲ್ಲಿ ನಡೆದ ಸತ್ಯ ಘಟನೆಗಳನ್ನಾಧರಿಸಿ ‘ದಿ ಕಾಶ್ಮೀರ್​ ಫೈಲ್ಸ್​ – ಅನ್​ರಿಪೋರ್ಟೆಡ್​’ ಎಂಬ ಚಿತ್ರವನ್ನು ನಿರ್ದೇಶಿಸುತ್ತೇನೆ. ಆ ಚಿತ್ರ ಇನ್ನೊಂದು ವರ್ಷದಲ್ಲಿ ತೆರೆಗೆ ಬರಲಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಸನ್ನಿ ಲಿಯೋನ್​ ಆಯ್ತು; ಈಗ ಉಪೇಂದ್ರ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಅಭಿನಯ?

    ಕಾಶ್ಮೀರದಲ್ಲಿ ನಡೆದ ಸತ್ಯ ಘಟನೆಗಳನ್ನು ಚಿತ್ರದ ರೂಪದಲ್ಲಿ ಹೊರತರಬೇಕೋ ಅಥವಾ ವೆಬ್​ ಸೀರೀಸ್​ ಮಾದರಿಯಲ್ಲಿ ತರಬೇಕೋ ಎಂದು ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿರುವ ವಿವೇಕ್​, ‘ಎಲ್ಲ ಸ್ಯವನ್ನೂ ಬಹಿರಂಗಗೊಳಿಸದೆ ಸುಮ್ಮನಿರುವುದಿಲ್ಲ. ಇದು ಈಗ ಕಲೆಯನ್ನು ಮೀರಿ ದೇಶದ ಘನೆತೆಯ ವಿಚಾರವಾಗಿದೆ. ಹಾಗಾಗಿ, ಕಾಶ್ಮೀರದಲ್ಲಿ ಏನೆಲ್ಲ ಆಯಿತು ಎಂಬುದು ನನಗೆ ಗೊತ್ತಿದೆಯೋ, ಏನೆಲ್ಲ ಸಾಕ್ಷ್ಯಗಳಿವೆಯೋ, ಅವೆಲ್ಲವನ್ನೂ ಜನರ ಮುಂದಿಡುತ್ತೇನೆ. ಈ ಮೂಲಕ ಅಲ್ಲೇನಾಯಿತು ಎಂಬ ಸತ್ಯ ಎಲ್ಲರಿಗೂ ಗೊತ್ತಾಗಲಿ’ ಎಂದು ವಿವೇಕ್ ಹೇಳಿದ್ದಾರೆ.

    ಇನ್ನು, ಇದೆಲ್ಲ ಸುಳ್ಳು ಎಂದು ಪ್ರೂವ್​ ಮಾಡಿದರೆ ನಿರ್ದೇಶನವನ್ನೇ ಬಿಟ್ಟುಬಿಡುತ್ತೇನೆ ಎಂದು ವಿವೇಕ್​ ಚಾಲೆಂಜ್​ ಮಾಡಿದ್ದಾರೆ. ‘ಈ ಅರ್ಬನ್​ ನಕ್ಸಲ್​ಗಳು ಮತ್ತು ಇಸ್ತ್ರೇಲಿನ ನಿರ್ಮಾಪಕ ಏನಾದರೂ, ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದಲ್ಲಿ ನಾನು ಹೇಳಿದ್ದು ಸುಳ್ಳು ಅಥವಾ ಆ ಚಿತ್ರದಲ್ಲಿ ಒಂದು ಶಾಟ್​, ಸಂಭಾಷಣೆ ಅಥವಾ ಘಟನೆ ಸುಳ್ಳು ಅಂತ ಪ್ರೂವ್​ ಮಾಡಿದರೆ, ನಾನು ಚಿತ್ರರಂಗವನ್ನೇ ಬಿಟ್ಟುಬಿಡುತ್ತೇನೆ’ ಎಂದು ಸವಾಲು ಹಾಕಿದ್ದಾರೆ.

    ಶೀಘ್ರದಲ್ಲೇ ಅಭಿಷೇಕ್​ ಮದ್ವೆ ಫಿಕ್ಸ್​ ಎನ್ನುತ್ತಿವೆ ಆಪ್ತ ಮೂಲಗಳು: ಇವರೇ ನೋಡಿ ಅಭಿ ಮನಸ್ಸು ಗೆದ್ದ ಚೆಲುವೆ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts